ವಿಜಯಪುರ: ಕೋವಿಡ್ ರೋಗಿಗಳಿಗೆ ನೀಡುವ ರೆಮಿಡಿಸೀವಿರ್ ಲಸಿಕೆಯ ಅಕ್ರಮವಾಗಿ ಪಡೆದು ಕಾಳಸಂತೆ ಮಾರಾಟದಲ್ಲಿ ತೊಡಗಿದ್ದ ಖಾಸಗಿ ಆಸ್ಪತ್ರೆಯ ಇಬ್ಬರು ಸ್ಟಾಪ್ ನರ್ಸ್ ಗಳಲ್ಲಿ ಓರ್ವ ಸ್ಟಾಪ್ ನರ್ಸ್ ಪತಿಯನ್ನೂ ಪೊಲೀಸರು ಬಂಧಿಸಿದ್ದಾರೆ.
ನಗರದ ಧನ್ವಂತರಿ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿರುವ ರೂಪಾಲಿ ಹಲಗಣಿ, ಆಕೆಯ ಪತಿ ರಾಕೇಶ ಹಣಮಂತ ಹಲಗಣಿ, ಇದೇ ಆಸ್ಪತ್ರೆಯಲ್ಲಿ ಸ್ಪಾಟ್ ನರ್ಸ್ ಆಗಿರುವ ಶೋಭಾ ಭೀಮಣ್ಣ ತಳವಾರ ಬಂಧಿತ ಆರೋಪಿಗಳು.
ಇದನ್ನೂ ಓದಿ : ವಿಜಯಪುರ : ಕೋವಿಡ್ ಸೋಂಕಿಗೆ ನಾಲ್ವರು ಬಲಿ
ರೆಮಿಡಿಸೀವಿರ್ ಲಸಿಕೆ ಅಕ್ರಮವಾಗಿ 22 ಸಾವಿರ ರೂ.ಗೆ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ ಲಸಿಕೆ ಜಿಲ್ಲಾ ನೋಡಲ್ ಅಧಿಕಾರಿ ಡಾ.ಔದ್ರಾಮ್, ಗಾಂಧಿ ಚೌಕ ಪೊಲೀಸ್ ಠಾಣೆ ಸಿಪಿಐ ರವೀಂದ್ರ ನಾಯ್ಕೋಡಿ, ಎಸ್ಐ ಶರಣಗೌಡ ಗೌಡರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರ ತಂಡ ಅಕ್ರಮವಾಗಿ ಹೊಂದಿದ್ದ ಎರಡು ರೆಮಿಡಿಸೀವಿರ್ ಲಸಿಕೆ ಸಹಿತ ಮೂವರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮೂವರೂ ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.