Advertisement
ಇನ್ನು ಆರಂಭಿಕ ಹಂತದ ಕೋವಿಡ್ ಸೋಂಕು ಹೊಂದಿರುವವರಿಗೆ ಎಚ್‌ಸಿಕ್ಯು ನೀಡಬಹುದು ಎಂದೂ ಹೇಳಿದೆ. ಇದೇ ವೇಳೆ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಟೋಸಿಲಿ ಜುಮ್ಯಾಬ್ ಔಷಧಕ್ಕೂ ಸಚಿವಾಲಯ ಅನುಮತಿ ನೀಡಿದೆ. ಐಸಿಯು ಚಿಕಿತ್ಸೆ ಅಗತ್ಯವಿರುವ ತೀವ್ರ ಸ್ವರೂಪದ ಪ್ರಕರಣ ಗಳಲ್ಲಿ ಅಜಿಥ್ರೋಮೈಸಿನ್ ಜೊತೆ ಎಚ್‌ಸಿಕ್ಯು ಬಳಸಬಾರದೆಂದು ಕೋವಿಡ್ ವೈರಸ್ ಸೋಂಕಿನ ಪರಿಷ್ಕೃತ ವೈದ್ಯಕೀಯ ನಿರ್ವಹಣೆ ಮಾರ್ಗ ಸೂಚಿಯಲ್ಲಿ ಸಚಿವಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಆ್ಯಂಟಿ ವೈರಲ್ ಔಷಧ ರೆಮ್‌ಡೆಸಿವಿಯರ್‌ನ ಉತ್ಪಾದನೆಯನ್ನು ಭಾರತ ಶೀಘ್ರದಲ್ಲಿಯೇ ಸ್ಥಳೀಯವಾಗಿ ಆರಂಭಿಸಲಿದೆ. ಪ್ರಸ್ತುತ ಪ್ರಯೋಗ ಹಂತದಲ್ಲಿರುವ ರೆಮ್‌ಡೆಸಿವಿಯರ್ ಕೋವಿಡ್ ಸೋಂಕನ್ನು ತಡೆಗಟ್ಟುವಲ್ಲಿ ಸಾಕಷ್ಟು ಭರವಸೆ ಮೂಡಿಸಿದೆ. “ರೆಮ್‌ಡೆಸಿವಿಯರ್ ಅನ್ನು ದೇಶೀಯವಾಗಿ ಉತ್ಪಾದಿಸಲು ಮತ್ತು ಮಾರಾಟ ಮಾಡಲು 4 ಪ್ರತಿಷ್ಠಿತ ಫಾರ್ಮಾ ಕಂಪನಿಗಳು ಮುಂದೆ ಬಂದಿವೆ. ಅವರ ಅರ್ಜಿಗಳನ್ನು ಹಗಲು ರಾತ್ರಿ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ’ ಎಂದು ಸರಕಾರದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.