Advertisement

ರೆಮ್‌ಡಿಸಿವಿರ್‌, ಫಾವಿಪಿರಾವಿರ್‌ ಗೇಮ್‌ ಚೇಂಜರ್‌ಗಳಲ್ಲ!

10:00 AM Jun 24, 2020 | mahesh |

ಹೊಸದಿಲ್ಲಿ: ಪ್ರಸ್ತುತ ಭಾರತದಲ್ಲಿ ರೆಮ್‌ಡಿಸಿವಿರ್‌, ಫಾವಿಪಿರಾವಿರ್‌ ಔಷಧಗಳ ಸದ್ದು ಜೋರಾಗಿದೆ. ಆದರೆ, ಇವೆರಡೂ ಆ್ಯಂಟಿವೈರಲ್‌ ಔಷಧಗಳಾದರೂ ಕೂಡ “ಗೇಮ್‌ ಚೇಂಜರ್‌’ ಅಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಡಿಸಿಜಿಐನಿಂದ ಇವೆರಡೂ ಔಷಧಗಳು ಅನುಮೋದನೆ ಪಡೆದಿವೆ ನಿಜ. ಆದರೆ ಕೊರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿ ಔಷಧವನ್ನು ಇನ್ನೂ ಯಾರೂ ಕಂಡುಹಿಡಿದಿಲ್ಲ. ಹೀಗಾಗಿ ಇದುವರೆಗಿನ ಯಾವುದೇ ಔಷಧಗಳನ್ನು ಗೇಮ್‌ ಚೇಂಜರ್‌ ಎನ್ನಲಾಗದು’ ಎಂದು ಏಮ್ಸ್‌ನ ಸೆಂಟರ್‌ ಫಾರ್‌ ಕಮ್ಯುನಿಸಿಟಿ ಮೆಡಿಸಿನ್‌ ವಿಭಾಗದ ಮುಖ್ಯಸ್ಥ ಡಾ| ಸಂಜಯ್‌ ರಾಯ್‌ಸ್ಪಷ್ಟಪಡಿಸಿದ್ದಾರೆ. ದಿಲ್ಲಿಯ ಫೋರ್ಟೀಸ್‌ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ| ವಿಕಾಸ ಮೌರ್ಯ ಕೂಡ ಈ ಮಾತಿಗೆ ಧ್ವನಿಗೂಡಿಸಿದ್ದಾರೆ. “ರೆಮ್‌ಡಿಸಿವಿರ್‌, ಫಾವಿಪಿರಾವಿರ್‌ಗಳನ್ನು ತೆಗೆದುಕೊಳ್ಳುವ ಸೋಂಕಿತರೆಲ್ಲರೂ ಚೇತರಿಸಿಕೊಳ್ಳುತ್ತಾರೆ ಎಂದು ಹೇಳಲಾಗದು’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next