Advertisement
– 1966ರಲ್ಲಿ ಪತನಗೊಂಡ ಏರ್‌ಇಂಡಿಯಾ ವಿಮಾನದ ಎಂಜಿನ್ ಹಾಗೂ ಪ್ರಯಾಣಿಕರ ದೇಹದ ಭಾಗಗಳು ಎಂಬ ಶಂಕೆ
‘ಮೌಂಟ್ ಬ್ಲಾಂಕ್’ ಪರ್ವತಗಳಲ್ಲಿ ಸಂಭವಿಸಿದ ವಿಮಾನ ದುರಂತಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಡೇನಿಯಲ್ ರೋಶ್ ಎಂಬ ವ್ಯಕ್ತಿಗೆ ಈ ಭಾಗಗಳು ದೊರೆತಿವೆ. ಜೊತೆಗೆ ಒಂದು ವಿಮಾನದ ಎಂಜಿನ್ ಕೂಡ ಇಲ್ಲಿ ಸಿಕ್ಕಿದೆ. ಇಲ್ಲಿ ಸಿಕ್ಕಿರುವಂಥ ಕೈ ಹಾಗೂ ಕಾಲಿನ ಭಾಗಗಳನ್ನು ವೈದ್ಯಕೀಯ ಕೇಂದ್ರದಲ್ಲಿ ಪರೀಕ್ಷಿಸಿದಾಗ, ಇವು ಇಬ್ಬರು ಬೇರೆ ಬೇರೆ ವ್ಯಕ್ತಿಗಳ ಅಂಗಾಂಗಗಳು ಎಂದು ತಿಳಿದು ಬಂದಿದೆ.
Related Articles
1966ರ ಜನವರಿಯಲ್ಲಿ ಮುಂಬಯಿಯಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್‌ಇಂಡಿಯಾ ಬೋಯಿಂಗ್ 707 ಮೌಂಟ್ ಬ್ಲಾಂಕ್ ಪರ್ವತ ಪ್ರದೇಶದಲ್ಲಿ ಪತನವಾಗಿತ್ತು. ಆ ಸಮಯದಲ್ಲಿ ವಿಮಾನದಲ್ಲಿ 117 ಮಂದಿ ಪ್ರಯಾಣಿಕರಿದ್ದರು. ಅದಕ್ಕೂ ಮೊದಲು, ಅಂದರೆ 1950ರಲ್ಲಿ ಇದೇ ಪರ್ವತದಲ್ಲಿ ಮತ್ತೂಂದು ಏರ್‌ಇಂಡಿಯಾ ವಿಮಾನ ಪತನವಾಗಿ, 48 ಪ್ರಯಾಣಿಕರು ಸಾವಿಗೀಡಾಗಿದ್ದರು. ಈಗ ದೊರೆತಿರುವ ಮೃತದೇಹಗಳ ಭಾಗಗಳು 1966ರಲ್ಲಿ ಆದ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರದ್ದು ಎಂದು ರೋಶ್ ಅಭಿಪ್ರಾಯಪಟ್ಟಿದ್ದಾರೆ. ದೇಹದ ಭಾಗಗಳು ಪತ್ತೆಯಾದೊಡನೆ ರೋಶ್ ಅವರು ಸ್ಥಳೀಯ ತುರ್ತು ಸೇವಾ ಸಂಸ್ಥೆಯನ್ನು ಸಂಪರ್ಕಿಸಿದ್ದು, ಹೆಲಿಕಾಪ್ಟರ್ ಮೂಲಕ ಅವುಗಳನ್ನು ಸಾಗಿಸಿ, ತಜ್ಞರು ಪರಿಶೀಲನೆ ನಡೆಸಿದ್ದಾರೆ.
Advertisement
ಇತ್ತೀಚೆಗಷ್ಟೇ ಹಿಮಗಲ್ಲಿನ ಪರ್ವತಶ್ರೇಣಿಯಲ್ಲಿ ಅಕ್ಕಪಕ್ಕವೇ ದಂಪತಿಯ ಮೃತದೇಹಗಳು ಪತ್ತೆಯಾಗಿದ್ದವು. ಡಿಎನ್‌ಎ ಪರೀಕ್ಷೆ ನಡೆಸಿದಾಗ, ಅವು 75 ವರ್ಷಗಳ ಹಿಂದೆ ಮೃತಪಟ್ಟ ಮಾರ್ಸೆಲಿನ್ ಡ್ಯುಮೋಲಿನ್ ಮತ್ತು ಪತ್ನಿ ಫ್ರಾನ್ಸಿನ್ ಅವರ ಮೃತದೇಹ ಎಂಬುದು ದೃಢಪಟ್ಟಿತ್ತು.