Advertisement
ಮಾರ್ಚ್ ಆರಂಭದಲ್ಲಿ ನ್ಯಾ| ಎ.ಎನ್. ವೇಣುಗೋಪಾಲ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಸರಕಾರಿ ಶಾಲಾ ಆವರಣಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿತ್ತು.
Related Articles
ರಾಜ್ಯದಲ್ಲಿ ಒಟ್ಟು 65,911 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ 44,312 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ಇನ್ನುಳಿದ 21,599 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. 38,646 ಅಂಗನವಾಡಿ ಕೇಂದ್ರಗಳಲ್ಲಿ ಸ್ವಂತ ಅಡುಗೆ ಕೋಣೆಗಳಿವೆ. 8,640 ಕೇಂದ್ರಗಳಲ್ಲಿ ಇತರ ಕಟ್ಟಡಗಳಲ್ಲಿ ಅಡುಗೆ ಕೋಣೆ ಮಾಡಿಕೊಳ್ಳಲಾಗಿದೆ. 37,751 ಕೇಂದ್ರ ಗಳಲ್ಲಿ ಸ್ವಂತ ಶೌಚಾಲಯ ಇದ್ದು, 8,716 ಕೇಂದ್ರಗಳಲ್ಲಿ ಸ್ವಂತ ಶೌಚಾಲಯ ಇಲ್ಲ.
Advertisement
ಸ್ವಂತ ಕಟ್ಟಡವಿಲ್ಲದ ಅಂಗನವಾಡಿಗಳನ್ನು ಸರಕಾರಿ ಶಾಲೆಯ ಕೊಠಡಿಗಳಿಗೆ ಸ್ಥಳಾಂತರಿಸಿದರೆ ಅಂಗನವಾಡಿಗಳಿಗೆ ಮೂಲ ಸೌಲಭ್ಯ ದೊರಕುವ ಜತೆಗೆ ಮಕ್ಕಳಿಗೆ ಮುಂದಿನ ತರಗತಿಗೆ ಹೋಗಲು ಅನುಕೂಲವಾಗುತ್ತದೆ ಎಂಬ ಯೋಚನೆ ಸರಕಾರದ್ದು.
ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಕೊಠಡಿಗಳು ಲಭ್ಯವಿರುವ ಹತ್ತಿರದ ಸರಕಾರಿ ಶಾಲೆಗಳಿಗೆ ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಇಲಾಖೆ ಜಂಟಿ ಸಮೀಕ್ಷೆ ಮಾಡಲು ಸೂಚಿಸಲಾಗಿದೆ.-ಕೆ.ಎಚ್. ವಿಜಯಕುಮಾರ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಾವ ಸ್ಥಳದಲ್ಲಿದ್ದರೆ ಮಕ್ಕಳಿಗೆ ಅನುಕೂಲ ಎಂದು ಸಮೀಕ್ಷೆ ಮಾಡಿ ಬಾಡಿಗೆ ಕಟ್ಟಡ ಪಡೆದು ಅಂಗನವಾಡಿ ಕೇಂದ್ರ ಗಳನ್ನು ತೆರೆಯಲಾಗಿದೆ. ಈಗ ಕೇಂದ್ರ ಗಳನ್ನು ಸರಕಾರಿ ಶಾಲೆಗಳಿಗೆ ಸ್ಥಳಾಂ ತರಿ ಸಿದರೆ ಚಿಣ್ಣರ ಕಲಿಕೆಗೆ ತೊಂದರೆ ಯಾಗಲಿದೆ.
– ಹೊನ್ನಪ್ಪ ಮರೆಮ್ಮನವರ, ಉಪಾಧ್ಯಕ್ಷರು, ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಶನ್ -ಎಚ್.ಕೆ. ನಟರಾಜ