Advertisement

ನಗರಸಭೆ ಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರಹ್ಮಗಿರಿಗೆ ಸ್ಥಳಾಂತರ

01:35 AM Jan 21, 2020 | Sriram |

ಉಡುಪಿ: ನಗರಸಭೆ ಪಕ್ಕದಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವು (ಪಿಎಚ್‌ಸಿ) ಪ್ರವಾಸಿ ಬಂಗ್ಲೆ ಎದುರಿನ ಜಿ.ಪಂ. ವಸತಿ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಐದು ತಿಂಗಳಿನಿಂದ ಇಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು, ಹಲವಾರು ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.

Advertisement

ಟಿ.ಬಿ., ಮಲೇರಿಯಾ ತಪಾಸಣೆ, ಚಿಕಿತ್ಸೆ ಸೇರಿದಂತೆ ಬಿ.ಪಿ., ಶುಗರ್‌ನಂತಹ ಸಮಸ್ಯೆಗಳ ತಪಾಸಣೆ, ಡೆಂಗ್ಯೂ ರೋಗದ ಜಾಗೃತಿ, ಸೊಳ್ಳೆ ಪರದೆ ವಿತರಣೆ ಮತ್ತು ಕೇಂದ್ರದ ನೀತಿಗಳ ಪ್ರಕಾರ ಪ್ರತಿ ತಿಂಗಳಿಗೆ ಒಂದರಂತೆ ಆರೋಗ್ಯ ಶಿಬಿರಗಳನ್ನು ನಗರದ ಒಳಪ್ರದೇಶದಲ್ಲಿ ನಡೆಸುವ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಮಹಿಳೆಯರೇ ಅಧಿಕ
ಅಂಕಿ-ಅಂಶಗಳ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವವರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ. 2018ರಲ್ಲಿ 3033 ಮಂದಿ ಮಹಿಳೆಯರು ಹಾಗೂ 2019ರಲ್ಲಿ 2411 ಮಂದಿ ಮಹಿಳೆಯರು ಭೇಟಿ ನೀಡಿದ್ದಾರೆ.

ಹಲವಾರು ಕಾರ್ಯಕ್ರಮ
ಪ್ರಾಥಮಿಕ ಆರೋಗ್ಯ ಕೇಂದ್ರವು ಸುಸಜ್ಜಿತ ಕಟ್ಟಡವನ್ನು ಒಳಗೊಂಡಿದೆ. ಕೋಣೆಗಳೊಂದಿಗೆ ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಂಡಿರುವ ಜಿಲ್ಲಾ ಪ್ರಾ.ಆರೋಗ್ಯ ಕೇಂದ್ರವು ಪ್ರತೀ ತಿಂಗಳ 9ನೇ ತಾರೀಕಿನಂದು ಗರ್ಭಿಣಿಯರ ತಪಾಸಣೆ, 10ರಂದು ಕೆಎಂಸಿಯ ಎನ್‌ಜಿಒಗಳಿಂದ ಅರ್ಧದಿನ ಕಣ್ಣಿನ ತಪಾಸಣೆ ಹಾಗೂ ಹೊಸ ಲೆನ್ಸ್‌ ಸೇರ್ಪಡೆ ಸಲಹೆ, ಉಚಿತ ಆಪರೇಷನ್‌ ನಡೆಸುತ್ತಿದೆ. ಪ್ರತಿ ಗುರುವಾರ ಮಕ್ಕಳಿಗೆ ಲಸಿಕೆ ಕಾರ್ಯಕ್ರಮ, ಜಂತು ಹುಳು ಮದ್ದು ಸೇವೆಯನ್ನು ಒದಗಿಸುತ್ತಿದೆ.

ಸುಸಜ್ಜಿತ ಕೊಠಡಿಗಳು
ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಅನುಕೂಲಕರವಾಗುವಂತೆ ಆಸನದ ವ್ಯವಸ್ಥೆಯನ್ನು ಒಳಗೊಂಡಿದೆ. ಒಟ್ಟು 6 ಕೋಣೆಗಳಲ್ಲಿ 1 ವೈದ್ಯಾಧಿಕಾರಿಗೆ, 1 ಹಾಲ್‌, 1 ಔಟ್‌ ಟ್ರೀಟ್‌ಮೆಂಟ್‌ ರೂಮ್‌, ಮಾಳಿಗೆಯಲ್ಲಿ ಫಿಲ್ಡ್‌ ಸ್ಟಾಫ್ಗಳಿಗೆ ಒಂದು ಕೊಠಡಿ, ಒಂದು ಲ್ಯಾಬ್‌ ಸೇರಿ ಒಟ್ಟು ಆರು ರೂಮ್‌ಗಳನ್ನು ಹೊಂದಿದೆ.

Advertisement

ಸಿಬಂದಿ1 ವೈದ್ಯಾಧಿಕಾರಿ, 2 ಮಂದಿ ಸ್ಟಾಫ್ ನರ್ಸ್‌, 1 ಔಷಧಿ ವಿತರಕರು 1 ಪ್ರಯೋಗಾಲಯದ ಸಿಬಂದಿ, 8 ಮಂದಿ ಫಿಲ್ಡರೇಟರ್‌ (ಆರೋಗ್ಯ ಕಾರ್ಯಕರ್ತೆಯರು), 1 ಕ್ಲರ್ಕ್‌, 1 ಕೆಲಸದವರು ಸೇರಿ ಒಟ್ಟು 15 ಮಂದಿ ಸಿಬಂದಿ ಶ್ರಮಿಸುತ್ತಿದ್ದಾರೆ.

ಆರೋಗ್ಯ ಕ್ಯಾಂಪ್‌
ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲ ಕಾರ್ಯಕ್ರಮಗಳು,ಆರೋಗ್ಯ ಸೇವೆಗಳು ಲಭ್ಯವಿದ್ದು, ಹೊಸಹೊಸ ಆರೋಗ್ಯ ಸಂಬಂಧಿ ಮಾಹಿತಿಗಳನ್ನು, ಮಲೇರಿಯಾ ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಜತೆಜತೆ ಸೊಳ್ಳೆ ಪರದೆಗಳನ್ನು ನೀಡುವ ಕೆಲಸ ಸಾಗುತ್ತಿದೆ. ತಿಂಗಳಿಗೊಂದು ಆರೋಗ್ಯ ಕ್ಯಾಂಪ್‌ಗ್ಳನ್ನು ಹಮ್ಮಿಕೊಳ್ಳಲಾಗುತ್ತಿದೆ.
-ಡಾ| ಹೇಮಂತ್‌, ವೈದ್ಯಾಧಿಕಾರಿ

ಮನೆಮನೆಗೆ ತೆರಳಿ ಮಾಹಿತಿ
ಕೇಂದ್ರದ ಇಂದ್ರ ಧನುಷ್‌ ಕಾರ್ಯಕ್ರಮದ ಮೂಲಕ ಮಕ್ಕಳ ಲಸಿಕೆ ಕಾರ್ಯಕ್ರಮದಲ್ಲಿ ಬಿಟ್ಟು ಹೋಗಿರುವ ಮಕ್ಕಳನ್ನು ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಲಸಿಕೆ ಹಾಕಲಾಗುತ್ತದೆ. ಡೆಂಗ್ಯೂ ನಿಯಂತ್ರಣದ ಉದ್ದೇಶದಿಂದದಲೂ ಜಾಗೃತಿ ಮತ್ತು ದಾಖಲೆ ನೀಡುವ ಕೆಲಸ ನಡೆಯುತ್ತಿದೆ. ಪರಿಸರ ಮತ್ತು ವೈಯಕ್ತಿಕ ಸ್ವತ್ಛತೆ, ಶುದ್ಧ ಕುಡಿಯುವ ನೀರಿನ ಬಗ್ಗೆ ಜಾಗೃತಿ, ಪೌಷ್ಟಿಕ ಆಹಾರ ಮತ್ತು ಸಣ್ಣ ಪುಟ್ಟ ರೋಗ-ರುಜಿನಗಳಿಗೆ ಚಿಕಿತ್ಸೆಗಳು ಲಭ್ಯವಿವೆ.

– ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next