Advertisement

ಲೋಕಾಪುರ ಗ್ರಂಥಾಲಯಕ್ಕೆ ಸ್ಥಳಾಂತರ ಸಮಸ್ಯೆ

12:55 PM Nov 01, 2019 | Team Udayavani |

ಲೋಕಾಪುರ: ಗ್ರಾಮದಲ್ಲಿರುವ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡ ವ್ಯವಸ್ಥೆಯಿಲ್ಲ. ಹಲವು ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದು, ನಿರ್ದಿಷ್ಟ ಕಟ್ಟಡ ಗ್ರಂಥಾಲಯಕ್ಕೆ ಸಿಗುತ್ತಿಲ್ಲ, ಇದರಿಂದ ಓದುಗರಿಗೆ ಸಮಸ್ಯೆಯಾಗಿದೆ.

Advertisement

ಸದ್ಯ ತರಕಾರಿ ಮಾರ್ಕೆಟ್‌ ಹತ್ತಿರ ಇರುವ ಹಳೆ ಅಂಗನವಾಡಿಯಲ್ಲಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಗ್ರಂಥಾಲಯದ ಮೇಲ್ಛಾವಣಿ ಪತ್ರಾಸ್‌ ಹೊಂದಿದ್ದು, ಮಳೆ ಬಂದರೆ ಸೋರುತ್ತದೆ. ತರಕಾರಿ ಮಾರುಕಟ್ಟೆಯಲ್ಲಿ ಗ್ರಂಥಾಲಯ ಇರುವುದರಿಂದ ದನಕರುಗಳ ಕಾಟ, ಸಂತೆ ಗದ್ದಲ ಓದುಗರಿಗೆ ಕಿರಿಕಿರಿಯಾಗಿದೆ. ಗ್ರಂಥಾಲಯದಲ್ಲಿ ಸಮರ್ಪಕವಾಗಿ ಬೆಳಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಗ್ರಂಥಾಲಯದಲ್ಲಿ ವಾರಪತ್ರಿಕೆ, ಮಾಸಪತ್ರಿಕೆ ಕೊರತೆಯಿಂದ ಓದುಗರ ಸಂಖ್ಯೆ ಇಳಿಮುಖವಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಇಲ್ಲದ ಕಾರಣ ಗ್ರಂಥಾಲಯಕ್ಕೆ ಮಹಿಳೆಯರು ಬರುತ್ತಿಲ್ಲ.

ಸುಮಾರು 28 ವರ್ಷಗಳಿಂದ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಸುಮಾರು 7000 ಸಾವಿರ ಪುಸ್ತಕಗಳಿವೆ. ಗ್ರಂಥಾಲಯಕ್ಕೆ ಸ್ವಂತ ಕಟ್ಟಡದ ಕೊರತೆಯಿದೆ. ಗ್ರಾಮದಲ್ಲಿರುವ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡದ ಅವಶ್ಯಕತೆಯಿದೆ.-ಎಲ್‌.ಎಲ್‌.ಅಮಾತಿ, ಗ್ರಂಥಪಾಲಕ

ಗ್ರಾಮದಲ್ಲಿರುವ ಗ್ರಂಥಾಲಯದ ಕಟ್ಟಡ ನಿರ್ಮಾಣವನ್ನು ಗ್ರಂಥಾಲಯ ಇಲಾಖೆ ಮಾಡಬೇಕು. ಗ್ರಾಪಂನಲ್ಲಿ ಇದಕ್ಕೆ ಪ್ರತ್ಯೇಕ ಅನುದಾನ ದೊರೆಯುವುದಿಲ್ಲ. ಗ್ರಾಪಂ ವತಿಯಿಂದ ಗ್ರಂಥಾಲಯಕ್ಕೆ ಕೆಲವು ಸೌಲಭ್ಯ ಒದಗಿಸಲಾಗಿದೆ.ಸುಭಾಸ ಗೋಲಶೆಟ್ಟಿ, ಪಿಡಿಒ ಲೋಕಾಪುರ

 

Advertisement

-ಸಲೀಮ ಐ. ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next