Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸದಸ್ಯರಿಂದ ಧಾರ್ಮಿಕ ಪ್ರವಾಸ

03:11 PM Aug 29, 2018 | Team Udayavani |

ನವಿ ಮುಂಬಯಿ: ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸದಸ್ಯರಿಂದ ಧಾರ್ಮಿಕ ಪ್ರವಾಸವು  ನಡೆಯಿತು. ದೇವಾಲಯದಿಂದ ಸುಮಾರು 60 ಮಂದಿ ಸದಸ್ಯರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ, ಮಾರಣಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಾಲಯ, ಕಮಲಶಿಲೆ  ದೇವಾಲಯ, ಹಟ್ಟಿಯಂಗಡಿ ಶ್ರೀ ಮಹಾಗಣಪತಿ ದೇವರ ದರ್ಶನ ಪಡೆದರು.

Advertisement

ದೇವಾಲಯದ ಸದಸ್ಯರಾದ ಗಣೇಶ್‌ ದೇವಾಡಿಗ ಅವರ ವತಿಯಿಂದ ಬೆಳಗ್ಗೆಯ ಉಪಾಹಾರ ಹಾಗೂ ರಾಜೇಂದ್ರ ಶೆಟ್ಟಿ ಅವರ ವತಿಯಿಂದ ರಾತ್ರಿಯ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಆಯೋಜಿಸಿದ ಈ ಪ್ರವಾಸದಲ್ಲಿ ಉಪಾಧ್ಯಕ್ಷ ನಂದಿಕೂರು ಜಗದೀಶ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌, ಕೋಶಾಧಿಕಾರಿ ಶೇಖರ್‌ ವಿ. ದೇವಾಡಿಗ, ಸಮಿತಿಯ ಸದಸ್ಯರು, ಶ್ರೀ ಮೂಕಾಂಬಿಕಾ ಚಾರಿಟೆಬಲ್‌ ಮಂಡಳ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ, ಉಪ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಸುರೇಶ್‌ ಕೋಟ್ಯಾನ್‌ ಅವರು ಪ್ರವಾಸದ ಮೇಲ್ವಿಚಾರಣೆ ವಹಿಸಿದ್ದು, ಭಾಗವಹಿಸಿದ್ದ ಎಲ್ಲ ಸದಸ್ಯರನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next