ಮುಂಬಯಿ: ಮಲಾಡ್ ಪೂರ್ವ, ಕುರಾರ್ ವಿಲೇಜ್ ಲಕ್ಷ್ಮಣ್ ನಗರದ ಶ್ರೀ ಮಹಾತೋಭಾರ ಶನೀಶ್ವರ ದೇವಸ್ಥಾನದ 48ನೇ ವಾರ್ಷಿಕ ಜಾತ್ರಾ ಮಹೋತ್ಸವವು ಫೆ. 10ರಿಂದ 12ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಶನೀಶ್ವರ ಕ್ಷೇತ್ರದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ತುಂಗಾ ಭಟ್ ಅವರ ನೇತೃತ್ವದಲ್ಲಿ ನಾರಾಯಣ್ ಭಟ್ ಅವರ ಸಹಕಾರ ದೊಂದಿಗೆ ಅದ್ದೂರಿಯಾಗಿ ನಡೆದು ಸಂಪನ್ನಗೊಂಡಿತು.
ಫೆ. 12ರಂದು ಜಾತ್ರಾ ಮಹೋತ್ಸವದ ಪ್ರಯುಕ್ತ ನಿತ್ಯಪೂಜೆ, ಪಂಚಾಮೃತ ಅಭಿಷೇಕ, ಆಲಂಕಾರ ಪೂಜೆ, ಸಾಮೂಹಿಕ ದೇವರ ದರ್ಶನ, ಕವಾಟ ಬಂಧನ, ಶನಿ ಕಥೆ ಪಾರಾಯಣ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಭಟ್ ತುಂಗಾ ಅವರು ಭಕ್ತರಿಗೆ ಮತ್ತು ಆಡಳಿತ ಮಂಡಳಿಗೆ ಮಹಾ ಪ್ರಸಾದ ವನ್ನಿತ್ತು, ದೇವಸ್ಥಾನದ ಸೇವಾ ಕಾರ್ಯ ಭಕ್ತಿಯಿಂದ ನಡೆಯಬೇಕು. ಫಲಾಪೇಕ್ಷೆಯಿಲ್ಲದೆ ಸೇವೆಯಲ್ಲಿ ತೊಡಗಬೇಕು. ಅದರಿಂದ ಭಗವಂತ ನಮಗೆ ಅನುಗ್ರಹಿಸಲು ಸಾಧ್ಯ. ಸೇವೆಯನ್ನು ದೇವರ ಸೇವೆಯೆಂದು ಪರಿಗಣಿಸಿದಾಗ ಯಶಸ್ವಿಯಾಗುತ್ತದೆ. ಶ್ರೀನಿವಾಸ ಸಾಫಲ್ಯರ ಯಜಮಾನಿಕೆಯಲ್ಲಿ ನಡೆದ 3 ದಿನಗಳ ಪೂಜೆಯಿಂದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದ ಸ್ಯರು, ಭಕ್ತರೆಲ್ಲರೂ ಪುನೀತರಾಗಿದ್ದಾರೆ. ಭಗವಂತನ ಮೇಲೆ ನಂಬಿಕೆ, ಶ್ರದ್ಧೆ ಇದ್ದಾಗ ಬದುಕು ಸಾರ್ಥಕತೆ ಆಗುತ್ತದೆ ಎಂದು ತಿಳಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ ಮಾತನಾಡಿ, 50 ವರ್ಷಗಳ ಪೂಜಾ ಸಮಿತಿಗೆ ಪೂರ್ತಿಗೊಳ್ಳುವ ಸಂದರ್ಭ ವರ್ಷಪೂರ್ತಿ ಕಾರ್ಯಕ್ರಮ ನೀಡುವ ಉದ್ದೇಶ ನಮ್ಮದಾಗಿದೆ. ಸಮಿತಿಯ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಮೂರು ದಿನಗಳ ಸೇವೆ ಮಾಡಿದ್ದಾರೆ. ಸದಸ್ಯರೆಲ್ಲರಿಗೂ ದೇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದರು.
ಪೂಜಾ ಸಮಿತಿಯ ಗೌರವ ಕಾರ್ಯ ದರ್ಶಿ ಸಂತೋಷ್ ಶೆಟ್ಟಿ ವಂದಿಸಿದರು. ಗೌರವ ಕೋಶಾಧಿಕಾರಿ ಹರೀಶ್ ಜೆ. ಸಾಲ್ಯಾನ್ ಪೂಜೆಗೆ ಸೇವೆ ನೀಡಿದ ದಾನಿಗಳ ಯಾದಿ ವಾಚಿಸಿ ಕೃತಜ್ಞತೆ ಸಲ್ಲಿಸಿದರು. ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತರೆಲ್ಲರೂ ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದವನ್ನು ಸ್ವೀಕರಿಸಿದರು.
ಉಪಾಧ್ಯಕ್ಷ ರಮೇಶ್ ಆಚಾರ್ಯ, ಪ್ರಧಾನ ಸಂತೋಷ್ ಶೆಟ್ಟಿ, ಕಾರ್ಯ ದರ್ಶಿಗಳಾದ ನಿತ್ಯಾನಂದ ಕೋಟ್ಯಾನ್, ಜತೆ ಕಾರ್ಯದರ್ಶಿ ಶಾಲಿನಿ ಶೆಟ್ಟಿ, ಕೋಶಾಧಿಕಾರಿ ಹರೀಶ್ ಸಾಲ್ಯಾನ್, ಜತೆ ಕೋಶಾಧಿಕಾರಿಗಳಾದ ಚಂದ್ರಕುಮಾರ್ ಶೆಟ್ಟಿ ಮತ್ತು ಮನೋಹರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಕೋಟ್ಯಾನ್, ಹಿರಿಯ ಸಲಹೆಗಾರರಾದ ನಾರಾಯಣ್ ಶೆಟ್ಟಿ, ಬಾಬು ಚಂದನ್, ಐತು ದೇವಾಡಿಗ, ಸಮಿತಿಯ ಸದಸ್ಯರಾದ ಮಹೇಶ್ ಸಾಲ್ಯಾನ್, ಪ್ರಭಾಕರ್ ಶೆಟ್ಟಿ, ದಯಾನಂದ ಶೆಟ್ಟಿ, ಸದಾನಂದ ಶೆಟ್ಟಿ, ರಾಮಕೃಷ್ಣ ಶೆಟ್ಟಿಯನ್ ಹಾಗೂ ಮಹಿಳಾ ವಿಭಾಗದ ಪರವಾಗಿ ಜಯಂತಿ ಸಾಲ್ಯಾನ್, ರಾಜಶ್ರೀ ಪೂಜಾರಿ, ಶಾಲಿನಿ ಶೆಟ್ಟಿ, ಜಯಲಕ್ಷ್ಮೀ ನಾಯಕ್, ಯಶೋದಾ ರಾಯ್, ಯಶೋದಾ ಕುಂಬ್ಳೆ, ಗಿರಿಜಾ ಮರಕಾಲ, ಭವಾನಿ ಕುಂದರ್, ಲತಾ ಪೂಜಾರಿ, ಸುರೇಖಾ ಶೆಟ್ಟಿಯನ್, ಸ್ನೇಹಲತಾ ನಾಯಕ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮ ನಡೆಯಿತು.