Advertisement

ಧಾರ್ಮಿಕ |ಜೀವನ ದಾನ, ಯೋಗಪಟ್ಟಾಭಿಷೇಕ ದಿನಾಚರಣೆ

01:00 AM Mar 13, 2019 | Harsha Rao |

ಬದಿಯಡ್ಕ: ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 26ನೇ ಸಂನ್ಯಾಸಗ್ರಹಣ ದಿನಾಚರಣೆಯ ಅಂಗವಾಗಿ ಜೀವನದಾನ ಹಾಗೂ 26ನೇ ಯೋಗ ಪಟ್ಟಾಭಿಷೇಕ ದಿನಾಚರಣೆಯ ಅಂಗವಾಗಿ ಮಹಾ ಪಾದುಕಾ ಪೂಜೆ ಸಮಾರಂಭವು ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಎ. 9 ಮತ್ತು 11ರಂದು ಎರಡು ದಿನಗಳಲ್ಲಿ ಸಂಪನ್ನಗೊಳ್ಳಲಿದೆ.

Advertisement

ಈ ಬಗ್ಗೆ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಸಮಾಲೋಚನ ಸಭೆ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿತು. ಧ್ವಜಾರೋಹಣ, ಶಂಖನಾದ ಗುರುವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮಂಡಲ ಕಾರ್ಯದರ್ಶಿ ಬಾಲ ಸುಬ್ರಹ್ಮಣ್ಯ ಭಟ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು ಸಮಾರಂಭದ ವಿಶೇಷತೆ ಮತ್ತು ಮಹತ್ವದ ಬಗ್ಗೆ ವಿವರಣೆಗಳನ್ನಿತ್ತರು.

ಜೀವನದಾನ ಮತ್ತು ಯೋಗ ಪಟ್ಟಾಭಿಷೇಕ ದಿನ ಆಯೋಜನ ಮತ್ತು ಅಧ್ಯಕ್ಷರಾದ ಹಾರಕರೆ ನಾರಾಯಣ ಭಟ್‌ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಸ್ವರೂಪದ ಸಮಗ್ರ ಮಾಹಿತಿಗಳನ್ನಿತ್ತು ಸಮಾಜದ ಪ್ರಸಾದ ತಲುಪುವಂತಾಗಿ ಸಮಾಜ ಸಮೃದ್ಧಿಯಾಗಲು ಶ್ರೀ ಸಂಸ್ಥಾನದವರ ಸಂಕಲ್ಪವನ್ನು ಸಾಕ್ಷಾತ್ಕಾರ ಮಾಡುವಲ್ಲಿ ಪ್ರತಿಯೋರ್ವನ ಸಹಕಾರ ಅನಿವಾರ್ಯ ಎಂಬುದಾಗಿ ಹೇಳಿದರು. ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ, ಮಂಡಲ ಗುರಿಕ್ಕಾರರಾದ ಸತ್ಯನಾರಾಯಣ ಭಟ್‌ ಮೊಗ್ರ ಅವರು ಸಮಾರಂಭದ ಯಶಸ್ವಿ ಮತ್ತು ಮಹಾ ಪಾದುಕಾ ಪೂಜೆಯ ಪಾವಿತ್ರÂ ಮತ್ತು ವಿಶೇಷಗಳ ಬಗ್ಗೆ ಮಾತುಗಳನ್ನಾಡಿದರು. ಸಭಾಧ್ಯಕ್ಷ ಪ್ರೊ| ಶ್ರೀಕೃಷ್ಣ ಭಟ್‌ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ಜೀವನದಾನ, ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 26 ನೇ ಸಂನ್ಯಾಸಗ್ರಹಣ ದಿನವನ್ನು ಸಂಕಷ್ಟಕ್ಕೆ ಒಳಗಾದ ಕುಟುಂಬವನ್ನು ಮಠದ ಜೀವನದಾನ ಟ್ರಸ್ಟ್‌ ಮೂಲಕ ದತ್ತು ಸ್ವೀಕರಿಸುವ ವಿಧಾನದಲ್ಲಿ ಜೀವನದಾನವಾಗಿ ಎ. 9ರಂದು ಆಚರಿಸಲಾಗುವುದು. 26 ನೇ ಯೋಗ ಪಟ್ಟಾಭಿಷೇಕ  ದಿನವನ್ನು ಸಹಸ್ರ ಸಹಸ್ರ ಶಿಷ್ಯ  ಭಕ್ತರ ಭಕ್ತಿಯ ಸಮರ್ಪಣೆಯಾಗಿ ಮಹಾ ಪಾದುಕಾ ಪೂಜೆ, ಉಪಾಸನೆ ಎ.11 ರಂದು ಆಚರಿಸಲಾಗುವುದು.

ಮಂಡಲ ಪದಾಧಿಕಾರಿಗಳಾದ ಮಹೇಶ ಸರಳಿ, ಸತ್ಯಶಂಕರ ಭಟ್‌, ಕೇಶವ ಪ್ರಸಾದ್‌ ಎಡಕ್ಕಾನ, ವೈ.ಕೆ. ಗೋವಿಂದ ಭಟ್‌, ಕುಸುಮಾ ಪೆರ್ಮುಖ, ಗೀತಾಲಕ್ಷಿ$¾ ಮುಳ್ಳೇರಿಯಾ ಮತ್ತು ಜಯಪ್ರಕಾಶ್‌ ಪಜಿಲ ಉಪಸ್ಥಿತರಿದ್ದರು. 
ಸಾಂಘಿಕ ರಾಮಜಪ ಶಾಂತಿ ಮಂತ್ರ, ಗೋಸ್ತುತಿ, ಶಂಖನಾದ ಧ್ವಜಾವರೋಹಣವಾಗಿ ಸಭಾ ಕಾರ್ಯಕ್ರಮವು ಮುಕ್ತಾಯವಾಯಿತು. ಪ್ರಕಟನೆ ಮತ್ತು ರಶೀದಿ ಪುಸ್ತಕಗಳನ್ನು ಮಂಡಲ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್‌ ಗಬ್ಬಲಡ್ಕ ಅವರು ಪದಾಧಿಕಾರಿಗಳಿಗೆ ವಿತರಣೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next