Advertisement

ಬದುಕು ಸಾರ್ಥಕಗೊಳಿಸಲು ಧಾರ್ಮಿಕ ಜ್ಞಾನ ಅಗತ್ಯ

09:05 PM Oct 14, 2019 | Lakshmi GovindaRaju |

ಬೇಲೂರು: ಇಂದಿನ ಸಮಾಜದಲ್ಲಿ ಮನುಷ್ಯ ಜೀವನ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡುತಿದ್ದು, ಬದುಕನ್ನು ಸಾರ್ಥಕಗೊಳಿಸಲು ಧಾರ್ಮಿಕ ಜ್ಞಾನ ಪಡೆಯುವ ಅವಶ್ಯಕತೆ ಇದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿ ತಿಳಿಸಿದರು. ಪಟ್ಟಣದ ಜೂನಿಯರ್‌ ಕಾಲೇಜ್‌ ಮೈದಾನದಲ್ಲಿ ನಡೆದ 75 ನೇ ಹುಣ್ಣಿಮೆಯ ವಿಶೇಷ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂದಿನ ಕುಟುಂಬ ವ್ಯವಸ್ಥೆಯಲ್ಲಿ ತಮ್ಮ ಬದುಕಿಗೆ ಏನು ಬೇಕು ಅಷ್ಟನ್ನು ಮಾತ್ರ ನೋಡಿಕೊಂಡು ಉತ್ತಮ ಜೀವನ ನಡೆಸುತ್ತಿದ್ದಾರೆ ಇದರಿಂದ ಎಂದಿಗೂ ಮನಃ ಶಾಂತಿ ದೊರೆಯಲಾರದು ಎಂದರು.

Advertisement

ಯುವಕರು ಪ್ರಜ್ಞಾವಂತರಾಗಬೇಕು: ಇಂದಿನ ಯುವಕರು ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಾದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬಹುದು ಎಂದರಲ್ಲದೆ ಕೇವಲ ಹೊಟ್ಟೆ ವರೆಯುವ ವಿದ್ಯೆಗೆ ಮಾರುಹೋಗದೆ ಅಂತರಂಗದ ವಿದ್ಯೆಗೆ ಮಹತ್ವ ನೀಡಿದಾಗ ತನ್ನಲ್ಲೆ ದಿವ್ಯ ಶಕ್ತಿ ಮೂಡುತ್ತದೆ ಇದರಿಂದ ಸಮಾಜ ಸೇವೆಯೇ ಮುಖ್ಯ ಗುರಿ ಎಂಬ ಭಾವನೆ ತನ್ನಲ್ಲಿ ಮೂಡುತ್ತದೆ ಎಂದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಪರಿಶ್ರಮದಿಂದ ಇಂದು ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯೆ ಪಡೆಯುವಂತಾಗಿದೆ ಎಂದು ಹೇಳಿದರು.

ಮುತ್ತಿನ ಪಲ್ಲಕ್ಕಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಚನ್ನಕೇಶವ ದೇವಾಲಯದಿಂದ ಸಭಾ ಮಂಟಪದವರೆಗೂ 1008 ಕಳಸದೊಂದಿಗೆ ಶ್ರೀಗಳನ್ನು ಮುತ್ತಿನ ಪಲ್ಲಕ್ಕೆ ಮೇಲೆ ಮೆರವಣಿಗೆ ನೆಡಸಲಾಯಿತು. ಸಾವಿರಾರು ಭಕ್ತರುರೊಂದಿಗೆ ವಿವಿದ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಭಕ್ತರು ಶ್ರೀಗಳಿಗೆ ಬೆಳ್ಳಿ ಇನ್ನೀತರೆ ವಸ್ತುಗಳಲ್ಲಿ ತುಲಾಭಾರ ನಡೆಸಿದರು.

ಕಾರ್ಯಕ್ರಮದಲ್ಲಿ ಸಂಸದ ಪ್ರಜ್ವಲ್‌ರೇವಣ್ಣ, ಶಾಸಕ ಕೆ.ಎಸ್‌.ಲಿಂಗೇಶ್‌, ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ, ಚಿತ್ರದುರ್ಗ ಮಾದಾರ ಚನ್ನಯ್ಯಮಠದ ಶ್ರೀ ಬಸವಮೂರ್ತಿಮಾದಾರ ಚನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಹೊಸದುರ್ಗದ ಭಗೀರಥ ಮಠದ ಶ್ರೀ ಪುರುಷೋತ್ತ ಮಾನಂದಪುರಿ ಸ್ವಾಮೀಜಿ, ಮೈಸೂರು ಕಾಗಿನೆಲೆ ಕನಕಗುರು ಪೀಠದ ಶ್ರೀ ಶಿವನಾಂದಪುರಿ ಸ್ವಾಮೀಜಿ, ತೀರ್ಥಹಳ್ಳಿ ಈಡಿಗ ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಕೊಂಚೂರು ಸವಿತಾಪೀಠದ ಶ್ರೀ ಶ್ರೀಧರಾನಂದಸರಸ್ವತಿ ಸ್ವಾಮೀಜಿ ವಿಧಾನಪರಿಷತ್‌ ಸದಸ್ಯ ಗೋಪಾಲಸ್ವಾಮಿ, ಸಕಲೇಶಪುರ ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ,

ಜಿಲ್ಲಾ ಒಕ್ಕಲಿಗೆ ಸಂಘದ ಅಧ್ಯಕ್ಷ ಜಿ.ಎಲ್‌. ಮುದ್ದೇಗೌಡ, ಎಚ್‌ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಎ.ನಾಗರಾಜ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್‌.ಕೆ.ಸುರೇಶ್‌, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಪಿ.ಶೈಲೇಶ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಮಾಜಿ ಸದಸ್ಯ ವೈ.ಎನ್‌.ಕೃಷ್ಣೇಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷ ರಂಗೇಗೌಡ, ಹುಣ್ಣಿಮೆ ಕಾರ್ಯ ಕ್ರಮದ ಸಂಚಾಲಕ ಎಚ್‌.ಬಿ. ಮದನಗೌಡ,ಚನ್ನಕೇಶವಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ವೈ.ಟಿ.ಧಾಮೋಧರ್‌, ಮುಖಂಡ ಜಿ.ಕೆ.ಕುಮಾರ್‌ ಇತರರು ಇದ್ದರು.

Advertisement

ಸರ್ವ ಸಮುದಾಯಕ್ಕೂ ಆದ್ಯತೆ: ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮಾತನಾಡಿ, ಆದಿಚುಂಚನಗಿರಿ ಸಂಸ್ಥಾನ ಮಠ ಕೇವಲ ಒಂದೆ ಜನಾಂಗಕ್ಕೆ ಆದ್ಯತೆ ನೀಡದೆ ಇತರೆ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕ ವಾಗಿದೆ ಇತಿಹಾಸವಿರುವ ಮಠ ಶಿಕ್ಷಣ ಕ್ಷೇತ್ರದಲ್ಲಿ ಉನ್ನತಿ ಸಾಧಿಸಿರುವುದಲ್ಲದೆ ಸಮಾಜಕ್ಕೆ ತನ್ನದೆ ಕೊಡುಗೆ ನೀಡಿದೆ ಎಂದು ತಿಳಿಸಿದರು.

ಗಳಿಸಿದ ಸಂಪತ್ತಿನಲ್ಲಿ ದಾನ ಮಾಡಿ: ತಮ್ಮ ಸಂಪಾದನೆಯಲ್ಲಿ ಸಮಾಜದ ಕಡುಬಡವರಿಗೆ ಹಂಚಿಕೆ ಮಾಡಿಕೊಂಡಾಗ ಸಾರ್ಥಕತೆ ಭಾವನೆ ಮೂಡುತ್ತದೆ ಎಂದು ಎಂದು ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ಆಧ್ಯಾತ್ಮಿಕ ಭಾವನೆಯನ್ನು ತನ್ನೊಳಗೆ ಇರಿಸಿಕೊಂಡಾಗ ಬದುಕಿನ ಅರ್ಥಕಾಣುತ್ತದೆ ಇದನ್ನು ಗಳಿಸಬೇಕಾದರೆ ಗುರುವಿನ ಅರಿವು ಮುಖ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next