Advertisement

ಕಂಬಳಕ್ಕೆ ಧಾರ್ಮಿಕ ಚೌಕಟ್ಟು : ಡಾ|ಬಿ.ವಿ. ಆಚಾರ್ಯ

01:42 PM Jan 28, 2018 | Team Udayavani |

ಕಿನ್ನಿಗೋಳಿ: ಕಂಬಳ ಕೇವಲ ಜನಪದ ಕ್ರೀಡೆಯಲ್ಲ, ಇದು ಧಾರ್ಮಿಕ ಚೌಕಟ್ಟಿನ ಮೇಲೆ ನಿಂತಿದೆ. ಜಲ್ಲಿಕಟ್ಟು ಮತ್ತು ಕಂಬಳಕ್ಕೆ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಹಿರಿಯ ನ್ಯಾಯವಾದಿ ಡಾ| ಬಿ.ವಿ. ಆಚಾರ್ಯ ಹೇಳಿದರು. ಅವರು ಶನಿವಾರ ಇತಿಹಾಸ ಪ್ರಸಿದ್ಧ ಐಕಳ ಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳ ಸಂದರ್ಭ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Advertisement

ಕಂಬಳಕ್ಕೆ ನಿಷೇಧ ಎದುರಾದ ಸಂದರ್ಭದಲ್ಲಿ ಕಂಬಳದ ಪರವಾಗಿ ನಾನು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದೇನೆ. ಕಂಬಳದ ಹಿಂದೆ ಧಾರ್ಮಿಕ ನಂಬಿಕೆಯಿದೆ, ಕಂಬಳ ನಡೆಸುವುದರಿಂದ ನಾವು ನಂಬಿದ ದೈವ ದೇವರು ಸಂತೃಪ್ತಿ ಹೊಂದುತ್ತಾರೆ ಮಾತ್ರವಲ್ಲದೆ, ಕೃಷಿ ಕಾರ್ಯಕ್ಕೆ ಮತ್ತು ಗ್ರಾಮಕ್ಕೂ ಒಳ್ಳೆಯದಾಗುತ್ತದೆ ಎಂಬ ಅಚಲವಾದ ನಂಬಿಕೆ ಇದೆ ಎಂದರು.

ಜೋತಿಷಿ ಮತ್ತು ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಐಕಳ ಕಂಬಳವು ಸಂಪ್ರದಾಯಕ್ಕೆ ಚ್ಯುತಿ ಬರದಂತೆ ಆಧುನೀಕರಣದೊಂದಿಗೆ ಐಕಳ ಉತ್ಸವವಾಗಿ ನಡೆದುಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು. ಶ್ರೀ ಚಂದ್ರಶೇಖರ ಸ್ವಾಮೀಜಿ ಜೋಡುಕರೆಗೆ ಪ್ರಸಾದ ಹಾಕುವ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು. ಗಣೇಶ್‌ ಭಟ್‌ ಏಳಿಂಜೆ ಮತ್ತು ವರುಣ್‌ ಭಟ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಸಮ್ಮಾನ: ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಡಾ| ಬಿ.ವಿ. ಆಚಾರ್ಯ ದಂಪತಿ ಮತ್ತು ಶ್ರೀ ಚಂದ್ರಶೇಖರ ಸ್ವಾಮೀಜಿ, ರಜನಿ ಚಂದ್ರಶೇಖರ ಸ್ವಾಮೀಜಿ ಅವರನ್ನು ಕಂಬಳ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು. ಕಂಬಳ ಸಮಿತಿಯ ಅಧ್ಯಕ್ಷ ಐಕಳ ಬಾವ ದೇವಿಪ್ರಸಾದ್‌ ಶೆಟ್ಟಿ ಅವರನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಸಮ್ಮಾನಿಸಿದರು.

ಉದ್ಘಾಟನೆ: ಐಕಳ ಕಂಬಳಕ್ಕೆ ಹೋಗುವ ರಸ್ತೆಗೆ ಐಕಳ ಬಾವ ಮನೆತನದ ಹಿರಿಯ ಮಾಜಿ ಶಾಸಕ ಸಂಜೀವನಾಥ ಐಕಳ ಅವರ ನಾಮಕರಣದ ನಾಮಫ‌ಲಕವನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಅನಾವರಣಗೊಳಿಸಿ ದರು. ಐವನ್‌ ಡಿ’ಸೋಜಾ ಅವರ ಅನುದಾನದಲ್ಲಿ ನಿರ್ಮಾಣಗೊಂಡ ಹೈಮಾಸ್ಟ್‌ ದೀಪ ಮತ್ತು ಕಾಂಕ್ರಿಟೀ ಕರಣಗೊಂಡ ರಸ್ತೆಯನ್ನು ಡಾ| ಬಿ.ವಿ. ಆಚಾರ್ಯ ಮತ್ತು ಐವನ್‌ ಡಿ’ಸೋಜಾ ಉದ್ಘಾಟಿಸಿದರು. ಐಕಳ ಬಾವ ಯಜಮಾನರಾದ ದೋಗಣ್ಣ ಶೆಟ್ಟಿ ಉಪಸ್ಥಿತರಿದ್ದರು.

Advertisement

ಕಿಶೋರ್‌ ಆಳ್ವ, ಮಾಲಾಡಿ ಅಜಿತ್‌ ಕುಮಾರ್‌ ರೈ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೆ. ಲವ ಶೆಟ್ಟಿ, ಸಂತೋಷ್‌ ಕುಮಾರ್‌ ಹೆಗ್ಡೆ, ದಿವಾಕರ ಚೌಟ, ವಿನೋದ್‌ ಬೊಳ್ಳೂರು, ರಶ್ಮಿ ಆಚಾರ್ಯ, ಲೀಲಾಧರ ಶೆಟ್ಟಿ ಕಾಪು, ಸೌರಭ್‌ ಆರ್‌.ಕೆ. ಗುಪ್ತ, ಜಗದೀಶ್‌ ಅಧಿಕಾರಿ, ನಿಡ್ಡೋಡಿ ಚಾವಡಿ ಮನೆ ಜಗನಾಥ ಶೆಟ್ಟಿ, ಭುವನಾಭಿರಾಮ ಉಡುಪ, ಸಾಹುಲ್‌ ಹಮೀದ್‌, ಮಯ್ಯದಿ ಪಕ್ಷಿಕೆರೆ, ಪ್ರಫ‌ುಲ್ಲ ಶೆಟ್ಟಿ ಎಲ್ಲೂರುಗುತ್ತು, ಗುಣಪಾಲ ಕಡಂಬ, ಉದ್ಯಮಿ ಜೆ.ಬಿ. ಶೆಟ್ಟಿ, ವಸಂತ್‌ ಶೆಟ್ಟಿ, ವಿಶ್ವಾಸ್‌ ಅಮೀನ್‌, ಕಂಬಳ ಸಮಿತಿಯ ಚಿತ್ತರಂಜನ್‌ ಭಂಡಾರಿ, ಐಕಳ ಮುರಳೀಧರ ಶೆಟ್ಟಿ, ಕೃಷ್ಣ ಮಾರ್ಲ, ಯೋಗೀಶ್‌ ರಾವ್‌, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಲೀಲಾಧರ ಶೆಟ್ಟಿ ಐಕಳ, ಸದಾನಂದ ಕುಂದರ್‌, ಆನಂದ ಗೌಡ, ಶಶಿಧರ ಐಕಳ, ಹರೀಶ್‌ ಶೆಟ್ಟಿ ತಾಮಣಿಗುತ್ತು, ಮುಂಬಯಿ ಸಮಿತಿಯ ಕುಶಲ್‌ ಭಂಡಾರಿ ಐಕಳ ಬಾವ, ಗಣನಾಥ ಜೆ. ಶೆಟ್ಟಿ ಐಕಳ ಬಾವ, ತಿಲಕ್‌ರಾಜ್‌ ಬಲ್ಲಾಳ್‌ ಐಕಳ ಬಾವ, ಪುರಂದರ ಶೆಟ್ಟಿ ಐಕಳಬಾವ, ವೇಣುಗೋಪಾಲ ಶೆಟ್ಟಿ ಐಕಳಬಾವ, ಸ್ವರಾಜ್‌ ಶೆಟ್ಟಿ , ಮನಮೋಹನ ಕೊಂಡೆ ಐಕಳಬಾವ, ಸಚಿನ್‌ ಕೆ. ಶೆಟ್ಟಿ ಐಕಳಬಾವ, ಸಚಿನ್‌ ಶೆಟ್ಟಿ ಐಕಳಬಾವ, ಜಯಪಾಲ ಶೆಟ್ಟಿ ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ| ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ನವೀನ್‌ ಶೆಟ್ಟಿ ಎಡ್ಮೆಮಾರ್‌ ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next