Advertisement
ಹಿರೇಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಧಾರ್ಮಿಕ ಉಪನ್ಯಾಸ ನೀಡಿದ ಸುಳ್ಯ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಮಾತನಾಡಿ, ದೇಶ, ದೇಹ, ದೇವನೆಂಬ ಚೌಕಟ್ಟಿನೊಳಗೆ ವಿಶೇಷ ಪರಿಕಲ್ಪನೆಯನ್ನೊಳಗೊಂಡ ಬದುಕು ಭಾರತೀಯರದ್ದು. ಪ್ರಪಂಚದ ಬೇರೆಲ್ಲೂ ಇದನ್ನು ನೋಡಲು ಸಾಧ್ಯವಿಲ್ಲ. ಹಣವೆಂಬ ಸಂಪತ್ತಿನ ಹಿಂದೆ ಸಾಗುವ ಆಧುನಿಕ ಸಮಾಜದಲ್ಲಿ ಮಾನವೀಯ ಸಂಬಂಧಗಳಿಂದು ಅನಾಥವಾಗುತ್ತಿವೆ. ಆತ್ಮ ಸಾಕ್ಷಿಗೆ ಸರಿಯಾಗಿ ಕರ್ತವ್ಯಗಳನ್ನು ಪೂರೈಸುವಲ್ಲಿ ಎಡವುತ್ತಿದ್ದೇವೆ. ಹೊರಗೆ ಪಾಲಿಸುವ ಉತ್ತಮ ಗುಣಗಳನ್ನು ನಮ್ಮ ಮನೆಯೊಳಗೆ ಅನುಷ್ಠಾನಿಸಲು ಮರೆಯುತ್ತಿದ್ದೇವೆ. ಮಾತೆಯರು ಈ ಬಗ್ಗೆ ಜಾಗೃತರಾಗಬೇಕಿದ್ದು, ಸತ್ಯನಿಷ್ಠೆ, ಧರ್ಮಾಧಾರಿತ ಬದುಕನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಮನುಷ್ಯನನ್ನು ಆತನಲ್ಲಿರುವ ಸಂಸ್ಕಾರಯುತ ಗುಣ, ಉತ್ತಮ ಮೌಲ್ಯಗಳಿಂದ ಅಳೆಯುವುದನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
Related Articles
Advertisement
ಹಿರೇಬಂಡಾಡಿ ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಲಕ್ಷ್ಮೀಶ, ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷೆ ವಿದ್ಯಾ ನಿಡ್ಡೆಂಕಿ, ಜಾತ್ರಾ ಸಮಿತಿಯ ಅಧ್ಯಕ್ಷೆ ದೇವಮ್ಮ ಕುಬಲ, ಮಹಿಳಾ ಬೈಲುವಾರು ಸಮಿತಿಯ ಅಧ್ಯಕ್ಷೆ ಕಸ್ತೂರಿ ಹೆನ್ನಾಳ ಉಪಸ್ಥಿತರಿದ್ದರು.
ಆರತಿ ಹೆನ್ನಾಳ ಸ್ವಾಗತಿಸಿದರು. ಮಮತಾ ಹರೀಶ್ ವಂದಿಸಿದರು. ತಿಲಕ ಬಂಡಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಸಾಂತಿತ್ತಡ್ಡ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಪಡು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಬಾಲಚಂದ್ರ ಗುಂಡ್ಯ, ಕೋಶಾಧಿಕಾರಿ ನಾರಾಯಣ ಕನ್ಯಾನ, ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಾಡಿತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಮಠಂದೂರು, ಪ್ರಧಾನ ಕಾರ್ಯದರ್ಶಿ ನವೀನ್ ಪಡು³, ಕೋಶಾಧಿಕಾರಿ ವಿಶ್ವನಾಥ್ ಕೆಮ್ಮಟೆ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿ, ಸದಸ್ಯರು ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡರು.
ಇಂದು ಬ್ರಹ್ಮಕಲಶೋತ್ಸವಫೆ. 21ರಿಂದ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ, ಸಡಗರಕ್ಕೆ ಒಳಗಾಗಿದ್ದ ಉಳತ್ತೋಡಿ ಶ್ರೀ ಷಣ್ಮುಖ ದೇವರಿಗೆ ಫೆ. 29ರಂದು ಬ್ರಹ್ಮಕಲಶಾಭಿಷೇಕವು ನಡೆಯಲಿದೆ. ಬ್ರಹ್ಮಕಲಶೋತ್ಸವದ ನಿಮಿತ್ತ ಶ್ರೀ ಮಹಾಗಣಪತಿ ಹೋಮ, ಕವಾಟ ಉದ್ಘಾಟನೆ, ದೇವರಿಗೆ ತೈಲಾಭಿಷೇಕ, ಪಂಚಾಮೃತಾಭಿಷೇಕ, ಪ್ರಾಯಶ್ಚಿತ್ತ ಶಾಂತಿ, ತಣ್ತೀ ಹೋಮಗಳ ಕಲಶಾಭಿಷೇಕ, ಮಹಾಬಲಿ ಪೀಠ ಪ್ರತಿಷ್ಠೆ ನಡೆದು ಬಳಿಕ ಬ್ರಹ್ಮಕಲಶಾಭಿಷೇಕವು ನೆರವೇರಲಿದೆ. ಆದಿ ಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶ ಶ್ರೀ ಡಾ| ನಿರ್ಮಲಾನಂದ ಮಹಾ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ನಡೆಯುವ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಲಿದ್ದಾರೆ.