Advertisement

ಮಠ ಮಾನ್ಯಗಳಿಂದ ಧರ್ಮ ಜಾಗೃತಿ

01:54 PM Feb 02, 2020 | Team Udayavani |

ಶಿಗ್ಗಾವಿ: ಸೇವಾ ಮನೋಭಾವವಿದ್ದಲ್ಲಿ ವ್ಯಕ್ತಿ ಉನ್ನತಮಟ್ಟದಲ್ಲಿ ಬೆಳೆಯಲು ಸಾಧ್ಯ. ಧರ್ಮ ಅರ್ಥೈಸಿಕೊಂಡುಜೀವನ ಸಾಗಬೇಕು ಎಂದು ಪಟ್ಟಣದವಿರಕ್ತಮಠದ ಸಂಗನಬಸವ ಶ್ರೀಗಳು ಹೇಳಿದರು.

Advertisement

ಸ್ಥಳೀಯ ಮಾರುತಿ ನಗರದ ಮಾರುತಿ ದೇವಸ್ಥಾನದ ನೂತನ ದೇವಸ್ಥಾನದ ಕಳಸಾರೋಹಣ ಹಾಗೂ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಮಠಮಾನ್ಯಗಳು ಜನರಲ್ಲಿ ಧರ್ಮ ಸಂಸ್ಥಾಪನೆ ಮಾಡಬೇಕಿರುವುದರಿಂದ ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳುವುದು ಪುಣ್ಯದ ಕಾರ್ಯ. ಹತ್ತು ದೇವರನ್ನುಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸು ಎಂದು ಹಿರಿಯರು ನಮಗೆ ಉಪದೇಶ ಮಾಡಿದ್ದಾರೆ. ಮನುಷ್ಯ ಮಾಡುವ ಕಾಯಕ ನಿಷ್ಠೆಯಿಂದ ಕೂಡಿರಬೇಕು. ಸಂಸ್ಕಾರಬದ್ಧ ಜೀವನ ಮಾಡುವವನು ಧರ್ಮ ನಿಷ್ಠುರನಾಗಿರುತ್ತಾನೆ ಎಂದರು.

ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವಸ್ಥಾನಗಳಷ್ಟೇ ಉದ್ಯಾನವನಗಳೂ ಸಮಾಜಕ್ಕೆ ಅವಶ್ಯಕವಾಗಿದ್ದು. ಮನುಷ್ಯನ ನೆಮ್ಮದಿ ತಾಣಗಳಾದ ಉದ್ಯಾನಗಳು ನಮ್ಮೆಲ್ಲರ ಆಸ್ತಿ. ಸುತ್ತಲಿನ ಪರಿಸರ ಕಾಳಜಿಗಾಗಿ, ಉತ್ತಮ ಪರಿಸರಕ್ಕಾಗಿ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಕ್ಷೇತ್ರ ಶಾಸಕರೊಂದಿಗೆ ಚರ್ಚಿಸಿ ಕಾಂಕ್ರಿಟ್‌ ರಸ್ತೆಗಳು ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಪಡೆಯೋಣ. ಉದ್ಯಾನ ಸ್ಥಾಪನೆಗೆ ಶ್ರಮದಾನ ಮಾಡಬೇಕಿದೆ. ಎಲ್ಲರ ಸಹಕಾರದೊಂದಿಗೆ ಸಚಿವರ ನೇತೃತ್ವದಲ್ಲಿ ದುಡಿದಾಗ ನಮ್ಮ ತಾಲೂಕು ಇನ್ನೂ ಅಭಿವೃದ್ಧಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

ಪ್ರೊ| ಸುಜಾತಾ ದೇವರಮನಿ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಇಂತಹ ಮಹತ್ಕಾರ್ಯವಾಗಲು ಸಾಧ್ಯ. ಇಂತಹ ಕಾರ್ಯಕ್ರಮಗಳಲ್ಲಿ ಮಹಿಳೆಯರ ಸಹಭಾಗಿತ್ವ ಮುಖ್ಯವಾಗಿರುತ್ತದೆ. ದೇವಸ್ಥಾನಗಳಲ್ಲಿ ಸ್ವತ್ಛತೆಗೆ ಆದ್ಯತೆಕೊಡಬೇಕು ಎಂದರು.

Advertisement

ನೂತನ ದೇವಸ್ಥಾನದ ಕಳಸಾರೋಹಣ ಹಾಗೂ ಸುಮಂಗಲೆಯರ ಕುಂಭ ಮೆರವಣಿಗೆ ಧಾರ್ಮಿಕ ವಿಧಿ ವಿಧಾನದೊಂದಿಗೆ ನೆರವೇರಿತು. ನಂತರ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ನಂತರ ಅನ್ನಸಂತರ್ಪಣೆ ನಡೆಯಿತು. ಗಂಜಿಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು, ಶಿದ್ದಪ್ಪ ಹಾದಿಮನಿ, ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ, ಬಸವರಾಜ ಹೆಸರೂರ, ಮಲ್ಲಪ್ಪಗೌಡ ಪಾಟೀಲ, ಶೇಖಪ್ಪ ಕುಳೇನೂರ, ಶಂಕ್ರಣ್ಣ ಹಾದಿಮನಿ, ಸಿದ್ರಾಮಣ್ಣ ಬಾರಕೆರ, ಸಿದ್ರಾಮಪ್ಪ ದೇವರಮನಿ, ಸಿದ್ರಾಮಣ್ಣ ಗದಗ, ಎಸ್‌.ಕೆ. ಪೊಲೀಸಗೌಡ್ರ, ಸಿ.ಡಿ.  ಸಂಶಿ, ಯಲ್ಲಪ್ಪ ತಳವಾರ, ಎಸ್‌. ಎಂ. ಲಂಡೆತ್ತಿನವರ, ಜಗದೀಶ ಕತ್ತಿ, ಅರವಿಂದ ಗುಡ್ಡಣ್ಣನವರ, ಸಾವಿತ್ರಿ ಗಾಣಗೇರ, ಡಿ.ಬಿ. ಆಲಂಶೆಟ್ರ ಸೇರಿದಂತೆ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next