Advertisement
ಇದೇ ಮೊದಲ ಬಾರಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಪ್ರದಾನ ನೀಡಲಾಗುತ್ತಿದೆ. ಈ ವರ್ಷ ಎಪ್ರಿಲ್ 13ರಂದು ಚಾಂದ್ರಮಾನ ಯುಗಾದಿ ನಡೆಯಲಿದ್ದು, ಅಂದೇ ಮುಖ್ಯಮಂತ್ರಿಯವರು ರಾಜಧಾನಿ ಬೆಂಗಳೂರಿನಲ್ಲಿ ಧಾರ್ಮಿಕ ಕ್ಷೇತ್ರದ ಸಾಧಕರೊಬ್ಬರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡುವ ಸಾಧ್ಯತೆಯಿದೆ. ಪ್ರಶಸ್ತಿಯು ಭಗವದ್ಗೀತೆಯ ಸಾರವನ್ನು ಒಳಗೊಂಡಿರುವ ರಜತ ಲೇಪಿತ ಫಲಕ ಮತ್ತು 1 ಲ. ರೂ. ಹೊಂದಿರಲಿದೆ ಎಂದು ಇಲಾಖೆಯ ಉನ್ನಯ ಮೂಲಗಳು ತಿಳಿಸಿವೆ.
Related Articles
Advertisement
ರಾಜ್ಯ ಮಟ್ಟದಲ್ಲಿ ಒಬ್ಬರಿಗೆ ಪ್ರಶಸ್ತಿ ನೀಡುವುದರ ಜತೆಗೆ, ಪ್ರತಿ ಜಿಲ್ಲೆಯಲ್ಲೂ ಒಬ್ಬೊಬ್ಬ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು. ಚಾಂದ್ರಮಾನ ಯುಗಾದಿಯಿಂದ ಒಂದು ತಿಂಗಳ ಒಳಗಾಗಿ ಜಿಲ್ಲಾ ಮಟ್ಟದಲ್ಲಿ ಸಾಧಕರ ಆಯ್ಕೆ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳಿಗೂ ಧಾರ್ಮಿಕ ದತ್ತಿ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ವಿತರಣೆ ವಿಳಂಬವಾದಲ್ಲಿ, ಚೈತ್ರ ಮಾಸದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ ಎಂದು ಇಲಾಖೆ ಮೂಲಗಳು ಖಚಿತಪಡಿಸಿವೆ.
ಶೀಘ್ರವೇ ಈ ಬಗ್ಗೆ ಅಧಿಕೃತ ಘೋಷಿಸಲಾಗುತ್ತದೆ. ಇದು ಧಾರ್ಮಿಕ ದತ್ತಿ ಇಲಾಖೆ ಹಾಗೂ ರಾಜ್ಯ ಧಾರ್ಮಿಕ ಪರಿಷತ್ ಮೂಲಕ ನಡೆಯಲಿದೆ. ಧಾರ್ಮಿಕ ಕ್ಷೇತ್ರದಲ್ಲಿದ್ದು, ಸಮಾಜಮುಖೀ ಕಾರ್ಯ ಮಾಡುತ್ತಿರುವ ಸಾಧಕರೊಬ್ಬರನ್ನು ಗುರುತಿಸಿ ಧರ್ಮೋತ್ಥಾನ ಪ್ರಶಸ್ತಿ ನೀಡಲಿದ್ದೇವೆ. –ಕೋಟ ಶ್ರೀನಿವಾಸ ಪೂಜಾರಿ, ಧಾರ್ಮಿಕ ದತ್ತಿ ಇಲಾಖೆ ಸಚಿವ
–ರಾಜು ಖಾರ್ವಿ ಕೊಡೇರಿ