ದಿಸ್ಪುರ್ : ಪ್ರವಾಸಿ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಕಾಜಿರಂಗದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಧರ್ಮೋಪದೇಶವನ್ನು ನೀಡಿದ ಆರೋಪದ ಮೇಲೆ ಅಸ್ಸಾಂ ಪೊಲೀಸರು 7 ಜರ್ಮನ್ ಪ್ರಜೆಗಳನ್ನು ಬಂಧಿಸಿದ್ದಾರೆ
ನಾವು ಬಂಧನಕ್ಕೊಳಗಾದ ಪ್ರತಿ ವ್ಯಕ್ತಿಗೆ 500 ಅಮೆರಿಕನ್ ಡಾಲರ್ ದಂಡ ವಿಧಿಸಿದ್ದೇವೆ ಮತ್ತು ಅವರನ್ನು ಆಯಾ ದೇಶಕ್ಕೆ ಗಡೀಪಾರು ಮಾಡಲು ಸಕ್ಷಮ ಪ್ರಾಧಿಕಾರವನ್ನು ಸಂಪರ್ಕಿಸಿದ್ದೇವೆ ಎಂದು ಅಸ್ಸಾಂ ವಿಶೇಷ ಡಿಜಿಪಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಂಧಿತ ಜರ್ಮನ್ ಪ್ರಜೆಗಳನ್ನು ಮೈಕೆಲ್ ಎರಿಚ್ ಸ್ಕೇಪರ್, ಕ್ರಿಶ್ಚಿಯನ್ ಫ್ರೆಡ್ರಿಕ್ ರೈಸರ್, ಮೆರ್ಟೆನ್ ಅಸ್ಮಸ್, ಕಾರ್ನೆಲಿಯಾ ವಾನ್ ಒಹೆಮ್ಬ್, ಹಿನ್ರಿಚ್ ಲುಪ್ಪೆನ್ ವಾನ್ ಒಹೆಮ್ಬ್, ಚೀಸ್ಟಾ ಡೊರೊಥಿಯಾ ಒಲೆರಿಯಸ್ ಮತ್ತು ಲಿಸಾ ಐಮಿ ಬ್ಲೋಮ್ ಎಂದು ಗುರುತಿಸಲಾಗಿದೆ.
ಈ ಹಿಂದೆ, ಅಕ್ಟೋಬರ್ 26 ರಂದು ದಿಬ್ರುಗಢದ ನಹರ್ಕಟಿಯಾ ಪ್ರದೇಶದಲ್ಲಿ ಇದೇ ರೀತಿಯ ಮತಾಂತರದ ಆರೋಪದ ಮೇಲೆ ಮೂವರು ಸ್ವೀಡಿಷ್ ಪ್ರಜೆಗಳನ್ನು ಬಂಧಿಸಲಾಗಿತ್ತು.
ಬಂಧಿತರು ಅನೇಕ ಕಡೆ ದೇಶದ ಹಕ್ಕುಗಳಿಗೆ ವಿರುದ್ಧವಾದ ಬೋಧನೆಗಳನ್ನು ಮಾಡಿರುವುದು ಕಂಡು ಬಂದಿದೆ.