ಮೈಸೂರು: ಉತ್ತರಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಧರ್ಮದ ಪ್ರಯೋಗದಿಂದ ಬಿಜೆಪಿ ಗೆಲುವು ಸಾಧಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಮೈಸೂರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಿಎಂ ಸಿದ್ದರಾಮಯ್ಯನವರ ನಡುವೆ ಧರ್ಮ – ಅಧರ್ಮದ ಹೆಸರಿನಲ್ಲಿ ಜುಗಲ್‌ಬಂದಿಗೆ ಕಾರಣವಾಯಿತು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಉಪಚುನಾವಣೆಗೆ ಧರ್ಮದ ಆಧಾರಕ್ಕಿಂತ ಸಿಎಂ ಸಿದ್ದರಾಮಯ್ಯನವರ ಅಧರ್ಮದ ನಡೆಯೇ ನಮ್ಮ ಪ್ರಮುಖ ಅಸ್ತ್ರ. ಸಿದ್ದರಾಮಯ್ಯನವರ ಅಧರ್ಮದ ಆಡಳಿತ, ದರೋಡೆ, ಲೂಟಿ ಮೊದಲಾದ ವಿಚಾರಗಳನ್ನು ಮುಂದಿಟ್ಟುಕೊಂಡೇ ಉಪಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ಸುತ್ತೂರು ಮಠಕ್ಕೆ ಭೇಟಿ ನೀಡಿದ್ದ ವೇಳೆ ಯಡಿಯೂರಪ್ಪನವರ ಅಧರ್ಮದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯನವರು, ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಮಾಡಿರುವ ಪಾಪದ ಕೆಲಸ ಇನ್ನೊಂದು ಜನ್ಮ ತಾಳಿದರೂ ಕಳೆಯಲಾಗುವುದಿಲ್ಲ. ಅವರೇನು ಧರ್ಮಾಧಿಕಾರಿಯೇ? ಎಂದು ಬಿಜೆಪಿ ರಾಜಾÂಧ್ಯಕ್ಷರ ವಿರುದ್ಧ ವಾಗ್ಧಾಳಿ ನಡೆಸಿದರು. ರಾಜ್ಯದಲ್ಲಿ ಮಾಡಬಾರದ ಭ್ರಷ್ಟಾಚಾರ ಮಾಡಿ ಹಲವರು ಸಚಿವರೊಂದಿಗೆ ಪರಪ್ಪನ ಅಗ್ರಹಾರ ಜೈಲಲ್ಲಿದ್ದವರಿಗೆ ನಮ್ಮನ್ನು ಟೀಕಿಸುವ ಯೋಗ್ಯತೆಯೇ ಇಲ್ಲ ಎಂದು ಹೇಳಿದರು.
ಬಿಜೆಪಿಯವರಿಗೆ ಕಾಮನ್‌ಸೆನ್ಸ್ ಇಲ್ಲ: ರಾಜ್ಯ ಬಜೆಟ್ ಮಂಡನೆ ವಿಚಾರದಲ್ಲಿ ತಕರಾರು ತೆಗೆಯುವ ಬಿಜೆಪಿಯವರಿಗೆ ಕಾಮನ್‌ಸೆನ್ಸ್ ಇದೆಯೇ? ಪಂಚರಾಜ್ಯಗಳ ಚುನಾವಣೆ ನಡೆಯುವಾಗ ಕೇಂದ್ರ ಸರ್ಕಾರ ಬಜೆಟ್ ಮಂಡಿಸಬಹುದು. ಆದರೆ ಎರಡು ಕ್ಷೆÒàತ್ರಗಳ ಉಪಚುನಾವಣೆ ನಡೆಯುವುದರ ಹಿನ್ನೆಲೆಯಲ್ಲಿ ಇಡೀ ರಾಜ್ಯಕ್ಕೆ ಅನ್ವಯಿಸುವ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಬಾರದೇ ಎಂದು ಟೀಕಿಸಿದರು.