Advertisement
ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಘಟನೆಯಾಗಿರುವ ಸ್ವಯಂ ಸೇವಕ ಸಂಘ ರಾಷ್ಟ್ರ ಭಕ್ತಿ, ಸಂಸ್ಕಾರ, ಯೋಗ್ಯ ವ್ಯಕ್ತಿತ್ವ ಶಾರೀರಿಕ ದೃಢತೆ, ಗೋ ಸಂರಕ್ಷಣೆ, ಸಂವರ್ಧನೆ, ಧರ್ಮ ಜಾಗರಣೆ, ಗ್ರಾಮ ವಿಕಾಸದಂತಹ ಅಭಿವೃದ್ಧಿ ಚಟುವಟಿಕೆಗಳನ್ನು ದೇಶದ 60 ಸಾವಿರ ಗ್ರಾಮಗಳಲ್ಲಿ1.70 ಲಕ್ಷ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ. ಸಂಘ ಸಂಸ್ಕೃತಿ, ಯೋಗ್ಯ ವ್ಯಕ್ತಿತ್ವ ನಿರ್ಮಾಣ, ಸಮಾಜ ಹಿತ ಕಾಯುವ ಜೊತೆಯಲ್ಲಿ 5 ಆಯಾಮಗಳ ಮೂಲಕ ಧರ್ಮ ಜಾಗರಣಾ ಕಾರ್ಯ ಮಾಡುತ್ತಿದೆ ಎಂದರು.
ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಸಂಸ್ಕಾರ, ಆಚಾರ, ವಿಚಾರ ಪಡೆದುಕೊಂಡು ತಮ್ಮ ಕ್ಷೇತ್ರಗಳಲ್ಲಿ ಹಿಂದೂ ಸಮಾಜವನ್ನು ಗಟ್ಟಿಗೊಳಿಸುವ ಕೆಲಸ, ವ್ಯಕ್ತಿತ್ವ ವಿಕಾಸ, ಶರೀರ ಗಟ್ಟಿಗೊಳಿಸುವ ಜೊತೆಗೆ ಬೌದ್ಧಿಕ ವಿಕಾಸ ನೀಡುವ ಕಾರ್ಯ ಯಶಸ್ವಿಯಾಗಿದೆ. ಡಾ|ಹೆಗಡೆವಾರ 1925ರ ವಿಜಯ ದಶಮಿಯಂದು ಹುಟ್ಟು ಹಾಕಿದ ಈ ಸಂಸ್ಥೆ ಇಂದಿಗೂ ನಿರಂತರ ಹಿಂದೂ ಧರ್ಮದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಲಿದೆ. ಕೆಲ ರಾಷ್ಟ್ರ ನಾಯಕರು ಸಂಘಟನೆ ಬಗ್ಗೆ ಅಪಸ್ವರ ಹೇಳಿದ್ದರೂ ಸಹ ಸಂಘದ ನೇತಾರ ಹೆಗಡೆವಾರ ನನಗೆ ದೇಶಾಭಿಮಾನದ ಹುಚ್ಚಿದೆ. ಅದಕ್ಕಾಗಿ ನಾನು
ಸಂಘಟನೆ ಮಾಡುತ್ತಿದ್ದೇನೆ ಎಂದು ಮಾರ್ಮಿಕವಾಗಿ ನುಡಿದಿದ್ದರು ಎಂದರು.
Related Articles
ಪ್ರಭಾಕರ ಬಗಲಿ, ದಯಾನಂದ ಸುರಪುರ, ಕಾಸುಗೌಡ ಬಿರಾದಾರ, ಸಂಕೇತ ಬಗಲಿ, ಮಲ್ಲಯ್ಯ ಪತ್ರಿಮಠ, ಅನಿಲ ಜಮಾದಾರ, ವಿರಾಜ್ ಪಾಟೀಲ, ಡಾ| ಶಹಾ, ಜಗದೀಶ ಕ್ಷತ್ರಿ, ದಯಾನಂದ ಸುರಪುರ, ಶ್ರೇಣಿಕ್ ಪಾಟೀಲ, ಪ್ರಶಾಂತ ಗವಳಿ, ಶೀಲವಂತ ಉಮರಾಣಿ, ಶ್ರೀಶೈಲಗೌಡ ಬಿರಾದಾರ, ಕಿರಣ ಕ್ಷತ್ರಿ, ಸೋಮು ನಿಂಬರಗಿಮಠ, ಕಿರಣ ಕ್ಷತ್ರಿ ಇದ್ದರು. ಸ್ವಯಂ ಸೇವಕ ಪ್ರಕಾಶ ಕಟ್ಟಿಮನಿ ಸ್ವಾಗತಿಸಿದರು. ವಿವೇಕಾನಂದ ಹಂಜಗಿ ವರದಿ ವಾಚಿಸಿದರು.
Advertisement