Advertisement

ಮತಾಂಧ ಶಕ್ತಿಗಳ ಧರ್ಮ ಎಂದರೆ ರಕ್ತಪಾತ: ಕನ್ಹಯ್ಯ ಲಾಲ್ ಹತ್ಯೆ ಕುರಿತು ಆರಗ

02:06 PM Jun 29, 2022 | Team Udayavani |

ಬೆಂಗಳೂರು : ಮತಾಂಧ ಶಕ್ತಿಗಳ ಧರ್ಮ ಎಂದರೆ ರಕ್ತಪಾತ. ಧರ್ಮ ಎಂದರೆ ಈ ರೀತಿ ತಿಳುವಳಿಕೆ ಏನಿದೆ. ಇಡಿ ಜಗತ್ತಿನಲ್ಲಿ ಅವರು ಸುಖಾವಾಗಿಲ್ಲ. ಜಗತ್ತು ಶಾಂತಿಯಿಂದ ಬದುಕುವುದಕ್ಕೆ ಬಿಡುತ್ತಿಲ್ಲ. ಎಲ್ಲ ಕಡೆ ಈ ರೀತಿ ಕೃತ್ಯ ನಡೆಸುತ್ತಿದ್ದಾರೆ. ಇದನ್ನು ಖಂಡಿಸಬೇಕು,ಮತಾಂಧರಿಗೆ ಶಿಕ್ಷೆ ಆಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

Advertisement

ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಅದನ್ನು ನೋಡಬಾರದು. ಅದು ಅತ್ಯಂತ ಕ್ರೂರ. ಅಮಾನವೀಯ. ಏನು ಮಾಡುವುದು ಅದನ್ನ ತೋರಿಸಿದ್ದಾರೆ. ಅವರು ಮನುಷ್ಯರೇ ಅಲ್ಲ ಎಂಬುದನ್ನ ತೋರಿಸಿದ್ದಾರೆ. ಈ ರೀತಿ ರಾಕ್ಷಸಿ ಪೈಶಾಚಿಕ ಕೃತ್ಯ ಮಾಡುವರನ್ನ ಯಾವುದೇ ರೀತಿ ಕ್ಷಮಿಸ ಬಾರದು.ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಅದನ್ನ ಯೋಚನೆ ಮಾಡಬೇಕಾಗುತ್ತದೆ ಎಂದರು.

ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಇದಕ್ಕೆ ಉತ್ತರ ಕೊಡಬೇಕಿದೆ. ಈ ರೀತಿ ಜನರನ್ನ ಮಟ್ಟ ಹಾಕಲು ಆ ಸರ್ಕಾರ ವಿಫಲವಾಗಿದೆ. ಜನ ಸಮುದಾಯವೇ ಖಂಡಿಸಬೇಕು. ಆಗ ಮಾತ್ರ ಈ ರೀತಿಯ ದ್ರೋಹಿಗಳು ತಲೆ ಎತ್ತಲಿಕ್ಕೆ ಕಡಿವಾಣ ಆಗುತ್ತದೆ. ಹಾಗಾಗಿ ಈ ಕೃತ್ಯ ಅತ್ಯಂತ ದುರದೃಷ್ಟಕರ ಎಂದರು.

ಪತ್ರಕರ್ತ ಸುವೇರ್ ಬೆಂಗಳೂರಿಗೆ ಕರೆತರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಮಾಹಿತಿ ಇದೆ. ಆತನನ್ನು ಅರೆಸ್ಟ್ ಮಾಡಿದ್ದಾರೆ. ಕಾನೂನು ಕ್ರಮ ಆಗುತ್ತಿದೆ. ಬೆಂಗಳೂರಿಗೆ ಕರೆದುಕೊಂಡು ಬಂದರೆ, ದೆಹಲಿ ಪೊಲೀಸರಿಗೆ ನಮ್ಮ ಪೊಲೀಸರು ಸಹಕಾರ ಕೊಡುತ್ತಾರೆ.ಯಾಕೆಂದರೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅದನ್ನು ಮಾಡುವ ಅವಶ್ಯಕತೆ ಇದೆ ಎಂದರು.

ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ , ಸಹಜವಾಗಿ ಎಲ್ಲರೂ ಖಂಡಿಸಬೇಕು. ಪಕ್ಷ, ಧರ್ಮ ಬಿಟ್ಟು ಮಾನವೀಯತೆಯಿಂದ ಖಂಡಿಸಬೇಕು ಎಂದರು.

Advertisement

40% ಕಮಿಷನ್ ಪ್ರಧಾನಿ ಕಚೇರಿಯಿಂದ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಆ ಬಗ್ಗೆ ಮಾಹಿತಿ ಇಲ್ಲ. ತನಿಖೆ ನಡೆಸಲಿ,ನಾವು ಭ್ರಷ್ಟಾಚಾರ ಪರವಾಗಿದ್ದೀವಾ?ಭ್ರಷ್ಟಾಚಾರ ವಿರೋಧವಾಗಿದ್ದೇವೆ. ಪತ್ತೆ ಹಚ್ಚಲಿ ಯಾರು ಆ ತರ ಮಾಡುತ್ತಾ ಇದ್ದಾರೆ. ಅವರ ಹೆಡೆಮುರಿ ಕಟ್ಟೋಣ.ಯಾರು ಯಾವ ಹಿನ್ನೆಲೆಯಲ್ಲಿ ಯಾರ ಹೆಸರು ಹೇಳುತ್ತಾರೆ, ಹೇಳುವುದಕ್ಕೆ ಆಗುವುದಿಲ್ಲ.ಹೆಸರು ಹೇಳಿದಾಕ್ಷಣ ಅಪರಾಧಿ ಅಂತ ಹೇಳುವುದಕ್ಕೆ ಆಗುವುದಿಲ್ಲ, ಸಾಬೀತಾಗಬೇಕಾಗುತ್ತೆ, ಸಾಕ್ಷಾಧಾರ ನೀಡಬೇಕಾಗುತ್ತೆ ಎಂದರು.

ರಾತ್ರಿ ವೇಳೆ ನಿರ್ದಿಷ್ಟ ಪ್ರದೇಶಗಳಲ್ಲಿ ಹೋಟೆಲ್ ತೆರೆಯಲು ಅನುಮತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅಂತರ್ ರಾಜ್ಯ ನಿಲ್ದಾಣ ಬಸ್ ಬರುತ್ತಾವೆ . ಅಲ್ಲಿ ಇಳಿದುಕೊಂಡವರಿಗೆ ರಾತ್ರಿ ಬೆಳಗಿನ ಜಾವ ಆಹಾರ ಬೇಕಾಗುತ್ತದೆ. ಇಡಿ ಟೌನ್ ನಲ್ಲಿ ಓಪನ್ ಮಾಡಬೇಕಾದರೆ ಇಂಡಸ್ಟ್ರಿ ಇಲಾಖೆ,ಕಾರ್ಮಿಕ ಇಲಾಖೆ ಸಭೆ ಆಗಿದೆ, ನಮ್ಮ ಇಲಾಖೆ ಜೊತೆ ಚರ್ಚೆ ಮಾಡಿದಾಗ ಎನು ಕಷ್ಟ ಆಗುತ್ತದೆ , ರಾತ್ರಿ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡುವುದು ಬಹಳ ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ನಾವು ಆಲೋಚನೆ ಮಾಡುತ್ತೇವೆ. ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಕೈಗಾರಿಕೆಗಳು ಇರುವ ಕಡೆ ಓಪನ್ ಮಾಡಬಹುದು,ಇಡಿ ಟೌನ್ ನಲ್ಲಿ ಹೋಟೆಲ್ ಓಪನ್ ಮಾಡುವ ಬಗ್ಗೆ ಇನ್ನೂ ಚರ್ಚೆ ‌ನಡೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next