ಬೆಳ್ತಂಗಡಿ: ಧರ್ಮ ಇರುವುದು ಆಚರಣೆಗೆ, ಅನುಕೂಲಕ್ಕೆ. ಆದರೆ ಅದು ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ನಮ್ಮ ಸಂವಿಧಾನವೂ ಅದನ್ನೇ ಬೋಧಿಸುತ್ತದೆ ಎಂದು ತಹಶೀಲ್ದಾರ್ ಸಣ್ಣರಂಗಯ್ಯ ಹೇಳಿದರು. ಅವರು ಶುಕ್ರವಾರ ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ತಾ| ಮಟ್ಟದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣಗೈದು ಮಾತನಾಡಿದರು.
ಪ್ರಧಾನ ಭಾಷಣ ಮಾಡಿದ ನ್ಯಾಯವಾದಿ ಶ್ರೀಕೃಷ್ಣ ಶೆಣೈ, ರಾಷ್ಟ್ರೀಯ ಹಬ್ಬ ಎಂದರೆ ದೇಶದ ಬಗ್ಗೆ ಚಿಂತನೆ ಮಾಡುವ ದಿನ. ಎಲ್ಲ ದೇಶಗಳ ಸಂವಿಧಾನದ ಉತ್ತಮ ಅಂಶಗಳನ್ನು ಎರವಲು ಪಡೆದು ರಚಿಸಲ್ಪಟ್ಟ ಸಂವಿಧಾನ ನಮಗೆ ಪವಿತ್ರ ಗ್ರಂಥ. ನಮ್ಮ ಹಕ್ಕುಗಳನ್ನು ತಿಳಿದು ಇತರರ ಹಕ್ಕುಗಳನ್ನು ಗೌರವಿಸುವುದು, ರಕ್ಷಿಸುವುದೂ ನಮ್ಮ ಜವಾಬ್ದಾರಿ. ನಾವು ಸಂವಿಧಾನದಿಂದ ಅನುಶಾಸಿತರಾಗಬೇಕು. ಕಾನೂನು ಪಾಲಿಸುವ ನಾಗರಿಕರಾದಾಗ ಸಂವಿಧಾನದ ಉದ್ದೇಶ ಸಾಫಲ್ಯವಾಗುತ್ತದೆ. ಹಕ್ಕಿಗಿಂತ ಹೆಚ್ಚು ಕರ್ತವ್ಯದ ಕುರಿತು ಮಾತನಾಡಿದಾಗ ದೇಶ ಬಲಿಷ್ಠವಾಗುತ್ತದೆ ಎಂದರು. ನಗರ ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ಸದಸ್ಯರಾದ ಸುಶೀಲಾ, ಜಯಶೀಲಾ, ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಎಪಿಎಂಸಿ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ನ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವಪ್ರಸಾದ ಅಜಿಲ, ಶಿಕ್ಷಣಾಧಿಕಾರಿ ಗುರುಪ್ರಸಾದ್, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ. ಲಕ್ಷ್ಮಣ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಯಶೋಧರ ಸುವರ್ಣ, ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಲಕ್‌ಪ್ರಸಾದ್ ಜಿ., ಮಾಜಿ ಸೈನಿಕ ಎಂ.ಆರ್. ಜೈನ್, ಗೃಹರಕ್ಷಕದಳ ಕಮಾಂಡೆಂಟ್ ಜಯಾನಂದ್ ಲಾೖಲ, ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವಶಂಕರ್ ಉಪಸ್ಥಿತರಿದ್ದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್ ಸ್ವಾಗತಿಸಿ, ಕಂದಾಯ ಇಲಾಖೆ ಪ್ರಥಮ ದರ್ಜೆ ಗುಮಾಸ್ತ ಶಂಕರ್, ನಿವೃತ್ತ ಶಿಕ್ಷಕ ಗಂಗಾಧರ್ ಕಾರ್ಯಕ್ರಮ ನಿರ್ವಹಿಸಿದರು.
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಪರಧರ್ಮ ಸಹಿಷ್ಣುತೆಯೇ ವಿನಾ ಪರಧರ್ಮ ನಿಂದನೆಯಲ್ಲ. ಸಂವಿಧಾನ ನೀಡಿದ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಬೇಕು.
–
ಸಣ್ಣರಂಗಯ್ಯ
ತಹಶೀಲ್ದಾರ್