Advertisement

ಧರ್ಮ ಕಾರ್ಯಗಳಿಂದ ದೇಶ ಸಮೃದ್ಧಿ: ಉಪಾಧ್ಯಾಯ

11:19 AM Apr 07, 2017 | Team Udayavani |

ತೆಕ್ಕಟ್ಟೆ: ನಮ್ಮ ಪ್ರತಿಯೊಂದು ಚಟುವಟಿಕೆಗಳು ಧರ್ಮದಿಂದ ಕೂಡಿರಬೇಕು. ಜಗತ್ತು ಧರ್ಮದ ನೆಲೆಯಲ್ಲಿ ನಿಂತಿದೆ  ಎಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾ ಯಣ ಉಪಾಧ್ಯಾಯ ಹೇಳಿದರು. ಅವರು ಗುರುವಾರ ಕುಂದಾಪುರ ತಾಲೂಕು ಉಳೂ¤ರು ಗ್ರಾಮದ ಕಂಬಳಗದ್ದೆ ಮನೆಯ ನಾಗಬನದಲ್ಲಿ ಏಕಪವಿತ್ರ ನಾಗಮಂಡಲೋತ್ಸವದ  ಧಾರ್ಮಿಕ ಸಭೆಯಲ್ಲಿಮಾತನಾಡಿದರು. 

Advertisement

ಸಮ್ಮಾನ: ಝೀ ಟೀವಿ ಲಿಟ್ಲ ಚಾಂಪ್‌, ನ್ಯಾಶನಲ್‌ ಚಾನೆಲ್‌ ಮತ್ತು ವಾಯ್ಸ ಇಂಡಿಯಾ ಕಿಡ್ಸ್‌ ಟಾಪ್‌-9 ಖ್ಯಾತಿಯ ಕುಂದಾಪುರ ತಾಲೂಕಿನ ಉಳ್ತೂರಿನ ಪ್ರತಿಭೆ ಸಾನ್ವಿ ಶೆಟ್ಟಿ ಹಾಗೂ ನಾಗಮಂಡಲಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ಬಸೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇ ಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಂದ್ರ ಹೆಗ್ಡೆ ಹಲೂ¤ರು ಮೇಲ್ಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುಂಬಯಿ ಉದ್ಯಮಿ ಉಳೂ¤ರು ಮೋಹನದಾಸ್‌ ಶೆಟ್ಟಿ ಕಟ್ಟೆ
ಮನೆ, ವೇ| ಮೂ| ಸೀತಾರಾಮ ಅಡಿಗ ಉಳೂ¤ರು, ಹಿರಿಯರಾದ ಉಳೂ¤ರು ಕಂಬಳಗದ್ದೆ ಮನೆ ತೇಜಪ್ಪ ಶೆಟ್ಟಿ ಹಾಗೂ
ಹೇರಾಡಿ ಜಂಬೂರುಮನೆ ಜಗನ್ನಾಥ ಶೆಟ್ಟಿ ಕುಟುಂಬಸ್ಥರು, ಯು.  ಪ್ರಭಾಕರಶೆಟ್ಟಿ, ಯು.ಕೆ ವಾಸುದೇವ ಶೆಟ್ಟಿ, ಯು.ಎಸ್‌. ಮೋಹನದಾಸ್‌ ಶೆಟ್ಟಿ, ಕೆ. ಸುರೇಶ್‌ ಶೆಟ್ಟಿ , ವಸಂತ ಜೆ. ಶೆಟ್ಟಿ, ವಿನಯ ಕುಮಾರ್‌  ಶೆಟ್ಟಿ , ಪ್ರೀತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಯು.ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿ, ಪ್ರತಾಪ್‌ ಶೆಟ್ಟಿ ಉಳೂ¤ರು ವಂದಿಸಿದರು. ಯು. ಪ್ರಭಾಕರ ಶೆಟ್ಟಿ ಪ್ರಸ್ತಾವ
ನೆಗೈದರು. ಅಜಿತ್‌ ಶೆಟ್ಟಿ ಉಳೂ¤ರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next