ಹೈದರಾಬಾದ್: ವರ್ಷದ ಆರಂಭದಲ್ಲಿ ಕೇಕ್ ಕತ್ತರಿಸಿ ಪರಸ್ಪರ ಮುತ್ತು ಕೊಟ್ಟು ಹೊಸ ಜೀವನವನ್ನು ಶೀಘ್ರದಲ್ಲೇ ಆರಂಭಿಸುತ್ತೇವೆ ಎಂದು ಹೇಳಿದ್ದ ನಟ ನರೇಶ್ – ಪವಿತ್ರ ಲೋಕೇಶ್ ಮದುವೆಯಾಗಿದ್ದಾರೆ.
ನರೇಶ್ ಅವರಿಗೆ ಇದು 4ನೇ ಮದುವೆ, ಪವಿತ್ರ ಲೋಕೇಶ್ ಅವರಿಗೆ ಇದು 3ನೇ ಮದುವೆ. ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಪತಿ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ಇಬ್ಬರೂ ಕಾನೂನಾತ್ಮಕವಾಗಿ ವಿಚ್ಛೇದನ ನೀಡದೇ ಇದ್ದರೂ ದೂರವಾಗಿದ್ದಾರೆ.
ಕಳೆದ ಕೆಲ ಸಮಯದ ಹಿಂದೆ ನರೇಶ್ ಹಾಗೂ ಪವಿತ್ರ ಒಂದೇ ಹೊಟೇಲ್ ನಲ್ಲಿ ತಂಗಿದ್ದರು. ಇದನ್ನು ಅರಿತ ನರೇಶ್ ಪತ್ನಿ ರಮ್ಯಾ ಅವರು ಹೊಟೇಲ್ ಗೆ ಎಂಟ್ರಿ ಕೊಟ್ಟು ದೊಡ್ಡ ರಾದ್ಧಾಂತವನ್ನೇ ಮಾಡಿದ್ದರು. ಈ ವಿಚಾರ ಟಾಲಿವುಡ್ ನಲ್ಲಿ ದೊಡ್ಡ ಸುದ್ದಿಯಾಗಿತ್ತು.
ಆ ಬಳಿಕ ಟ್ವಿಟರ್ ನಲ್ಲಿ ಲಿಪ್ ಲಾಕ್ ಮಾಡುವ ವಿಡಿಯೋವನ್ನು ಹಾಕಿ ಹೊಸ ವರ್ಷಕ್ಕೆ ಹೊಸ ಜೀವನವನ್ನು ಆರಂಭಿಸುವುದರ ಬಗ್ಗೆ ಸುಳಿವು ನೀಡಿ ಮದುವೆ ಬಗ್ಗೆ ಸಣ್ಣ ಸೂಚನೆಯನ್ನು ಕೊಟ್ಟಿದ್ದರು. ಇದೀಗ ನರೇಶ್ – ಪವಿತ್ರಾ ಮದುವೆಯಾಗಿದ್ದಾರೆ.
Related Articles
ಈ ಕುರಿತ ವಿಡಿಯೋ ಹಂಚಿಕೊಂಡಿದ್ದು, ಸಪ್ತಪದಿ ತುಳಿದು, ಹಾರ ಬದಲಾಯಿಸಿಕೊಂಡು, ಹೊಸ ಜೀವನಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ನರೇಶ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ನರೇಶ್ ಮೊದಲು ಡ್ಯಾನ್ಸ್ ಮಾಸ್ಟರ್ ಶ್ರೀನು ಅವರ ಮಗಳನ್ನು ಮದುವೆಯಾಗಿದ್ದರು, ಆ ಬಳಿಕ ರೇಖಾ ಸುಪ್ರಿಯಾ ಎನ್ನುವವರನ್ನು ಮದುವೆಯಾಗಿ ವಿಚ್ಚೇದನದ ಬಳಿಕ ರಮ್ಯಾ ಅವರನ್ನು ಮದುವೆಯಾಗಿದ್ದರು.
ಸದ್ಯ ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ರೀಲ್ ಆ ಅಥವಾ ರಿಯಲಾ? ಎನ್ನುವ ಚರ್ಚೆಯಲ್ಲಿ ನೆಟ್ಟಿಗರು ನಿರತರಾಗಿದ್ದಾರೆ. ಏಕೆಂದರೆ ಇದೊಂದು ಸಿನಿಮಾ ದೃಶ್ಯವೆಂದು ಹೇಳಲಾಗುತ್ತಿದೆ.