Advertisement

ಭಗವತ್‌ ಚಿಂತನೆಯಿಂದ ನೆಮ್ಮದಿಯ ಜೀವನ

11:30 PM May 29, 2019 | sudhir |

ಮಲ್ಪೆ: ಭಗವಂತನ ಚಿಂತನೆಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ನುಡಿದರು.

Advertisement

ಅವರು ರವಿವಾರ ಭಗವತೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಭಗವತೀ ಸಭಾಗೃಹದಲ್ಲಿ ನಡೆದ ಪುತ್ತೂರು ಬ್ರಾಹ್ಮಣ ಮಹಾಸಭಾದ 15ನೇ ವರ್ಷದ ವಾರ್ಷಿಕೋತ್ಸವ ದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸಮ್ಮಾನ, ಗೋಪಾಲಕರಿಗೆ ಸಮ್ಮಾನ, ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮನಸ್ಸು ಚಂಚಲವಾದದ್ದು ಅದನ್ನು ನಿಗ್ರಹಿಸಿ, ಶ್ರವಣ ಮತ್ತು ಭಗವತ್‌ ಚಿಂತನೆಯಲ್ಲಿ ಆಸಕ್ತಿಯ ಮೂಲಕ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದರು. ದೇವರು ವರದಾನವಾಗಿ ನೀಡಿದ ಬುದ್ದಿಯನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಜಾನಪದ ವಿದ್ವಾಂಸ ಎಲ್ಲೂರು ಕೆ.ಎಲ್.ಕುಂಡಂತಾಯ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್‌. ಕೃಷ್ಣಾನಂದ ಛಾತ್ರ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ಪುತ್ತೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೈ. ಹಯವದನ ಭಟ್, ಗೌರವಾಧ್ಯಕ್ಷ ಪಿ. ರಾಮಭಟ್ ಮಹಾಸಭಾದ ಅಂಗಸಂಸ್ಥೆ ವಿದ್ಯಾನಿಧಿ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಅಡಿಗ, ಆಪದ್ಬಾಂದವ ಸೇವಾಸಮಿತಿ ಅಧ್ಯಕ್ಷ ನರಸಿಂಹ ಆಚಾರ್‌, ಕಾರ್ಯದರ್ಶಿ ಸುರೇಶ್‌ ಕಾರಂತ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧಕ ಜಗದೀಶ್‌ ಭಟ್ ಮತ್ತು ಗೋಪಾಲಕ ಸತ್ಯನಾರಾಯಣ ಹೆಗ್ಡೆ ಕೊಡಂಕೂರು ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

Advertisement

ಪಿಯುಸಿ ಮತ್ತು ಎಸ್‌ಎಸ್‌ಎಲ್ಸಿ ಶೇ. 90ರ ಮೇಲ್ಪಟ್ಟು ಅಂಕ ಗ‌ಳಿಸಿದ ಸುಮಂತ್‌ ಕಾರಂತ್‌, ಆದಿತ್ಯ ಗಾಂವ್ಕರ್‌, ನಿಖೀತಾ ಬಾಳ್ತಿಲ್ಲಾಯ, ಪ್ರದ್ಯುಮ್ನ ಭಟ್, ಕೃಷ್ಣಪ್ರಸಾದ್‌, ಅಭಿಷೇಕ್‌ ಆಚಾರ್ಯ, ಅಕ್ಷಯ್‌, ಕಾರ್ತಿಕ್‌ ಆಚಾರ್ಯ ಅವರುಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರ ಕ್ರೀಡೋತ್ಸವದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಶ್ರೀಪಾದರು ಮಹಾಸಭಾದ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿದರು.

2019-20ನೇ ಸಾಲಿಗೆ ಆಯ್ಕೆಯಾದ ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಜೋಷಿ, ಕಾರ್ಯದರ್ಶಿ ಜಿ.ವಿ. ಆಚಾರ್ಯ, ಕೋಶಾಧಿಕಾರಿ ವಿಜಯ್‌ ಕುಮಾರ್‌ ಮತ್ತು ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಪುತ್ತೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೈ.ಹಯವದನ ಭಟ್ ಸ್ವಾಗತಿಸಿ, ಪ್ರಾಸ್ತವಿಸಿದರು. ಕಾರ್ಯದರ್ಶಿ ಸುರೇಶ್‌ ಕಾರಂತ್‌ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಚೈತನ್ಯ ಎಂ.ಜಿ ಸಮ್ಮಾನ ಪತ್ರ ವಾಚಿಸಿದರು. ಶ್ರೀಶ ಭಟ್ ಹೊಸ ಸದಸ್ಯರನ್ನು ಪರಿಚಯಿಸಿದರು. ಶಿವರಾಮ್‌ ರಾವ್‌ ಮತ್ತು ಪ್ರಿಯವಂದಾ ಐತಾಳ್‌, ಹರಿಪ್ರಸಾದ್‌ ವಂದಿಸಿದರು. ಜಯಶಂಕರ ಕಂಗಣ್ಣಾರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next