Advertisement

ಅರಿವಿನಿಂದ ಎಚ್‌ಐವಿ ಪೀಡಿತರಿಗೆ ನೆಮ್ಮದಿ ಬದುಕು

05:08 PM Dec 02, 2018 | |

ಶಿವಮೊಗ್ಗ: ನಿರಂತರ ಅರಿವು ಮೂಡಿಸಿದ ಪರಿಣಾಮವಾಗಿ ಏಡ್ಸ್‌ ಸೋಂಕಿತರು ಸಮಾಜದ ಮುಖ್ಯವಾಹಿನಿಯಲ್ಲಿ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ. ಬಾದಾಮಿ ಹೇಳಿದರು.

Advertisement

ಶನಿವಾರ ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ನ್ಯಾಯವಾದಿಗಳ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್‌ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಸಂಸ್ಥೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಿವಮೊಗ್ಗ ರಕ್ತನಿಕೇಂದ್ರಗಳು ಹಾಗೂ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು. 

 ದಶಕಗಳ ಹಿಂದೆ ಏಡ್ಸ್‌ ರೋಗಕ್ಕೆ ತುತ್ತಾದ ವ್ಯಕ್ತಿ ಸಮಾಜಕ್ಕೆ ಅಂಜಿಕೊಂಡು ಆತ್ಮಹತ್ಯೆಯ ದಾರಿ ಕಂಡುಕೊಳ್ಳುತ್ತಿದ್ದರು. ಸಮಾಜವೂ ಕೂಡ ಏಡ್ಸ್‌ ಸೋಂಕಿತರನ್ನು ತುಚ್ಚವಾಗಿ ಕಾಣುತ್ತಿತ್ತು. ಪ್ರಸ್ತುತ ಸಂದರ್ಭದಲ್ಲಿ ಸೋಂಕಿತರು ನೆಮ್ಮದಿಯಿಂದ ಜೀವಿಸುವಂತಾಗಿದೆ ಎಂದರು.

 ಇತ್ತೀಚಿನ ವರ್ಷಗಳಲ್ಲಿ ಏಡ್ಸ್‌ ಕಾಯಿಲೆ ನಿಯಂತ್ರಣಕ್ಕೆ ಬಂದಿರುವುದು ಹಲವು ಸಮೀಕ್ಷೆಗಳಿಂದ ಋಜುವಾತಾಗಿದೆ. ಏಡ್ಸ್‌ ಜಾಗೃತಿ ಮತ್ತು ನಿಯಂತ್ರಣ ಕಾರ್ಯಕ್ರಮದ ಯಶಸ್ವಿ ಅನುಷ್ಠಾನದಲ್ಲಿ ಶಿವಮೊಗ್ಗ 5ನೇ ಸ್ಥಾನದಲ್ಲಿದೆ. ಏಡ್ಸ್‌ ಮಾರಕ ರೋಗದಿಂದ ಬಳಲುತ್ತಿರುವವರನ್ನೇ ಬಂಡವಾಳ ವನ್ನಾಗಿಸಿಕೊಂಡು ಚಿಕಿತ್ಸೆ ನೀಡುವುದಾಗಿ ನಂಬಿಸಿ ವಂಚಿಸುತ್ತಿರುವ ಅನೇಕ ಪ್ರಕರಣಗಳು ನೆರೆಯ ಕೇರಳ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. 

ಬಹುತೇಕರು ತಿಳಿಯಲೇಬೇಕಾದ ವಿಷಯವೆಂದರೆ ಈವರೆಗೆ ಏಡ್ಸ್‌ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಯಾವುದೇ ಚಿಕಿತ್ಸೆಯನ್ನು ಜಗತ್ತಿನಲ್ಲಿಯೇ ಕಂಡುಹಿಡಿಯಲಾಗಿಲ್ಲ. ಆದರೆ, ಅದನ್ನು ನಿಯಂತ್ರಿಸುವಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

Advertisement

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ವಿ.ಸಿ.ವೆಂಕಟೇಶ್‌ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಡಾ| ವಿ.ಎಲ್‌. ಎಸ್‌.ಕುಮಾರ್‌ ಅವರು ಏಡ್ಸ್‌ ಮಾರಕ ರೋಗ ಹರಡುವ ಕ್ರಮ ಹಾಗೂ ನಿಯಂತ್ರಣ ಕ್ರಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಹನುಮಂತಪ್ಪ, ಆರ್‌.ಸಿ.ಎಚ್‌. ಅಧಿಕಾರಿ ಡಾ| ನಟರಾಜ್‌, ರಮೇಶ್‌ ಶಾಸ್ತ್ರಿ, ಕೆ.ಪಿ.ಹಿಂದುಕುಮಾರ್‌, ಭಾರತಿ, ಚಂದ್ರಶೇಖರ್‌, ಡಾ| ಶಮಾಬೇಗಂ, ವಕೀಲರ ಸಂಘದ ಕಾರ್ಯದರ್ಶಿ ಮಂಜುನಾಥ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next