Advertisement
ಪರಿಹಾರಕ್ಕೆ ಸಲ್ಲಿಕೆಯಾಗಿದ್ದ ಅರ್ಜಿಗಳು ಜಿಲ್ಲಾಧಿಕಾರಿಗಳಿಂದ ಪರಿಶೀಲನೆಗೊಳಪಟ್ಟು ಅರ್ಹ ಎಂಬ ಮುದ್ರೆ ಒತ್ತಿದ್ದರೂ ಪರಿಹಾರ ಮಾತ್ರ ಕೈ ಸೇರಿಲ್ಲ. ರಾಜ್ಯ ಸರಕಾರದ ಜತೆ ಕೇಂದ್ರ ಸರಕಾರವೂ 50 ಸಾವಿರ ರೂ. ಪರಿಹಾರ ಘೋಷಿ ಸಿತ್ತು. ಬಿಪಿಎಲ್ ಮತ್ತು ಎಪಿಎಲ್ ಕುಟುಂಬ ದವರಿಗೆ ಕೇಂದ್ರದ ಪರಿಹಾರ ತಲುಪಿದೆ. ಆದರೆ ರಾಜ್ಯ ಸರಕಾರ ಬಿಪಿಎಲ್ ಕುಟುಂಬ ದವರಿಗೆ ಘೋಷಿಸಿದ ಪರಿಹಾರ ತಲುಪಿಲ್ಲ.
ಬಿಪಿಎಲ್ ಕುಟುಂಬಗಳಲ್ಲಿ ದುಡಿಯುವ ವಯಸ್ಕರು ಎಂದು ಮೊದಲ ಆದೇಶದಲ್ಲಿ ತಿಳಿಸ ಲಾಗಿತ್ತು. ಹೀಗಾಗಿ ಹಿರಿಯರು ಮೃತಪಟ್ಟಿದ್ದರೆ ಅವಕಾಶ ಇರಲಿಲ್ಲ. ಇದರಿಂದಾಗಿ ಬಹುತೇಕ ಕುಟುಂಬಗಳು ಪರಿಹಾರಕ್ಕೆ ಅರ್ಜಿ ಹಾಕ ದಂತಾಯಿತು. ಜನಪ್ರತಿನಿಧಿಗಳ ಒತ್ತಾಯದ ಅನಂತರ ಯಾವುದೇ ವಯಸ್ಸಿನ ಒಬ್ಬರಿಗೆ ಪರಿ ಹಾರ ಎಂದು ಮರು ತಿದ್ದುಪಡಿ ಮಾಡ ಲಾಯಿತು. ಅನಂತರ ಮತ್ತೆ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆಯಾದರೂ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಪರಿಹಾರ ಸಿಕ್ಕಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳ ಪ್ರಕಾರ, ಇದುವರೆಗೆ ಪರಿಹಾರಕ್ಕೆ ಸ್ವೀಕರಿಸಿರುವ ಅರ್ಜಿ ಗಳ ಸಂಖ್ಯೆ 15,999. ಆ ಪೈಕಿ ಬಿಪಿಎಲ್ ಕುಟುಂಬಗಳದ್ದು 9,080, ಎಪಿಎಲ್ ಕುಟುಂ ಬ ಗಳದ್ದು 6,918. ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡ ಬಿಪಿಎಲ್ ಪ್ರಕರಣಗಳು 6,736, ಎಪಿಎಲ್ ಪ್ರಕರಣಗಳು 5,242 ಸೇರಿ 11,978. 9,647 ಕುಟುಂಬಗಳಿಗೆ ಕೇಂದ್ರ ಸರಕಾರದ 50 ಸಾವಿರ ರೂ. ಪರಿಹಾರ ಸಿಕ್ಕಿದೆ.
Related Articles
Advertisement
ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ
38,243 ಮಂದಿ ಸಾವುರಾಜ್ಯ ಸರಕಾರದ ಅಂಕಿಅಂಶ ಪ್ರಕಾರ 2020ರ ಮಾ. 8ರಿಂದ ಇದುವರೆಗೆ ಕೊರೊ ನಾದಿಂದ ಮೃತಪಟ್ಟವರ ಸಂಖ್ಯೆ 38,243. ಆ ಪೈಕಿ 20 ಸಾವಿರ ಕುಟುಂಬಗಳು ಬಿಪಿಎಲ್ ವ್ಯಾಪ್ತಿಗೆ ಬರಬಹುದು ಎಂದು ಅಂದಾಜಿಸ ಲಾಗಿತ್ತು. ವಿಪಕ್ಷಗಳ ಪ್ರಕಾರ 1 ಲಕ್ಷ ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಬಹುತೇಕ ಪ್ರಕರಣಗಳಲ್ಲಿ ಕೊರೊನಾದಿಂದ ಮೃತಪಟ್ಟ ಪ್ರಮಾಣಪತ್ರ ಸಿಕ್ಕಿಲ್ಲ, ಪರಿಹಾರ ಕೊಡಬೇಕಾ ಗುತ್ತದೆ ಎಂದು ಕೊರೊನಾ ಮೃತ ಪ್ರಕರಣ ಮುಚ್ಚಿಡಲಾಗಿದೆ ಎಂಬ ಆರೋಪವೂ ಇದೆ. ಸಚಿವರು, ಶಾಸಕರ ಪಟ್ಟು
ಪರಿಹಾರ ನಾವೇ ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಪಟ್ಟು ಹಿಡಿದಿದ್ದಾರೆ. ಅಧಿ ಕಾರಿ ಗಳಿಂದ ಕೊಡಿಸಲು ಜನಪ್ರತಿನಿಧಿಗಳಿಗೆ ಮನಸ್ಸಿಲ್ಲ. ಹೀಗಾಗಿ ಪರಿಹಾರ ವಿತರಣೆ ವಿಳಂಬ ವಾಗುತ್ತಿದೆ. ಪರಿಷತ್ ಚುನಾವಣೆ ನೀತಿ ಸಂಹಿತೆ ಡಿ. 14ರ ವರೆಗೆ ಇದೆ. ಬಳಿಕ 56 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಡಿ. 17ರಿಂದ ಜಾರಿಯಾಗಲಿದೆ. ಹೀಗಾಗಿ ಪರಿಹಾರ ವಿತರಣೆ ಮತ್ತಷ್ಟು ವಿಳಂಬ ವಾಗಲಿದೆ ಎನ್ನಲಾಗುತ್ತಿದೆ. ದೇಶದಲ್ಲೇ ಮೊದಲಿಗೆ ರಾಜ್ಯ ದಲ್ಲಿ ಕೊರೊನಾದಿಂದ ಮೃತ ಪಟ್ಟ ಬಿಪಿಎಲ್ ಕುಟುಂಬ ಸದಸ್ಯ ರೊಬ್ಬ ರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಪರಿಹಾರ ವಿತರಿಸಲು ಯಾವುದೇ ಸಮಸ್ಯೆ ಇಲ್ಲ, ಚುನಾವಣ ನೀತಿ ಸಂಹಿತೆಯಿಂದ ತಡವಾಗಿದೆ.
– ಆರ್. ಅಶೋಕ್, ಕಂದಾಯ ಸಚಿವ -ಎಸ್. ಲಕ್ಷ್ಮೀನಾರಾಯಣ