Advertisement

ನೆಮ್ಮದಿ ಜೀವನಕ್ಕೆ ನಿಸ್ವಾರ್ಥ ಸೇವೆ ಸಹಕಾರಿ

03:03 PM Apr 29, 2019 | Suhan S |

ರಾಣಿಬೆನ್ನೂರ: ಈ ಪುಣ್ಯಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಸ್ವಾರ್ಥತೆಯನ್ನು ಬಿಟ್ಟು ನಿಸ್ವಾರ್ಥ ಸೇವೆಯಲ್ಲಿ ತೊಡಗಿದಾಗ ಮಾತ್ರ ಸಮಾಜಕ್ಕೆ ಅಪಾರ ಕೊಡುಗೆ ನೀಡಿದಂತಾಗುತ್ತದೆ ಎಂದು ಖ್ಯಾತ ಮೂಳೆಗಳ ಶಸ್ತ್ರಚಿಕಿತ್ಸಾ ತಜ್ಞ ಡಾ| ಮುರಳೀಧರ ಹೇಳಿದರು.

Advertisement

ರವಿವಾರ ಇಲ್ಲಿನ ಲಯನ್ಸ್‌ ಶಾಲೆಯ ಆವರಣದಲ್ಲಿ ಲಯನ್ಸ್‌ ಮತ್ತು ಲಯನೆಸ್‌ ಕ್ಲಬ್‌, ದಿ|ಬಸಮ್ಮ ದಿ|ಶಿವಪ್ಪ ಕುರಗೋಡಪ್ಪನವರ ಹಾಗೂ ಮಕ್ಕಳು, ಬೆಂಗಳೂರಿನ ಕರ್ನಾಟಕ ಯೂತ್‌ ಫೆಡರೇಷನ್‌ ಆಶ್ರಯದಲ್ಲಿ ಉಚಿತ ಜೈಪುರ ಕಾಲುಗಳ ಜೋಡಣಾ ಶಿಬಿರದಲ್ಲಿ ರೋಗಿಗಳಿಗೆ ಕೃತಕ ಕಾಲುಗಳನ್ನು ಜೋಡಿಸಿ ಮಾತನಾಡಿದ ಅವರು, ದಾನ, ಧರ್ಮ, ಸಹಾಯ ಸಹಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಿದಾಗ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು ಎಂದರು.

ಉದಾರ ಮನಸ್ಸಿನ ದಾನಿಗಳು ಇಂದು ಸಮಾಜಕ್ಕೆ ಅವಶ್ಯಕವಾಗಿ ಬೇಕಾಗಿದ್ದಾರೆ. ಅಂತವರಿಂದ ಮತ್ತೂಬ್ಬರ ಜೀವನ ನೆಮ್ಮದಿಯ ಜೊತೆಗೆ ಸುಂದರ ಬದುಕು ಕಾಣಲು ಕಾರಣೀಕರ್ತರಾಗುತ್ತಾರೆ. ಇಂತಹ ಉದಾರ ಮನಸ್ಸಿನ ದಾನಿಗಳು ನಗರದಲ್ಲಿರುವುದು ಸಂತೋಷದ ಸಂಗತಿಯಾಗಿದೆ. ಕುರಗೋಡಪ್ಪನವರ ಕುಟುಂಬವು ಇದೀಗ ಕೃತಕ ಕಾಲುಗಳ ನೆರವಿಗೆ ಬಂದಿರುವುದು ರೋಗಿಗಳ ಪಾಲಿಗೆ ವರವಾಗಿದ್ದಾರೆ ಎಂದರು.

ದಾನಿ ಬಸವರಾಜ ಕುರಗೋಡಪ್ಪನವರ ಮಾತನಾಡಿ, ಪರೋಪಕಾರಂ ಇದಂ ಪುರುಷಾರ್ಥ ಲಕ್ಷಣಂ ಎಂಬಂತೆ ಮನುಷ್ಯ ತನ್ನ ಜೀವೀತಾವಧಿಯಲ್ಲಿ ಪರ ಉಪಕಾರ ಮಾಡುವುದರಿಂದ ಪುಣ್ಯದ ಫಲ ನಮ್ಮ ಖಾತೆಗೆ ಜಮೆ ಆಗುತ್ತದೆ. ಇದರಿಂದ ಮನುಷ್ಯನ ಜೀವನ ಸಾರ್ಥಕತೆ ಪಡೆಯಲು ಸಾಧ್ಯ, ಉಪಕಾರ ಮನೋಭಾವನೆಯೇ ನಿಜವಾದ ಧರ್ಮ, ಹನುಮನ ಸೇವೆ ಸಲ್ಲಿಸಲು ಸಾಧ್ಯವಾಗದಿದ್ದರೂ ಅಳಿಲು ಸೇವೆ ಶಕ್ತಿಯನ್ನು ಆ ಪರಮಾತ್ಮ ಕರುಣಿಸಿದ್ದಾನೆ ಎಂದರು. ವರ್ತಕ ಎಂ.ಎಸ್‌.ಅರಕೇರಿ, ನಿವೃತ್ತ ಉಪನ್ಯಾಸಕ ಬಿ.ಬಿ. ನಂದ್ಯಾಲ, ಲಯನ್ಸ್‌ ಅಧ್ಯಕ್ಷ ರೇವಣಗೌಡ ಗ್ಯಾನಗೌಡ್ರ, ಲಯನೆಸ್‌ ಅಧ್ಯಕ್ಷೆ ಗೀತಾ ಕಾಕೋಳ, ಎಂ.ಜಿ. ಮಣ್ಣಮ್ಮನವರ, ಬಸವರಾಜ ಬಡಿಗೇರ, ಪ್ರಭು ಹಲಗೇರಿ, ವಿನೋದ ಜಂಬಗಿ, ಎಂ.ಎಚ್.ಪಾಟೀಲ, ಆರ್‌.ವಿ ಸುರಗೊಂಡ, ಎಂ.ಜಿ.ಶೆಟ್ರ, ಟಿ.ವೀರಣ್ಣ, ಬಸವರಾಜ ಪಾಟೀಲ, ಗಣೇಶ, ನಾಗರಾಜ, ಗುಡ್ಡಪ್ಪ, ವೆಂಕಟರಾಮ, ಗೋಪಾಲ, ಅಶೋಕ ಗಂಗನಗೌಡ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next