Advertisement

ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ

04:54 PM Oct 21, 2018 | |

ಯಾದಗಿರಿ: ಧಾರ್ಮಿಕ ಕಾರ್ಯಗಳಿಂದ ಜೀವನದಲ್ಲಿ ನೆಮ್ಮದಿ ದೊರೆಯಲು ಸಾಧ್ಯ ಎಂದು ಹೆಡಗಿಮದ್ರದ ಶಾಂತ ಶಿವಯೋಗಿ ಮಠದ ಪೂಜ್ಯ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

Advertisement

ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನವರಾತ್ರಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬಂಗಾರಮ್ಮ ದೇವಿ ಪುರಾಣ ಮಂಗಳ ಮತ್ತು ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಾನವರು ಭೂಮಿ ಮೇಲೆ ಸಂಪಾದಿಸಿದ್ದು, ಯಾವುದೂ ಶಾಶ್ವತವಲ್ಲ. ಇದನ್ನು ಅರಿತು ಜೀವನದಲ್ಲಿ ಕೆಲ ಹೊತ್ತು ಧಾರ್ಮಿಕ ಕಾರ್ಯಗಳಿಗಾಗಿ ಮೀಸಲಿರಿಸಬೇಕು ಎಂದು ಹೇಳಿದರು. 

ಆಧುನಿಕ ದಿನಗಳ ಜೀವನ ಶೈಲಿಯಲ್ಲಿ ಭಗವಂತನ ನಾಮ ಸ್ಮರಣೆ ಮರೆಯಬಾರದು. ಪ್ರತಿ ಕಣ ಕಣದಲ್ಲಿಯೂ ಭಗವಂತನಿದ್ದಾನೆ. ಗ್ರಾಮಸ್ಥರೆಲ್ಲರೂ ಸೇರಿ ಬಂಗಾರಮ್ಮ ದೇವಿ ಪುರಾಣ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಷಯ.

ಇಂದಿನ ಪೀಳಿಗೆಗೆ ಧಾರ್ಮಿಕ ವಿಚಾರಗಳು ತಲೆ ಹೊಕ್ಕುವ ರೀತಿಯಲ್ಲಿ ತಿಳಿಸುವ ಅವಶ್ಯಕತೆ ಇದೆ. ನವರಾತ್ರಿ ಆಚರಣೆ ವಿಶೇಷತೆಗಳನ್ನು ವಿವರಿಸಿದರು. ಶಾಸಕ ವೆಂಕಟರಡ್ಡಿ ಮುದ್ನಾಳ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಆಚರಣೆಗಳಿಂದಲೇ ನಮ್ಮ ದೇಶದ ಸಂಸ್ಕೃತಿ ಅಚ್ಚಳಿಯದೇ ತನ್ನತನವನ್ನು ಉಳಿಸಿಕೊಂಡಿದ್ದು, ಬೆಳೆಯುತ್ತಿರುವ ನಗರ ಪ್ರದೇಶಗಳ ಜನರಲ್ಲಿ ಭಯ ಭಕ್ತಿ ಕುಂಠಿತಗೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೇ ಹಳ್ಳಿಗಳಿಂದಲೇ ನಮ್ಮ ಸಂಸ್ಕಾರ ಉಳಿಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ವೀರಭದ್ರಯ್ಯ ಹಿರೇಮಠ, ಶರಣಗೌಡ, ಬಂಗಾರಪ್ಪ ಜೀವನ್ನೋರ, ಚಂದಪ್ಪ, ಮಹಾದೇವಪ್ಪ ಜಲ್ಲಪ್ಪನೋರ, ಸಿದ್ದಲಿಂಗಪ್ಪ, ಬಾಬುಗೌಡ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಮುತ್ತೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next