Advertisement

ಸಾಹಿತ್ಯ ಅಧ್ಯಯನದಿಂದ ನೆಮ್ಮದಿ: ಭಾಸ್ಕರ

06:11 PM Apr 26, 2017 | Team Udayavani |

ನಗರ: ಸಾಹಿತ್ಯದಲ್ಲಿ ನೆಮ್ಮದಿ ಇದೆ. ಸಾಹಿತ್ಯ ಕೃತಿಗಳನ್ನು ಓದುವುದರಿಂದ ಮನಸ್ಸಿಗೆ ನೆಮ್ಮದಿ, ತೃಪ್ತಿಸಿಗುತ್ತದೆ. ಸಾಹಿತ್ಯ, ಕಲೆ ಗಳಿಗೆ ಪ್ರೋತ್ಸಾಹ ನೀಡುವ ಕಲಾವಿದರನ್ನು, ಸಾಧಕರನ್ನು ಗುರುತಿಸುವ ಕೆಲಸವನ್ನು ಮಾಡು ತ್ತಿರುವ ಜಾನಪದ ಸಾಹಿತ್ಯ ವೇದಿಕೆ ಕಾರ್ಯ ಶ್ಲಾಘನೀಯ ಎಂದು ತಾ| ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಹೇಳಿದರು.

Advertisement

ಪುತ್ತೂರು ರೋಟರಿ ಟ್ರಸ್ಟ್‌ ಹಾಲ್‌ನಲ್ಲಿ ಜಾನಪದ ಸಾಹಿತ್ಯ ವೇದಿಕೆ ಪುತ್ತೂರು ತಾಲೂಕು ಇದರ ವತಿಯಿಂದ ನಡೆದ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ದಿನಗಳಲ್ಲಿ ನಮ್ಮಲ್ಲಿ ಸಾಹಿ ತ್ಯದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಒಳ್ಳೆಯ ಸಾಹಿತ್ಯದ ಪುಸ್ತಕಗಳನ್ನು ಕೊಡಬೇಕು. ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ಇರಬೇಕು ಎಂದು ಹೇಳಿದರು.

ಸಾಧನೆಗೆ ಪ್ರೋತ್ಸಾಹ
ಸಭಾಧ್ಯಕ್ಷತೆ ವಹಿಸಿದ ಜಾನಪದ ಸಾಹಿತ್ಯ ವೇದಿಕೆಯ ಅಧ್ಯಕ್ಷ ಚಿದಾನಂದ ಕಾಮತ್‌ ಕಾಸರಗೋಡು ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರತಿಭೆಗಳನ್ನು ಇಲ್ಲಿ ಗೌರವಿ ಸಿದ್ದೇವೆ. ಇದು ಸಮ್ಮಾನ ಅಲ್ಲ. ಅವರ ಮುಂದಿನ ಸಾಧನೆಗೆ ನಾವು ನೀಡುವ ಪ್ರೋತ್ಸಾಹ. ಜಾನಪದ ಸಾಹಿತ್ಯ ವೇದಿಕೆಗೆ 10 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ದಶಸಂಭ್ರಮ, ಮುಂಗಾರು ಕವಿಗೋಷ್ಠಿಯನ್ನು ಆಯೋಜನೆ ಮಾಡಲಿದ್ದೇವೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಬೇಕಾಗಿದೆ ಎಂದು ಹೇಳಿದರು.

ಒಳಮೊಗ್ರು ಗ್ರಾ.ಪಂ ಸದಸ್ಯೆ ಉಷಾ ನಾರಾಯಣ್‌ ಕುಂಬ್ರ ಮಾತನಾಡಿ, ಒಳ್ಳೆಯ ಕೆಲಸಗಳಿಗೆ ಸಮಾಜದಲ್ಲಿ ಗೌರವ ಇದ್ದೇ ಇದೆ. ನಾವು ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು ಎಂದರು.
ಸಾಹಿತ್ಯ ವೇದಿಕೆಯ ಮಾಜಿ ಅಧ್ಯಕ್ಷ, ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯ ಕುಮಾರ್‌ ಭಂಡಾರಿ ಹೆಬ್ಟಾರ್‌ಬೈಲು ಮಾತನಾಡಿ, ಜಾನಪದ ಸಾಹಿತ್ಯ ವೇದಿಕೆ ಹಲವು ವರ್ಷಗಳಿಂದ ಸಮಾಜ ಮುಖೀ ಕೆಲಸಗಳನ್ನು  ಮಾಡುತ್ತಾ ಬಂದಿರುವುದು ಶ್ಲಾಘನೀಯ ವಿಷಯ. ವೇದಿಕೆಯಿಂದ ಇನ್ನಷ್ಟು ಒಳ್ಳೆಯ ಕಾರ್ಯಗಳು ನಡೆಯಲಿ ಎಂದರು.

ಸಮ್ಮಾನ ಸಮಾರಂಭ
ತಾ| ಅತ್ಯುತ್ತಮ ಯುವ ಪ್ರಶಸ್ತಿ ಪುರಸ್ಕೃತ ಸುನೀಲ್‌ ಕಾವು, ಯುವ ಪ್ರತಿಭೆ ಗುರುಪ್ರಿಯಾ ನಾಯಕ್‌, ಫಾರೂಕ್‌ ಮುಕ್ವೆ ಅವರನ್ನು ಸಮ್ಮಾ ನಿಸಲಾಯಿತು. ಸಂತೋಷ್‌ ಕುಮಾರ್‌, ಸಂತೋಷ್‌ ಮೊಟ್ಟೆತ್ತಡ್ಕ, ಯೂಸುಫ್‌ ಮೊದಲಾ ದವರನ್ನು ಅಭಿನಂದಿಸಲಾಯಿತು.
ಮಲ್ಲಿಕಾ ಜೆ. ರೈ ಪ್ರಾರ್ಥಿಸಿದರು. ಜಾನಪದ ಸಾಹಿತ್ಯ ವೇದಿಕೆಯ ಸಂಚಾಲಕ, ಪತ್ರಕರ್ತ ಉಮಾಪ್ರಸಾದ್‌ ರೈ ನಡುಬೈಲು ಸ್ವಾಗತಿಸಿದರು. ಜಾನಪದ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ, ಪತ್ರಕರ್ತ ಸಿಶೇ ಕಜೆಮಾರ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next