ನವದೆಹಲಿ:ಸಚಿನ್ ಪೈಲಟ್ ಹಾಗೂ 18 ಮಂದಿ ಕಾಂಗ್ರೆಸ್ ಬಂಡಾಯ ಶಾಸಕರ ವಿರುದ್ಧದ ಅನರ್ಹತೆ ಪ್ರಕ್ರಿಯೆಗೆ ತಡೆ ನೀಡಿರುವ ರಾಜಸ್ಥಾನ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಸ್ಪೀಕರ್ ಜೋಶಿಗೆ ಹಿನ್ನಡೆಯಾಗಿದ್ದು, ಹೈಕೋರ್ಟ್ ಆದೇಶಕ್ಕೆ ಯಾವುದೇ ತಡೆ ನೀಡದ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬಿಜೆಪಿ ಸೇರಲು 35 ಕೋಟಿ ಆಮಿಷ ಒಡ್ಡಿದ್ದ ಸಚಿನ್ ಪೈಲಟ್: ಕಾಂಗ್ರೆಸ್ ಶಾಸಕ
ಶಾಸಕರ ಅನರ್ಹತೆಗೆ ತಡೆ ನೀಡಿರುವ ರಾಜಸ್ಥಾನ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕೆಂಬ ಸ್ಪೀಕರ್ ಜೋಶಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಮನವಿಯನ್ನು ಪುರಸ್ಕರಿಸದ ಸುಪ್ರೀಂಕೋರ್ಟ್ ಯಾವುದೇ ತಡೆಯಾಜ್ಞೆ ನೀಡದೆ ವಿಚಾರಣೆಯನ್ನು ಸೋಮವಾರಕ್ಕೆ(ಜು.27) ಮುಂದೂಡಿದೆ.
ಇದನ್ನೂ ಓದಿ:ರಾಜಸ್ಥಾನ ರಾಜಕೀಯ: ಪೈಲಟ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸ್ಪೀಕರ್ ಸುಪ್ರೀಂಗೆ
ಮಾಜಿ ಡಿಸಿಎಂ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರ ವಿರುದ್ಧ ಜು.24ರ ವರೆಗೆ ಕ್ರಮ ಕೈಗೊಳ್ಳುವಂತೆ ಇಲ್ಲ ಎಂಬ ರಾಜಸ್ಥಾನ ಹೈಕೋರ್ಟ್ ನೀಡಿದ ಮಧ್ಯಾಂತರ ಆದೇಶದ ವಿರುದ್ಧ ವಿಧಾನಸಭೆ ಸ್ಪೀಕರ್ ಸಿ.ಪಿ.ಜೋಶಿ ಮೇಲ್ಮನವಿ ಸಲ್ಲಿಸಿದ್ದರು. ಜು. 23ರಂದು ನ್ಯಾ|ಅರುಣ್ ಮಿಶ್ರಾ, ನ್ಯಾ| ಬಿ.ಆರ್.ಗವಾಯಿ ಮತ್ತು ನ್ಯಾ| ಕೃಷ್ಣ ಮುರಾರಿ ಅವರ ನ್ನೊಳಗೊಂಡ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿದೆ.
ವಿಧಾನಸಭೆಯಲ್ಲಿ ಕೈಗೊಳ್ಳಲಾಗುವ ಶಾಸಕತ್ವ ಅಸಿಂಧು ಹಾಗೂ ಇನ್ನಿತರ ನಡಾವಳಿಗಳು ಸಾಂವಿಧಾನಿಕ ಚೌಕಟ್ಟಿನಲ್ಲಿ ನಡೆಯುತ್ತವೆ. ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶಿಸಿ ನಿರ್ದೇಶನಗಳನ್ನೂ ನೀಡುವುದು ಸಲ್ಲದು ಎಂದು ಸಿ.ಪಿ.ಜೋಶಿ ಅರ್ಜಿಯಲ್ಲಿ ವಾದಿಸಿದ್ದರು. ಸ್ಪೀಕರ್ ಅವರು ಮನವಿ ಸಲ್ಲಿಸಿದ ಬೆನ್ನಿಗೇ ಸುಪ್ರೀಂ ಕೋರ್ಟ್‌ನಲ್ಲಿ ತಾವೊಂದು ಕೇವಿ ಯಟ್ ಅರ್ಜಿ ಸಲ್ಲಿಸಿರುವ ಮಾಜಿ ಡಿಸಿಎಂ ಸಚಿನ್ ಪೈಲಟ್, ಬೆಂಬಲಿಗರ ಶಾಸಕರು “ನಮ್ಮ ಅಹವಾಲು ಕೇಳದೆಯೇ ಸ್ಪೀಕರ್ ಮನವಿ ಬಗ್ಗೆ ತೀರ್ಪು ನೀಡಬಾರದು’ ಎಂದು ಅರಿಕೆ ಮಾಡಿದ್ದರು.
ಇದನ್ನೂ ಓದಿ:ಸಚಿನ್ ಪೈಲಟ್ ಮತ್ತು ಬಂಡಾಯ ಶಾಸಕರಿಗೆ ತಾತ್ಕಾಲಿಕ ರಿಲೀಫ್ ನೀಡಿದ ರಾಜಸ್ಥಾನ ಹೈಕೋರ್ಟ್