Advertisement
252 ಜಾನುವಾರುಗಳು ಸಾವನ್ನಪ್ಪಿದ್ದು, ಎನ್‌ಡಿಆರ್‌ಎಫ್ ಮಾಗ ìಸೂಚಿಯಂತೆ ಕಂದಾಯ ಇಲಾಖೆ ಯಿಂದ ಪರಿಹಾರ ಒದಗಿಸಲಾಗುವುದು. ಇಲಾಖೆಯ ಎಲ್ಲ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನಷ್ಟ ಉಂಟಾದ ಜಾನುವಾರು ಮಾಲಕರುಗಳಿಗೆ ತತ್‌ಕ್ಷಣ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಇಲ್ಲದಿದ್ದರೆ, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಕೇವಲ ಹಸುಗಳಿಗಷ್ಟೇ ಅಲ್ಲ, ಕುರಿ, ಮೇಕೆ, ಮೊಲ, ಹಂದಿ, ಕೋಳಿ ಸೇರಿದಂತೆ ಎಲ್ಲ ಪ್ರಾಣಿಗಳ ರಕ್ಷಣೆಗೆ ನೆರವು ನೀಡಲಾಗುತ್ತದೆ ಎಂದರು. ಪಶು ಸಹಾಯವಾಣಿ
ಪಶು ವೈದ್ಯಾಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಸಾಧ್ಯವಾಗದಿದ್ದರೆ, ತುರ್ತು ಸಂದರ್ಭಗಳಲ್ಲಿ ಪಶು ಸಹಾಯವಾಣಿ 8277100200 ಮೂಲಕ ಸಂಪರ್ಕಿಸಿ, ದಿನದ 24 ಗಂಟೆಯೂ ಸೇವೆ ಪಡೆದುಕೊಳ್ಳಬಹುದಾಗಿದೆ.