ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯುತ್ ಮಗ್ಗ ನೇಕಾರರು ಸಹ ಸಂಕಷ್ಟದಲ್ಲಿರುವುದರಿಂದ ರಿಯಾಯಿತಿ ದರದಲ್ಲಿ ವಿದ್ಯುತ್ ಸರಬರಾಜು ಪಡೆಯುತ್ತಿರುವ ಘಟಕಗಳ ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಒಂದು ಬಾರಿಗೆ ಅನ್ವಯಿಸುವಂತೆ 2,000 ರೂ. ಪರಿಹಾರ ಧನವನ್ನು ನೇರವಾಗಿ ಈ ಕಾರ್ಮಿಕರ ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಬೈಲಹೊಂಗಲ ತಾಲೂಕಿನ ದೇಶನೂರು, ಮೆಕ್ಕಲಮರಡಿ ಗ್ರಾಮದ ನೇಕಾರ ಕಾರ್ಮಿಕರು ಪ್ರಶಾಂತ ಚಡಿಚಾಳ, (ಮೊ.9880105223) ಅವರನ್ನು, ಡೊಂಬರಕೊಪ್ಪ, ಕಿತ್ತೂರು, ಎಂ.ಕೆ.ಹುಬ್ಬಳ್ಳಿ, ತುರಮುರಿ, ದೇವರಶೀಗೆಹಳ್ಳಿ ಗ್ರಾಮದ ನೇಕಾರ ಕಾರ್ಮಿಕರು ವಿಶ್ವಗುರು ಬಸವೇಶ್ವರ ಸಮಾಜ ಕಲ್ಯಾಣ ಸಂಸ್ಥೆ (9739968754) ಹಾಗೂ ಒಕ್ಕುಂದ ಗ್ರಾಮದ ಕಾರ್ಮಿಕರು ಶಾಖಾಂಬರಿ ಕೋ-ಆಪ್ ಟೆಕ್ಸ್‌ಟೈಲ್ಸ್ ನಿ, ನೇಕಾರ ಕಾಲೋನಿ, (7204005356) ಸಹಕಾರ ಸಂಘಕ್ಕೆ ಸಂಪರ್ಕಿಸಿ ಮುಚ್ಚಳಿಕೆ ಪತ್ರದ ನಮೂನೆಗಳನ್ನು ಪಡೆಯಬಹುದಾಗಿದೆ.
ರಾಮದುರ್ಗ ತಾಲೂಕಿನ ಶಿವಪೇಟ, ಮನಿಹಾಳ, ಸುರೇಬಾನ, ರೇವಡಿಕೊಪ್ಪ, ಚಿಕ್ಕೋಪ್ಪ, ಹಿರೆಕೋಡಿ ಗ್ರಾಮದ ನೇಕಾರ ಕಾರ್ಮಿಕರು ಚೌಡೇಶ್ವರಿ ವಿದ್ಯುತ್ ಚಾಲಿತ ಮಗ್ಗಗಳ ನೇಕಾರ ಉತ್ಪಾದಕರ ಸಹಕಾರಿ ಸಂಘ, ಮನಿಹಾಳ ಸುರೇಬಾನ (99016579540) ಈ ಸಹಕಾರ ಕೇಂದ್ರಕ್ಕೆ, ಹಲಗತ್ತಿ, ಮುದಕವಿ ಗ್ರಾಮದ ನೇಕಾರ ಕಾರ್ಮಿಕರು ಶಾಖಾಂಬರಿ ವಿದ್ಯುತ್ ಚಾಲಿತ ಮಗ್ಗಗಳ ಉತ್ಪಾದಕರ ಹಗೂ ವಿವಿಧ ಉದ್ದೇಶಗಳ ಸಹಕಾರ ಸಂಘ (9901618887), ಕಟಕೋಳ ಗ್ರಾಮದ ನೇಕಾರ ಕಾರ್ಮಿಕರು ಶಿವಶರಣ ನೂಲಿಚಂದನ ಕೆ.ಎಸ್.ಕೆ ಸಂಸ್ಥೆ, ಕಟಕೋಳ (9535576308) ಅವರನ್ನು ಸಂಪರ್ಕಿಸಬೇಕು.
ಚಿಕ್ಕೋಡಿ ತಾಲೂಕಿನ ನೇಜ್ ಹಾಗೂ ಸುತ್ತಮುತ್ತಲಿನ ಗ್ರಾಮದ ನೇಕಾರ ಕಾರ್ಮಿಕರು ಲಕ್ಷ್ಮಣ ದೋನವಾಡಿ (7676778739), ದೊನೇವಾಡಿ ಗ್ರಾಮದ ನೇಕಾರ ಕಾರ್ಮಿಕರು ಸೋಮನಾಥ ಪರಕಾಳೆ (9019090454) ಅವರನ್ನು ಸಂಪರ್ಕಿಸಬೇಕು. ನಿಪ್ಪಾಣಿ ಹಾಗೂ ಸುತ್ತಮುತ್ತಲಿನ ಗ್ರಾಮದ ನೇಕಾರ ಕಾರ್ಮಿಕರು ರಾಜು (9980380044), ಬೋರಗಾಂವ ಗ್ರಾಮದ ನೇಕಾರ ಕಾರ್ಮಿಕರು ರಾಜು ಕುಂಬಾರ (9686205556), ಹುಕ್ಕೇರಿ ತಾಲೂಕಿನ ಆನಂದಪುರ, ಹತ್ತರಗಿಗ್ರಾಮದ ನೇಕಾರ ಕಾರ್ಮಿಕರು ಬುದ್ಧ ಬಸವ ಅಂಬೇಡ್ಕರ್, ವಿದ್ಯುತ್ ಚಾಲಿತ ಮಗ್ಗಗಳ ಔದ್ಯೋಗಿಕ ಸಹಕಾರ ಸಂಘ, (9964428760) ಹಾಗೂ ಯಮಕನಮರಡಿ ಗ್ರಾಮದ ನೇಕಾರ ಕಾರ್ಮಿಕರು ಬನಶಂಕರಿ ವಿದ್ಯುತ್ ಚಾಲಿತ ಮಗ್ಗಗಳ ಔದ್ಯೋಗಿಕ ಸಹಕಾರಿ (9916197034) ಸಂಘವನ್ನು ಸಂಪರ್ಕಿಸಿ ಮುಚ್ಚಳಿಕೆ ಪತ್ರದ ನಮೂನೆ ಪಡೆಯಬಹುದಾಗಿದೆ. ಮಾಹಿತಿಗಾಗಿ ಕಚೇರಿ ದೂ. 0831-2950674 ಸಂಪರ್ಕಿಸಿ.