Advertisement

ಪರಿಹಾರ ವಿಳಂಬ: ಕೆಎಸ್‌ಆರ್‌ಟಿಸಿ ಎರಡು ಬಸ್‌ ಜಪ್ತಿ

01:13 PM Nov 24, 2019 | Suhan S |

ಹಾವೇರಿ: ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡದ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಎರಡು ಬಸ್‌ಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

Advertisement

ಜಿಲ್ಲೆಯ ಶಿಗ್ಗಾವಿ ತಾಲೂಕಿನ ಮುದ್ದಿನಕೊಪ್ಪ ಕ್ರಾಸ್‌ ಬಳಿ 2016ರಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಕೆಎಸ್‌ಆರ್‌ಟಿಸಿ ಸಂಸ್ಥೆಯ ಬಸ್‌ ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಮೃತಪಟ್ಟು ಹಿಂಬದಿ ಸವಾರಿ ಗಾಯಗೊಂಡಿದ್ದರು. ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಪರವಾಗಿ ವಕೀಲ ಎಸ್‌.ಕೆ. ಅಕ್ಕಿ ವಕಾಲತ್ತು ನಡೆಸಿದ್ದರು.

ಹಾವೇರಿ ಹಿರಿಯದಿವಾಣಿ ನ್ಯಾಯಾಲದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರು ಗಾಯಾಳುಗೆ 7.14 ಲಕ್ಷ ರೂ. ಹಾಗೂ ಮೃತಪಟ್ಟ ಬೈಕ್‌ ಸವಾರನ ಕುಟುಂಬದವರಿಗೆ15.58 ಲಕ್ಷ ರೂ. ಪರಿಹಾರ ನೀಡುವಂತೆ ಕೆಎಸ್‌ ಆರ್‌ಟಿಸಿ ಸಂಸ್ಥೆಗೆ ಆದೇಶಿಸಿತ್ತು. ಆದರೆ, ಈ ವರೆಗೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯ ಬಸ್‌ಗಳನ್ನು ಜಪ್ತಿ ಮಾಡಲು ನ್ಯಾಯಾಧೀಶರು ಆದೇಶ ಮಾಡಿದ್ದರಿಂದ ಅರ್ಜಿದಾರರ ಪರವಾದ ವಕೀಲರಾದ ಎಸ್‌.ಕೆ. ಅಕ್ಕಿ ಅವರ ಸಮ್ಮುಖದಲ್ಲಿ ಎರಡು ಬಸ್‌ಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next