ಚಾಮರಾಜನಗರ: ಭಾರತದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಉಡುಪು ಮತ್ತು ಪರಿಕರಗಳ ವಿಶೇಷ ಸರಣಿಯಾದ ರಿಲಯನ್ಸ್ ರಿಟೇಲ್‍ನ ಟ್ರೆಂಡ್ಸ್, ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ತನ್ನ ಹೊಸ ಮಳಿಗೆ ಆರಂಭಿಸಿದೆ.
ಟ್ರೆಂಡ್ಸ್ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ಮೆಟ್ರೊ ನಗರಗಳಿಂದ ಹಿಡಿದು ಮಿನಿ ಮೆಟ್ರೋಗಳು, 1ನೇ ಹಾಗೂ 2ನೇ ಶ್ರೇಣಿಯ ಪಟ್ಟಣಗಳನ್ನು ತಲುಪುವ ಉದ್ದೇಶವನ್ನು ಹೊಂದಿದ್ದು, ಗುಂಡ್ಲುಪೇಟೆಯ ಹೊಸ ಮಳಿಗೆ ಅದರ ಭಾಗವಾಗಿದೆ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.
ಗುಂಡ್ಲುಪೇಟೆಯ ಟ್ರೆಂಡ್ಸ್ ಮಳಿಗೆ, ಆಧುನಿಕ ನೋಟ ಮತ್ತು ವಾತಾವರಣ ಹೊಂದಿದ್ದು, ಈ ಪ್ರದೇಶದ ಗ್ರಾಹಕರಿಗೆ ಸಂಬಂಧಿಸಿದ ಮತ್ತು ಕೈಗೆಟುಕುವ ಬೆಲೆಯಲ್ಲಿ ದೊರಕುವ ಮತ್ತು ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಅತ್ಯಾಕರ್ಷಕ ಶ್ರೇಣಿಯ ಉತ್ತಮ ಗುಣಮಟ್ಟದ ಮತ್ತು ಫ್ಯಾಶನ್ ಸರಕುಗಳನ್ನು ಒಳಗೊಂಡಿದೆ.
ಪಟ್ಟಣದ ಗ್ರಾಹಕರು ಟ್ರೆಂಡಿ ವುಮೆನ್ಸ್ ವೇರ್, ಮೆನ್ಸ್ ವೇರ್, ಕಿಡ್ಸ್ ವೇರ್ ಮತ್ತು ಫ್ಯಾಶನ್ ಆಕ್ಸೆಸರಿಸ್, ಸುಲಭ ಬೆಲೆಯಲ್ಲಿ ಶಾಪಿಂಗ್ ಮಾಡಬಹುದಾಗಿದೆ.
ಗುಂಡ್ಲುಪೇಟೆ ಪಟ್ಟಣದಲ್ಲಿ 7169 ಚದರ ಅಡಿ ಹೊಂದಿರುವ ಮೊದಲ ಮಳಿಗೆ ಇದಾಗಿದ್ದು, ತನ್ನ ಗ್ರಾಹಕರಿಗೆ ವಿಶೇಷವಾದ ಉದ್ಘಾಟನಾ ಕೊಡುಗೆಯನ್ನು ನೀಡುತ್ತಿದೆ. ರೂ. 3499 ಕ್ಕೆ ಶಾಪಿಂಗ್ ಮಾಡಿ, ರೂ. 199 ಕ್ಕೆ ಅತ್ಯಾಕರ್ಷಕ ಉಡುಗೊರೆಯನ್ನು ಪಡೆಯಬಹುದು. ಇದಲ್ಲದೇ ಗ್ರಾಹಕರು ರೂ.2999 ಖರೀದಿ ಮಾಡಿ ರೂ. 3000 ಮೌಲ್ಯದ ಕೂಪನ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.