Advertisement

ರಿಲಯನ್ಸ್ ಡಿಜಿಟಲ್ ಮಳಿಗೆ; ಮುಂಬೈನಲ್ಲಿ ಮೊದಲ ಮೋಟೋ ಹಬ್ ಗೆ ಚಾಲನೆ

04:25 PM Jun 05, 2018 | Team Udayavani |

ಮುಂಬೈ: ಭಾರತದ ಅತಿದೊಡ್ಡ ಸಿಡಿಐಟಿ (ಕನ್ಸ್ಯೂಮರ್ ಡ್ಯೂರಾಬಲ್ ಗಳು ಮತ್ತು ಮಾಹಿತಿ ತಂತ್ರಜ್ಞಾನ) ರಿಟೈಲ್ ಸರಣಿ   ರಿಲಯನ್ಸ್ ಡಿಜಿಟಲ್ ತನ್ನ ಮಳಿಗೆಗಳಲ್ಲಿ ಮೊಟೊರೋಲೋ ಫೋನ್ ಗಳ ವಿಶಾಲ ಮತ್ತು ಅತಿದೊಡ್ಡ ಶ್ರೇಣಿಯ ಪ್ರದರ್ಶನಕ್ಕಾಗಿ ಮೊಟೊರೋಲೋದ ಸಹಭಾಗಿತ್ವದೊಂದಿಗೆ ಮೋಟೋ ಹಬ್ ಉದ್ಘಾಟನೆಯನ್ನು ಘೋಷಿಸಿದೆ.

Advertisement

ಮೋಟೋ ಹಬ್ ಝೋನ್, ಗ್ರಾಹಕರಿಗೆ ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಸ್ಟೋರ್ ಗಳೊಳಗೆ ಏಕಕಾಲಕ್ಕೆ ಎಲ್ಲಾ ಮೊಟೊರೋಲೋ ಉತ್ಪನ್ನಗಳ ಸುಲಭ ಲಭ್ಯತೆಯನ್ನು ಒದಗಿಸುತ್ತದೆ; ಇಲ್ಲಿ ಅವರಿಗೆ ಅನುಕೂಲಕರ ಸ್ಥಳದಲ್ಲಿ ಆನ್ ಲೈನ್ ಎಕ್ಸ್ ಕ್ಲೂಸಿವ್ ಡಿವೈಸ್ ಗಳ ಸಹಿತ ಮೊಟೊರೋಲೋ ಡಿವೈಸ್ ಗಳ ಪೂರ್ತಿ ಪೋರ್ಟ್ ಫೋಲಿಯೋದ ಅನುಭವ ಹೊಂದಲು ಸಾಧ್ಯವಾಗುತ್ತದೆ.

ತನ್ನ ಆಫ್ ಲೈನ್ ಅಸ್ತಿತ್ವವನ್ನು ಕ್ರೋಢೀಕರಿಸುವ ತನ್ನ ಕಾರ್ಯತಂತ್ರದ ಭಾಗವಾಗಿ, ಮೊಟೊರೋಲೋ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ನಂತಹ ಪ್ರಮುಖ ಸ್ಥಳ ಸೇರಿದಂತೆ ಭಾರತದಾದ್ಯಂತ ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಸ್ಟೋರ್ ಗಳಲ್ಲಿ ಬಹು ಮೋಟೋ ಹಬ್ ಗಳನ್ನು ತೆರೆಯುವ ಯೋಜನೆ ಹೊಂದಿದೆ. ಮೊದಲ ಮೋಟೋ ಹಬ್ ಗೆ ಆರ್ ಸಿಟಿ  ಘಾಟ್ಕೋಪರ್, ಮುಂಬೈನಲ್ಲಿ ಚಾಲನೆ ನೀಡಲಾಯಿತು.

ಈ ವೇಳೆ ಮೊಟೊರೋಲಾ ಮೊಬಿಲಿಟಿ ಆಂಡ್ ಲೆನೊವೊ ಎಂಬಿಜಿ ಏಷ್ಯಾ ಪೆಸಿಫಿಕ್ ಪ್ರಾಂತ್ಯದ ಕಾರ್ಯಕಾರಿ ನಿರ್ದೇಶಕ ಶಶಾಂಕ ಶರ್ಮಾ, ಮೊಟೊರೋಲಾ ಮೊಬಿಲಿಟಿ ಇಂಡಿಯಾದ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ಬಿ.ವಿ.ಮಲ್ಲಿಕಾರ್ಜುನ ರಾವ್,  ಕೌಶಲ್ 

ನೆವ್ರೇಕರ್, ಸಿಎಂಒ, ರಿಲಯನ್ಸ್ ಡಿಜಿಟಲ್ ಮತ್ತು ಶ್ರೀ ಪ್ರದೀಪ್ ಭೋಸಲೆ, ಹೆಡ್ ಆಫ್ ಬಿಸಿನೆಸ್  ಉತ್ಪಾದಕತೆ, ರಿಲಯನ್ಸ್ ಡಿಜಿಟಲ್ ಉಪಸ್ಥಿತರಿದ್ದರು.

Advertisement

ಮೊದಲ ಮೋಟೋ ಹಬ್ ಉದ್ಘಾಟಿಸಿ ಮಾತನಾಡಿದ ಮೊಟೊರೋಲಾ ಮೊಬಿಲಿಟಿ ಇಂಡಿಯಾದ ಪ್ರಾದೇಶಿಕ್ ಪ್ರಧಾನ ವ್ಯವಸ್ಥಾಪಕ ಬಿ ವಿ ಮಲ್ಲಿಕಾರ್ಜುನ ರಾವ್, ನಾವು ಅರ್ಥಪೂರ್ಣ ಅನುಭವ ಹಂಚಿಕೊಳ್ಳುವ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಗ್ರಾಹಕರೊಂದಿಗೆ ತೊಡಗಿಸಿಕೊಳ್ಳುವತ್ತ ನಾವು ಅತಿಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದೇವೆ ಮತ್ತು ಅದೇ ನಿಟ್ಟಿನಲ್ಲಿ ರಿಲಯನ್ಸ್ ಡಿಜಿಟಲ್ನೊಂದಿಗೆ ನಮ್ಮ ಸಹಭಾಗಿತ್ವದ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಈ ಸಹಭಾಗಿತ್ವದೊಂದಿಗೆ, ನಾವು ಗ್ರಾಹಕರಿಗೆ ಮೊಟೊರೋಲಾದ ಪ್ರೀಮಿಯಂ ಉತ್ಪನ್ನಗಳು ಭಾರತದಾದ್ಯಂತ ಸುಲಭವಾಗಿ ಒದಗಿಸುವ ಗುರಿ ಹೊಂದಿದ್ದೇವೆ ಎಂದರು.

ಈ ಸಹಭಾಗಿತ್ವದ ಕುರಿತು ವಿವರಣೆ ನೀಡಿದ, ಶ್ರೀ ಕೌಶಲ್ ನೆವ್ರೇಕರ್, ಸಿಎಂಒ, ರಿಲಯನ್ಸ್ ಡಿಜಿಟಲ್, “ರಿಲಯನ್ಸ್ ಡಿಜಿಟಲ್ ಯಾವತ್ತೂ ತಂತ್ರಜ್ಞಾನದಲ್ಲಿ ಅತ್ಯಾಧುನಿಕ ತಾಣದತ್ತ ಸಾಗುತ್ತದೆ. ಮೊಟೊರೋಲಾ ಉತ್ಪನ್ನಗಳು ತನ್ನ ಪೋರ್ಟ್ ಫೋಲಿಯೋಕ್ಕೆ ಹೊಸ ಆಕರ್ಷಣೆಯನ್ನು ತರಲಿವೆ. ಈ ಸಹಭಾಗಿತ್ವ ಸಾಧಿಸುವ ಮೂಲಕ ಗ್ರಾಹಕರಿಗೆ ಪರ್ಸನಲೈಝ್ಡ್ ತಂತ್ರಜ್ಞಾನ ಒದಗಿಸಲು ಮೊಟೊರೋಲಾದ ತುಲನಾರಹಿತ ಮೊಬೈಲ್ ತಂತ್ರಜ್ಞಾನವನ್ನು ಪರಿಪೂರ್ಣ ಸಂಯೋಜನೆಯಾಗಿ ತಂದಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next