Advertisement

ರಿಲಯನ್ಸ್‌ ಜಿಯೋ ಫೋನ್‌ ಪ್ರೀ-ಬುಕ್ಕಿಂಗ್‌ ಸದ್ಯಕ್ಕೆ ಅಮಾನತು !

04:26 PM Aug 26, 2017 | udayavani editorial |

ಹೊಸದಿಲ್ಲಿ : ಈಗಾಗಲೇ ಲಕ್ಷಾಂತರ ಜನರು ವೆಬ್‌ಸೈಟಲ್ಲಿ  ರಿಲಯನ್ಸ್‌ ಜಿಯೋ ಫೋನ್‌ ಪ್ರೀ-ಬುಕ್ಕಿಂಗ್‌ ಮಾಡಿದ್ದಾರೆ; ಹಾಗಿದ್ದರೂ ಈಗ ಸದ್ಯಕ್ಕೆ ಈ ಪ್ರೀ-ಬುಕ್ಕಿಂಗ್‌ ಅಮಾನತುಗೊಂಡಿದೆ.

Advertisement

“ಪ್ರೀ ಬುಕ್ಕಿಂಗ್‌ ಪುನಃ ಯಾವಾಗ ಆರಂಭಾಗುವುದೆಂದು ನಾವು ನಿಮಗೆ ತಿಳಿಸುತ್ತೇವೆ’ ಎಂದು ಜಿಯೋ ವೆಬ್‌ಸೈಟ್‌ ಹೇಳುತ್ತದೆ. 

ಗುರುವಾರ ರಿಲಯನ್ಸ್‌ ಜಿಯೋ ಫೋನ್‌ ಪ್ರೀ ಬುಕ್ಕಿಂಗ್‌ ಆರಂಭವಾದ ಎರಡೇ ತಾಸುಗಳಲ್ಲಿ  30 ಲಕ್ಷ ಜನರು ಬುಕ್ಕಿಂಗ್‌ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. 

ಪ್ರೀ ಬುಕ್ಕಿಂಗ್‌ ಆರಂಭವಾದ 15 – 20 ನಿಮಿಷಗಳಲ್ಲಿ ನಮ್ಮಲ್ಲಿ ನೂರಕ್ಕೂ ಹಚ್ಚು ಹೆಚ್ಚು ಫೋನ್‌ಗಳಿಗೆ ಆಫ್ ಲೈನ್‌ ಬುಕ್ಕಿಂಗ್‌ ನಡೆಯಿತು ಎಂದು ಮಧ್ಯ ದಿಲ್ಲಿಯ ಒಂದು ಸ್ಟೋರ್‌ ಹೇಳಿದೆ. 

ಪ್ರೀ ಬುಕ್ಕಿಂಗ್‌ ಆರಂಭಗೊಂಡ ಕೆಲವೇ ತಾಸುಗಳಲ್ಲಿ ರಿಲಯನ್ಸ್‌ ಜಿಯೋ ವೆಬ್‌ಸೈಟ್‌ ಕ್ರ್ಯಾಶ್‌ ಆಗಿತ್ತು. ಕೆಲವು ನಿಮಿಷಗಳ ಬಳಿಕ ಮತ್ತೆ ವೆಬ್‌ ಪೇಜ್‌ ತೆರೆದುಕೊಂಡಾಗ “ಕಂಟೆಂಟ್‌ ಸರ್ವರ್‌ ಎರರ್‌’ ಎಂಬ ಸಂದೇಶವನ್ನು ಅದು ಕಾಣಿಸುತ್ತಿತ್ತು. 

Advertisement

ರಿಲಯನ್ಸ್‌ನ 4ಜಿ ಗುಣಲಕ್ಷಣ ಹೊಂದಿರುವ ಜಿಯೋ ಫೋನ್‌ ಬುಕ್‌ ಮಾಡಲು ಗ್ರಾಹಕರು ಪಾವತಿಸುವ ಒಟ್ಟು 1,500 ರೂ.ಗಳನ್ನು 36 ತಿಂಗಳ ಬಳಿಕ ಅವರಿಗೆ ಕಂಪೆನಿಯು ಮರು ಪಾವತಿಸಲಿದೆ; ಆಗ ಅದು ಗ್ರಾಹಕರಿಗೆ ಉಚಿತವಾಗಿ ಸಿಕ್ಕಿದಂತಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next