Advertisement

ಲಾಕ್ ಡೌನ್ ಪರಿಸ್ಥಿತಿ: ಮೊಬೈಲ್ ಕಂಪೆನಿಗಳಿಂದ ಡಾಟಾ ಆಫರ್ ಗಳ ಸುಗ್ಗಿ!

09:25 AM Mar 29, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವೈರಸ್ ಹರಡುವಿಕೆಯನ್ನು ತಡೆಯಲು ಕೇಂದ್ರ ಸರಕಾರವು 21 ದಿನಗಳ ಭಾರತ ಲಾಕ್ ಡೌನ್ ಸ್ಥಿತಿಯನ್ನು ಘೋಷಿಸಿದೆ. ಇದರಿಂದಾಗಿ ಜನರೆಲ್ಲರೂ ಮನೆಯಲ್ಲೇ ಇರಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಮತ್ತು ಹೆಚ್ಚಿನ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹೋಂ’ ಅವಕಾಶವನ್ನು ನೀಡಿವೆ.

Advertisement

ಈ ಆಪತ್ಕಾಲದಲ್ಲಿ ಉಳಿದೆಲ್ಲಾ ಸೇವೆಗಳು ಬಾಧಿತವಾಗಿದ್ದರೂ ಅತೀ ಹೆಚ್ಚು ಬೇಡಿಕೆಯನ್ನು ಪಡೆದುಕೊಳ್ಳುತ್ತಿರುವ ಸೇವೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಕರೆ ಸೇವೆಗಳೂ ಒಂದಾಗಿವೆ.

ಜಿಯೋ, ಏರ್ ಟೆಲ್ ಮತ್ತು ವೊಡಾಫೋನ್ ಕಂಪೆನಿಗಳು ಹಲವಾರು ಆಕರ್ಷಕ ಇಂಟರ್ನೆಟ್ ಮತ್ತು ಮೊಬೈಲ್ ಕರೆ ಆಫರ್ ಗಳನ್ನು ಪರಿಚಯಿಸಿದ್ದು ಅವುಗಳ ಕುರಿತಾದ ಮಾಹಿತಿ ಇಲ್ಲಿದೆ.

ರಿಲಯನ್ಸ್ ಜಿಯೋ:
ಇದು ವರ್ಕ್ ಫ್ರಂ ಹೋಂ ಎಂಬ 51 ದಿನಗಳ ವಿಶೇಷ ಪ್ಯಾಕೇಜನ್ನು ಹೊರತಂದಿದ್ದು 251 ರೂಪಾಯಿಗಳ ರಿಚಾರ್ಜ್ ಮಾಡಿದಲ್ಲಿ ಪ್ರತೀದಿನ 2ಜಿಬಿ ಡಾಟಾ ಸೌಲಭ್ಯ ದೊರೆಯಲಿದೆ. ಇನ್ನು ತನ್ನ 4ಜಿ ಡಾಟಾ ವೋಚರ್ ಗಳ ಮೇಲಿನ ಆಫರ್ ಗಳನ್ನು ಡಬಲ್ ಮಾಡಿದೆ. 11 ರೂಪಾಯಿಗಳಿಗೆ 800 ಎಂ.ಬಿ. ಡಾಟಾ ಮತ್ತು ಬೇರೆ 75 ನಿಮಿಷಗಳ ನಾನ್ – ಜಿಯೋ ಕರೆ ಸೌಲಭ್ಯ, 21 ರೂಪಾಯಿಗಳ ವೋಚರ್ ನಲ್ಲಿ 2ಜಿಬಿ ಡಾಟಾ ಹಾಗೂ 200 ನಿಮಿಷಗಳ ನಾನ್ – ಜಿಯೋ ಕರೆ ಸೌಲಭ್ಯ, 51 ರೂಪಾಯಿಗಳ ಪ್ಲ್ಯಾನ್ ನಲ್ಲಿ 6ಜಿಬಿ ಡಾಟಾ ಸೌಲಭ್ಯ ಹಾಗೂ 500 ನಿಮಿಷಗಳ ನಾನ್ – ಜಿಯೋ ಕರೆ ಸೌಲಭ್ಯ ಮತ್ತು ಕೊನೆಯದಾಗಿ 101 ರೂಪಾಯಿಗಳ ವೋಚರ್ ನಲ್ಲಿ 12 ಜಿಬಿ ಡಾಟಾ ಹಾಗೂ 1000 ನಿಮಿಷಗಳ ನಿಮಿಷಗಳ ನಾನ್ – ಜಿಯೋ ಕರೆ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಈ ಸಮಯದಲ್ಲಿ ಒದಗಿಸುತ್ತಿದೆ.

ವೊಡಾಫೋನ್
16 ರೂಪಾಯಿಗಳಿಂದ ಪ್ರಾರಂಭಗೊಳ್ಳುವ ಡಾಟಾ ವೋಚರ್ ಯೋಜನೆಯಲ್ಲಿ ಗ್ರಾಹಕರಿಗೆ 1ಜಿಬಿ ಡಾಟಾ ಸೌಲಭ್ಯ ದೊರೆಯುತ್ತದೆ ಮತ್ತು ಇದು 24 ಗಂಟೆಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇನ್ನು 48 ಹಾಗೂ 98 ರೂಪಾಯಿಗಳಲ್ಲಿ ಲಭ್ಯವಿರುವ ಡಾಟಾ ಸೌಲಭ್ಯದಲ್ಲಿ ಕ್ರಮವಾಗಿ 3ಜಿಬಿ ಹಾಗೂ 6ಜಿಬಿ ಡಾಟಾ ಸವಲತ್ತು ಸಿಗಲಿದೆ. ಇನ್ನು ವೊಡಾಫೋನ್ ಗ್ರಾಹಕರು 199 ರೂಪಾಯಿಗಳ ಯೋಜನೆಯನ್ನು ಆಯ್ದುಕೊಂಡರೆ ಪ್ರತೀದಿನ 3 ಜಿಬಿಗಳ ಡಾಟಾ ಸೌಲಭ್ಯ ಸಿಗುತ್ತದೆ.

Advertisement

ಏರ್ ಟೆಲ್
ಈ ನೆಟ್ ವರ್ಕ್ ಬಳಸುತ್ತಿರುವ ಗ್ರಾಹಕರಿಗೆ ಎರಡು ಆಫರ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಮೊದಲನೇ ಆಫರ್ 48 ರೂಪಾಯಿಗಳ ರಿಚಾರ್ಜ್ ನದ್ದಾಗಿದ್ದು ಇದರಲ್ಲಿ 3 ಜಿಬಿ ಡಾಟಾ ಸೌಲಭ್ಯ ಲಭಿಸುತ್ತದೆ ಮತ್ತಿದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇನ್ನೊಂದು ಆಫರ್ ನಲ್ಲಿ 98 ರೂಪಾಯಿಗಳ ರಿಚಾರ್ಜ್ ನಲ್ಲಿ 28 ದಿನಗಳಿಗೆ 6 ಜಿಬಿ ಡಾಟಾ ಪಡೆದುಕೊಳ್ಳುವ ಅವಕಾಶ ಗ್ರಾಹಕರಿಗೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next