Advertisement
ಜಿಯೋ ಫೋನ್ ಬುಕ್ ಮಾಡುವವರು ಭದ್ರತಾ ಠೇವಣಿಯಾಗಿ ಕೊಡಬೇಕಿರುವ 1,500 ರೂ.ಗಳನ್ನು ಸೆಪ್ಟಂಬರ್‌ನಲ್ಲಿ ಫೋನ್ ಡೆಲಿವರಿ ತೆಗೆದುಕೊಳ್ಳುವಾಗ ಪಾವತಿಸಿದರೆ ಸಾಕು; ಈ ಮೊತ್ತವನ್ನು ಕಂಪೆನಿಯು 36 ತಿಂಗಳ ಬಳಿಕ ಗ್ರಾಹಕರಿಗೆ ಮರುಪಾವತಿಸಲಿದೆ. ಎಂದರೆ ಜಿಯೋ ಫೋನ್ ಉಚಿತವಾಗುತ್ತದೆ.
Related Articles
Advertisement
* ಆಧಾರ್ ವಿವರ ಕೊಟ್ಟ ಬಳಿಕ ಅದನ್ನು ಕೇಂದ್ರೀಕೃತ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಲಾಗುವುದು; ಆಗ ಗ್ರಾಹಕರಿಗೆ ಟೋಕನ್ ನಂಬರ್ ಸಿಗುತ್ತದೆ.
* ಜಿಯೋ ಫೋನ್ ಡೆಲಿವರಿ ಪಡೆದುಕೊಳ್ಳುವಾಗ ಈ ಟೋಕನ್ ನಂಬರ್ ನೀಡಬೇಕು.
ಆನ್‌ಲೈನ್ ನಲ್ಲಿ ಜಿಯೋ ಫೋನ್ ಬುಕ್ ಮಾಡೋದು ಹೇಗೆ ?
*ಜಿಯೋ ಡಾಟ್ ಕಾಮ್ ಅಥವಾ ಜಿಯೋಫ್ರೀಫೋನ್ ಡಾಟ್ ಆರ್ಗ್ ಸಂದರ್ಶಿಸಬೇಕು.
* ಆನ್ ಲೈನ್ ರಿಜಿಸ್ಟ್ರೇಶನ್ ಆರಂಭವಾದೊಡನೆಯೇ ಇಮೇಜ್/ಬಟನ್ ಹೋಮ್ ಪೇಜ್‌ನಲ್ಲಿ ಕಂಡು ಬರುತ್ತದೆ. * ಜಿಯೋ ಫ್ರೀ ಮೊಬೈಲ್ ಫೋನ್ ರಿಜಿಸ್ಟ್ರೇಶನ್/ಪ್ರೀ ಬುಕ್ಕಿಂಗ್ ಬಟನ್ ಕ್ಲಿಕ್ ಮಾಡಬೇಕು. * ನಿಮ್ಮ ಗುರುತು ವಿವರಗಳನ್ನು ಭರ್ತಿ ಮಾಡಬೇಕು; ಜತೆಗೆ ನಿಮ್ಮ ಫೋನ್ ಸಂಪರ್ಕ ನಂಬರ್, ವಿಳಾಸ ಮತ್ತು ಇತರ ಮಾಹಿತಿಗಳನ್ನು ಕೂಡ ತುಂಬಬೇಕು. * ಡೆಲಿವರಿ ಸಲ್ಲಬೇಕಾದ ವಿಳಾಸವನ್ನು ನಮೂದಿಸಬೇಕು. * ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಅಥವಾ ನೆಟ್ ಬ್ಯಾಂಕಿಂಗ್ ಆಯ್ಕೆ ಮೂಲಕ ಭದ್ರತಾ ಠೇವಣಿ ಮೊತ್ತ 1,500 ರೂ. ಪಾವತಿಸಬೇಕು. *ಆಗ ಜಿಯೋ ಫೋನ್ ಬುಕ್ ಆಗುವುದು; ಮೊದಲು ಬಂದವರಿಗೆ ಮೊದಲು ಎಂಬ ನೆಲೆಯಲ್ಲಿ ಡೆಲಿವರಿ ನೀಡಲಾಗುವುದು.