Advertisement

ಜಿಯೋದಿಂದ ಗ್ರಾಹಕರಿಗೆ ಮತ್ತಷ್ಟು ಆಕರ್ಷಕ ಪ್ಲ್ಯಾನ್ ಬಿಡುಗಡೆ

07:27 PM May 11, 2020 | Nagendra Trasi |

ಮುಂಬೈ:ಜಿಯೋ ತನ್ನ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಮಾಡುವ ನಿಟ್ಟಿನಲ್ಲಿ ಮತ್ತು ಮನೆಯಿಂದಲೇ ಕುಳಿತು ಕೆಲಸವನ್ನು ಮಾಡುತ್ತಿರುವವರಿಗಾಗಿಯೇ ಆಕರ್ಷಕ ‘ನ್ಯೂ ವರ್ಕ್ ಫ್ರಮ್ ಹೋಮ್ ಪ್ಲಾನ್’ ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಲ್ಲದೇ, ಯಾವುದೇ ಡೇಟಾ ಖಾಲಿಯಾಗುವ ಚಿಂತೆ ಇಲ್ಲದೆ ವರ್ಷ ಪೂರ್ತಿ ಕೆಲಸ ಮಾಡಬಹುದಾಗಿದೆ ಎಂದು ಜಿಯೋ ತಿಳಿಸಿದೆ.

Advertisement

2,399 ರೂಪಾಯಿಯ ಹೊಸ ಪ್ಲಾನ್‌ನಲ್ಲಿ ಗ್ರಾಹಕರು ಈ ಹಿಂದಿನ ಪ್ಲಾನ್‌ಗಿಂತ ಶೇ. 33% ಅಧಿಕ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ನಿತ್ಯ ಅಧಿಕ ಡೇಟಾ ಬಳಕೆದಾರರಿಗೆ ಈ ಪ್ಲಾನ್ ಮೌಲ್ಯಯುತವಾಗಿರಲಿದೆ. ಈ ಪ್ಲಾನ್ ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ
ಎನ್ನಬಹುದಾಗಿದ್ದು, ಪ್ರತಿ ನಿತ್ಯ 2GB ಡೇಟಾವನ್ನು ನೀಡುವ ಪ್ಲಾನಿಗೆ ಗ್ರಾಹಕರು ಸರಾಸರಿ ಪ್ರತಿ ತಿಂಗಳು ನೀಡಬೇಕಾಗಿರುವುದು ರೂ. 200 ಮಾತ್ರ.

ಹೊಸ ಡೇಟಾ ಆಡ್-ಆನ್ ಪ್ಯಾಕ್ ವಿಶೇಷತೆ:
ಜಿಯೋ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ಹೊಸ ಆಡ್ ಆನ್ ಪ್ಯಾಕ್ ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಗ್ರಾಹಕರು ಯಾವುದೇ ಡೈಲಿ ಡೇಟಾ ಕ್ಯಾಪಿಂಗ್ ಇಲ್ಲದೇ ಡೇಟಾ ಬ್ರೌಸ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಪ್ಲಾನ್‌ಗಳು ಗ್ರಾಹಕರು ನೀಡುವ ಹಣಕ್ಕಿಂತ ಹೆಚ್ಚಿನ ಮೌಲ್ಯದ ಡೇಟವನ್ನು ಬಳಕೆಗೆ ನೀಡಲಿದೆ. ಅಲ್ಲದೇ ಈ ಪ್ಲಾನ್‌ನಲ್ಲಿ ಎಲ್ಲಾ ಬಳಕೆದಾರರು ತಮ್ಮ ನಿತ್ಯ ಬಳಕೆಯ ಡೇಟಾ ಖಾಲಿ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈಗಾಗಲೇ ಇರುವ ಆಡ್ ಆನ್ ಪ್ಲಾನ್ ವಿವರಗಳು ಹೀಗಿದೆ, 11 ರೂಪಾಯಿಗೆ 0.8 GB, ರೂ.21 ಕ್ಕೆ- 1 GB, ರೂ.31 ಕ್ಕೆ- 2 GB, ರೂ.51ಕ್ಕೆ – 6GB ಹಾಗೂ ರೂ.101 ಕ್ಕೆ – 12GB ಡೇಟಾ ಬಳಕೆಗೆ ದೊರೆಯಲಿದೆ. ಹಾಗೇ ಹೊಸ ವರ್ಕ್‌ ಫ್ರಮ್ ಹೋಮ್ ಪ್ಯಾಕ್ ನಲ್ಲಿ ರೂ.151 ಕ್ಕೆ- 30GB, ರೂ.201 ಕ್ಕೆ – 40GB
ಮತ್ತು ರೂ.251ಕ್ಕೆ – 50GB ಡೇಟಾ ಬಳಕೆಗೆ ಲಭ್ಯವಿರಲಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next