ಹೊಸದಿಲ್ಲಿ : ರಿಲಯನ್ಸ್ ಜಿಯೋ ಈಗಿನ್ನು ಸದ್ಯದಲ್ಲೇ ಡಿಜಿಟಲ್ ಸ್ಯಾಟಲೈಟ್ ಸೇವಾರಂಗವನ್ನು (ಡಿಟಿಎಚ್) ಪ್ರವೇಶಿಸಲಿದೆ.
ಜಿಯೋ ಡಿಟಿಎಚ್ ಸೆಟಪ್ ಬಾಕ್ಸ್‌ಗಳು ಈಗಾಗಲೇ ಸಿದ್ದವಾಗಿ ಕುಳಿತಿವೆ. ಅಂತೆಯೇ ರಿಲಯನ್ಸ್ ಜಿಯೋ ಕಂಪೆನಿ ಈ ಎಪ್ರಿಲ್ ತಿಂಗಳಲ್ಲೇ ಡಿಜಿಟಲ್ ಸ್ಯಾಟಲೈಟ್ ಸೇವಾಕ್ಷೇತ್ರಕ್ಕೆ ಇಳಿಯುವುದು ನಿಶ್ಚಿತವೆನಿಸಿದೆ.
ಜಿಯೋ ಡಿಟಿಎಚ್ ಸೇವೆಯನ್ನು ಆ್ಯಂಡ್ರಾಯ್ಡ ಸೆಟಪ್ ಬಾಕ್ಸ್ ಅಥವಾ ಆ್ಯಪ್ಪಲ್ ಸೆಟಪ್ ಬಾಕ್ಸ್ ಮೂಲಕ ಪಡೆಯಬಹುದಾಗಿದೆ. ತಿಂಗಳಿಗೆ 180 ರೂ. ಗಳ ಕನಿಷ್ಠ ದರದೊಂದಿಗೆ ಆರಂಭವಾಗುವ ವಿವಿಧ ಪ್ಲಾನ್‌ಗಳನ್ನು ಬಳಕೆದಾರರು ಸೇರಿಕೊಳ್ಳಬಹುದಾಗಿದೆ. ಬಳಕೆದಾರರು ತಮ್ಮ ಟಿವಿಯಲ್ಲಿ ರಿಲಯನ್ಸ್ ಪ್ಯಾಕೇಜ್ ಮೂಲಕ ಯಾವುದೇ ಚ್ಯಾನಲ್‌ಗಳನ್ನು ವೀಕ್ಷಿಸಬಹುದಾಗಿದೆ.
ಜಿಯೋ ಡಿಟಿಎಚ್ ಸೆಟಪ್ ಬಾಕ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಸಂಪರ್ಕ ಮೂಲಕ ಚಾಲನೆಗೊಳ್ಳುತ್ತದೆ ಮತ್ತು ಇದಕ್ಕೆ 1 ಜಿಬಿಪಿಎಸ್ ವರೆಗೆ ಸ್ಟ್ರೀಮಿಂಗ್ ಸ್ಪೀಡ್ ಇರುತ್ತದೆ.
ವರದಿಗಳ ಪ್ರಕಾರ ಡಿಟಿಎಚ್ ಸ್ಯಾಟಲೈಟ್ ಸೇವೆಯನ್ನು ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ವೆಲ್‌ಕಮ್ ಆಫರ್ ಪ್ರಮೋಶನ್ ಮೂಲಕ 90 ದಿನಗಳಿಗೆ ಉಚಿತವಾಗಿ ಕೊಡಲಿದೆ.
ಜಿಯೋ ಸೆಟ್ ಟಾಪ್ ಬಾಕ್ಸ್‌ನ ಚಿತ್ರಗಳು ಈಗಾಗಲೇ ಮಾಧ್ಯಮಗಳಿಗೆ ಸೋರಿ ಹೋಗಿವೆ. ಜಿಯೋ ಸ್ಯಾಟಲೈಟ್ ಸೇವೆಯು 50ಕ್ಕೂ ಹೆಚ್ಚು ಎಚ್‌ಡಿ ಚ್ಯಾನಲ್‌ಗಳು ಸೇರಿದಂತೆ 300ಕ್ಕೂ ಹೆಚ್ಚು ಚ್ಯಾನಲ್‌ಗಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ.