ಮುಂಬೈ : ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಗಳನ್ನು ಅಭಿವೃದ್ಧಿಪಡಿಸಿದ 5ಜಿ ಇಂಟರ್ ನೆಟ್ ಸೇವೆಯ ಪ್ರಕ್ರಿಯೆಯನ್ನು ಜಿಯೋ ತ್ವರಿತ ಗತಿಯಲ್ಲಿ ನಡೆಸುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ವರದಿಯಲ್ಲಿ ಮಾಹಿತಿ ನೀಡಿದೆ.
ಇದು, ಜಾಗತಿಕ ಡಿಜಿಟಲ್ ಕ್ರಾಂತಿಯಲ್ಲಿ ಭಾರತ ದಾಪುಗಾಲಿಡುತ್ತಿದೆ ಎಂದು ವರದಿ ತಿಳಿಸಿದೆ. ರಿಲಯನ್ಸ್ ಜಿಯೋ ತನ್ನ ಮುಂದಿನ 300 ಮಿಲಿಯನ್ ಮೊಬೈಲ್ ಬ್ರಾಡ್ ಬ್ಯಾಂಡ್ ಚಂದಾದಾರರಿಗೆ, 50 ಮಿಲಿಯನ್ ಫೈಬರ್ ಹೋಮ್ಸ್ ಮತ್ತು 50 ಮಿಲಿಯನ್ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವ್ಯವಹಾರ ನಡೆಸುವ ಗ್ರಾಹಕರಿಗೆ ಅಗತ್ಯವಿರುವಷ್ಟು ನೆಟ್ ವರ್ಕ್ ಸಾಮರ್ಥ್ಯವನ್ನು ನಿರ್ಮಿಸಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಗೋವಾ : ಕರ್ಫ್ಯೂ ವಿಸ್ತರಣೆಯ ಬಗ್ಗೆ ಜೂನ್ 6 ರಂದು ಅಂತಿಮ ನಿರ್ಧಾರ : ಸಾವಂತ್
ವಾರ್ಷಿಕ ವರದಿಯನ್ನು ಪ್ರಕಟಿಸಿದ ರಿಲಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ, ಕ್ವಾಲ್ಕಾಮ್ ಮತ್ತು ಜಿಯೋ ಭಾರತದಲ್ಲಿ 5 ಜಿ ಪ್ರಯೋಗಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಜಿಯೋ 5 ಜಿ ವಿಭಾಗದಲ್ಲಿ, 1 ಜಿಬಿಪಿಎಸ್ ಮೈಲಿಗಲ್ಲು ಸಾಧಿಸಿದೆ ಎಂದು ಹೇಳಿದ್ದಾರೆ.
ಇನ್ನು, ಜೆಪಿಎಲ್ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ರಾಡಿಸಿಸ್ ಕಾರ್ಪೊರೇಷನ್‌ನೊಂದಿಗೆ ಜಿಯೋ ಮತ್ತು ಕ್ವಾಲ್ಕಾಮ್, ವರ್ಚುವಲೈಸ್ಡ್ ರಾನ್ (ವಿ ಆರ್ ಎ ಎನ್)ನೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವಂತಹ ಇಂಟರ್ಫೇಸ್-ಕಂಪ್ಲೈಂಟ್ ಆರ್ಕಿಟೆಕ್ಚರ್-ಆಧಾರಿತ 5 ಜಿ ಸೊಲ್ಯೂಷನ್ ನನ್ನು ಅಭಿವೃದ್ಧಿಪಡಿಸಿದೆ ಎಂದು ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತದಲ್ಲಿ ಅತಿದೊಡ್ಡ ಮತ್ತು ಸುಧಾರಿತ ಡಿಜಿಟಲ್ ಮತ್ತು ಸಂಪರ್ಕ ವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಜಿಯೋ ತನ್ನ ಆರಂಭದಿಂದಲೂ ಭಾರತದಲ್ಲಿ 50 ಬಿಲಿಯನ್ ಡಾಲರ್ ಗಳಷ್ಟು ಹೂಡಿಕೆ ಮಾಡಿದ್ದು, ಇದರೊಂದಿಗೆ ಹಲವು ಆ್ಯಪ್ ಗಳು ಮತ್ತು ಪ್ಲ್ಯಾಟ್ ಫಾರ್ಮ್ ಗಳನ್ನು ಹೊಂದಿದೆ.
ಇದನ್ನೂ ಓದಿ : 5ಜಿ ತಂತ್ರಜ್ಞಾನ: ಜೂಹಿ ಚಾವ್ಲಾ ಅರ್ಜಿ ವಜಾಗೊಳಿಸಿ 20 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್