Advertisement

Reliance: ರಿಲಯನ್ಸ್‌ ಇಂಡಸ್ಟ್ರೀಸ್‌ ಲಾಭ ಹೆಚ್ಚಳ

12:00 AM Oct 28, 2023 | Team Udayavani |

ಹೊಸದಿಲ್ಲಿ: ಸೆಪ್ಟಂಬರ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ನಿವ್ವಳ ಲಾಭ ಶೇ.27ರಷ್ಟು ಏರಿಕೆ ಕಂಡಿದ್ದು, 17,394 ಕೋಟಿ ರೂ.ಗೆ ತಲುಪಿದೆ. ತೈಲ ಮತ್ತು ಅನಿಲ ಉದ್ಯಮದಲ್ಲಿ ಆದ ಚೇತರಿಕೆಯೇ ನಿವ್ವಳ ಲಾಭ ಹೆಚ್ಚಳವಾಗಲು ಕಾರಣ ಎಂದು ಕಂಪೆನಿ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ 13,656 ಕೋಟಿ ರೂ. ಆಗಿತ್ತು.

Advertisement

ಇದೇ ವೇಳೆ, ರಿಲಯನ್ಸ್‌ ರಿಟೇಲ್‌ನ ಲಾಭವು ಶೇ.21ರಷ್ಟು ಏರಿಕೆಯಾಗಿ, 2,790 ಕೋಟಿ ರೂ.ಗೆ ತಲುಪಿದೆ. ಜುಲೈ-ಸೆಪ್ಟಂಬರ್‌ ಅವಧಿಯಲ್ಲಿ ಸಂಸ್ಥೆಯ ಕಾರ್ಯಾಚರಣ ಆದಾಯ 57,694 ಕೋಟಿ ರೂ.ಗೆ ಏರಿದೆ. ಇನ್ನು, ದೂರಸಂಪರ್ಕ ಸಂಸ್ತೆ ರಿಲಯನ್ಸ್‌ ಜಿಯೋ 5,058 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ.12ರಷ್ಟು ಏರಿಕೆ ಕಂಡುಬಂದಿದೆ. ಕಾರ್ಯಾಚರಣ ಆದಾಯವು ಶೇ.9.8 ಹೆಚ್ಚಳವಾಗಿ, 24,750 ಕೋಟಿ ರೂ.ಗೆ ತಲುಪಿರುವುದಾಗಿ ಕಂಪೆನಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next