ಮುಂಬಯಿ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆ ಅನೇಕ ಸಾಮಾಜಿಕ ಸಂಸ್ಥೆಗಳು ಸಹಾಯಕ್ಕಾಗಿ ಮುಂದೆ ಬರಲು ಪ್ರಾರಂಭಿಸಿದ್ದು, ಪ್ರತಿಷ್ಠಿತ ರಿಲಯನ್ಸ್ ಫೌಂಡೇಶನ್ ಮುಂಬಯಿಯಲ್ಲಿ 875 ಹೊಸ ಹಾಸಿಗೆಗಳನ್ನು ಒದಗಿಸಿದೆ.
ವರ್ಲಿಯ ನ್ಯಾಶನಲ್ ನ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಕೋವಿಡ್ ರೋಗಿಗಳಿಗೆ 650 ಹಾಸಿಗೆಗಳ ಸೌಲಭ್ಯವನ್ನು ರಿಲಯನ್ಸ್ ಫೌಂಡೇಶನ್ ಒದಗಿಸಲಿದೆ. ಸರ್ ಎಚ್. ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಕರೋನಾ ರೋಗಿಗಳಿಗೆ ಒಟ್ಟು 650 ಹಾಸಿಗೆಗಳನ್ನು ನಿರ್ವಹಿಸುತ್ತಿದೆ. 100ಕ್ಕೂ ಹೆಚ್ಚು ಐಸಿಯು ಹಾಸಿಗೆಗಳನ್ನು ಒದಗಿಸಲಾಗಿದ್ದು, ಈ ಹಾಸಿಗೆಗಳುಮೇ 15ರಿಂದ ಲಭ್ಯವಾಗಲಿವೆ ಎಂದು ಮೂಲಗಳು ತಿಳಿಸಿವೆ.
ಸೌಲಭ್ಯಗಳನ್ನು ನಿರ್ವಹಿಸಲು ರಿಲಯನ್ಸ್ ಫೌಂಡೇಶನ್ ವೈದ್ಯರು, ದಾದಿಯರು ಮತ್ತು ವೈದ್ಯಕೀಯೇತರ ಸಿಬಂದಿ ಸಹಿತ 500ಕ್ಕೂ ಹೆಚ್ಚು ವೈದ್ಯಕೀಯ ಸಿಬಂದಿಯನ್ನು ನಿಯೋಜಿಸಿದೆ. ಐಸಿಯು ಹಾಸಿಗೆಗಳು, ಕ್ವಾರಂಟೈನ್ ವಾರ್ಡ್ ಗಳು, ವೆಂಟಿಲೇಟರ್‌ಗಳು, ಎಲ್ಲ ಆರೋಗ್ಯ ಸೌಲಭ್ಯಗಳಿಗೆ ರಿಲಯನ್ಸ್ ಫೌಂಡೇಶನ್ ಜವಾಬ್ದಾರಿಯಾಗಿದೆ.ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆಕಳೆದ ವರ್ಷವೂ ಪ್ರತಿಷ್ಠಾನವು ಮುಂಬಯಿ ಮುನ್ಸಿಪಲ್ ಕಾರ್ಪೊರೇಶ ನ್‌ನ ಸಹಯೋಗದೊಂದಿಗೆ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ವಿಶೇಷವಾಗಿ 225 ಹಾಸಿಗೆಗಳನ್ನು ವ್ಯವಸ್ಥೆಗೊಳಿಸಿತ್ತು.
ಈ ವರ್ಷವೂ ರಿಲಯನ್ಸ್ ಸೆವೆನ್ ಹಿಲ್ಸ್ ಆಸ್ಪತ್ರೆ ಮತ್ತು ಎನ್‌ಎಸ್‌ಸಿಐನ ಕೋವಿಡ್ ಕೇಂದ್ರದ ಎಲ್ಲ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಿದೆ ಎಂದು ಪ್ರತಿಷ್ಠಾನ ತಿಳಿಸಿದೆ. ಎನ್‌ಎಸ್‌ಸಿಐ ಮತ್ತು ಸೆವೆನ್ ಹಿಲ್ಸ್ ಆಸ್ಪತ್ರೆಯ ಎಲ್ಲ ಕೊರೊನಾ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.ಲಕ್ಷಣ ರಹಿತ ರೋಗಿಗಳಿಗೆ ಪ್ರತ್ಯೇಕ ಆಸ್ಪತ್ರೆಬಾಂದ್ರಾ – ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಟ್ರೈಡೆಂಟ್ ಹೊಟೇಲ್ ಸ್ವಲ್ಪ ಪ್ರಮಾಣದ ರೋಗಲಕ್ಷಣಗಳನ್ನು ಹೊಂದಿರುವ ರೋಗಿ ಗಳಿಗೆ 100 ಹಾಸಿಗೆಗಳ ಸಾಮರ್ಥ್ಯ ವನ್ನು ಹೊಂದಿದ್ದು, ಬಿಎಂಸಿ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಲಕ್ಷಣರಹಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.
ಈ ಸೌಲಭ್ಯದ ನಿರ್ವಹಣೆಯನ್ನು ಸರ್ ಎಚ್. ಎನ್. ರಿಲಯನ್ಸ್ ಫೌಂಡೇಶನ್ ನಡೆಸಲಿದೆ. ಎನ್‌ಎಸ್‌ಸಿಐ, ಸೆವೆನ್ ಹಿಲ್ಸ… ಆಸ್ಪತ್ರೆ ಮತ್ತು ಬಿಕೆಸಿಯ ದಿ ಟ್ರೈಡೆಂಟ್‌ನಲ್ಲಿನ ತೀವ್ರ ನಿಗಾ ಘಟಕದಲ್ಲಿ 145 ಹಾಸಿಗೆಗಳು ಸಹಿತ ಒಟ್ಟು 875 ಹಾಸಿಗೆಗಳನ್ನು ಈಗ ರಿಲಯನ್ಸ್ ಫೌಂಡೇಶನ್ ನಿರ್ವಹಿಸಲಿದೆ.
ಕೊರೊನಾ ವಿರುದ್ಧಹೋರಾಡಲು ಉಪಕ್ರಮಗಳುಮುಂಬಯಿಯಲ್ಲಿ ಹೆಚ್ಚುತ್ತಿರುವ ಕೊರೊನಾ ರೋಗಿಗಳ ಹಿನ್ನೆಲೆಯಲ್ಲಿ ರಿಲಯನ್ಸ್ ಫೌಂಡೇಶನ್ ಸರಕಾರಕ್ಕೆ ಸಹಾಯ ಮಾಡಲು ಈ ಪ್ರದೇಶದಲ್ಲಿ ತನ್ನ ಕಾರ್ಯವನ್ನು ಚುರುಕುಗೊಳಿಸಿದೆ. ಮಹಾರಾಷ್ಟ್ರ ಸರಕಾರ ಮತ್ತು ಮುಂಬಯಿ ಮಹಾನಗರ ಪಾಲಿಕೆಯು ಸಹಕಾರವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದರೆ, ರಿಲಯನ್ಸ್ ಮುಂಬಯಿ ಯಲ್ಲಿ ಕೋವಿಡ್ ವಿರುದ್ಧ ಹೋರಾಡಲು ಉಪಕ್ರಮಗಳನ್ನು ಪ್ರಾರಂಭಿಸಿದೆ.