ಬೆಂಗಳೂರು: ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಅವಾರ್ಡ್ಸ್(SIIMA 2024) ನ ಮೊದಲ ದಿನದ ಕಾರ್ಯಕ್ರಮ ಶನಿವಾರ(ಸೆ.14ರಂದು) ಅದ್ಧೂರಿಯಾಗಿ ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ನಡೆದಿದೆ.
‘ಕಾಟೇರ’ ಸಿನಿಮಾ ಸು 8 ವಿಭಾಗಗಳಲ್ಲಿ,’ಸಪ್ತಸಾಗರದಾಚೆ ಎಲ್ಲೋ ಸೈಡ್-ಎ’ ಸಿನಿಮಾ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಅದರಂತೆ ಈ ಸಿನಿಮಾಗಳು ʼಸೈಮಾʼ ಪ್ರಶಸ್ತಿಯನ್ನು ನಾನಾ ವಿಭಾಗಗಳಲ್ಲಿ ಪಡೆದುಕೊಂಡಿದೆ.
ದಕ್ಷಿಣ ಭಾರತದ ಖ್ಯಾತ ಕಲಾವಿದರ ದಂಡೇ ಭಾಗಿಯಾಗಿದ್ದು, ಹತ್ತಾರು ಮನರಂಜನಾ ಕಾರ್ಯಕ್ರಮಗಳು ನಡೆಯಿತು. ಇದರೊಂದಿಗೆ ʼಸೈಮಾʼ ಪ್ರಶಸ್ತಿಯನ್ನು ನೀಡಲಾಗಿದೆ. ಮೊದಲ ದಿನ ಯಾವೆಲ್ಲ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ ಎನ್ನುವುದರ ಬಗೆಗಿನ ಪಟ್ಟಿ ಇಲ್ಲಿದೆ..
ಮೊದಲ ದಿನ ಕನ್ನಡ ಹಾಗೂ ತೆಲುಗು ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ವಿಶೇಷವೆಂದರೆ ತೆಲುಗಿನಲ್ಲೂ ಕನ್ನಡದ ಕಲಾವಿದರು ಕಮಾಲ್ ಮಾಡಿದ್ದಾರೆ.
ಕನ್ನಡ ಸಿನಿಮಾಗಳ ಪ್ರಶಸ್ತಿ:
ಅತ್ಯುತ್ತಮ ಸಿನಿಮಾ – ಕಾಟೇರ
ಅತ್ಯುತ್ತಮ ನಟ – ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೊ ಸೈಡ್ -ಎ)
ಅತ್ಯುತ್ತಮ ನಟಿ – ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ ಸೈಡ್ -ಎ)
ಅತ್ಯುತ್ತಮ ನಿರ್ದೇಶಕ – ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ ಸೈಡ್ -ಎ)
ಅತ್ಯುತ್ತಮ ನಟ (ಕ್ರಿಟಿಕ್) – ಡಾಲಿ ಧನಂಜಯ್ (ಗುರುದೇವ್ ಹೊಯ್ಸಳ)
ಅತ್ಯುತ್ತಮ ನಟಿ (ಕ್ರಿಟಿಕ್) – ಚೈತ್ರಾ ಆಚಾರ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ನಟ (ನೆಗೆಟಿವ್ ರೋಲ್) – ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಗಾಯಕ – ಕಪಿಲ್ (ಸಪ್ತ ಸಾಗರದಾಚೆ ಎಲ್ಲೊ)
ಅತ್ಯುತ್ತಮ ಹೊಸ ನಟಿ – ಆರಾಧನಾ (ಕಾಟೇರ)
ಅತ್ಯುತ್ತಮ ಸಂಗೀತ ನಿರ್ದೇಶಕ – ವಿ ಹರಿಕೃಷ್ಣ (ಕಾಟೇರ)
ಅತ್ಯುತ್ತಮ ಗಾಯಕಿ – ಮಂಗ್ಲಿ (ಕಾಟೇರ)
ಅತ್ಯುತ್ತಮ ಸಿನಿಮಾಟೊಗ್ರಫರ್ – ಶ್ವೇತ ಪ್ರಿಯ (ಕೈವ)
ಅತ್ಯುತ್ತಮ ಸಾಹಿತ್ಯ – ಡಾಲಿ ಧನಂಜಯ್ (ಟಗರುಪಲ್ಯ)
ಅತ್ಯುತ್ತಮ ಹಾಸ್ಯನಟ – ಅನಿರುದ್ಧ್ ಆಚಾರ್ (ಆಚಾರ್ ಆಂಡ್ ಕೋ)
ಅತ್ಯುತ್ತಮ ಭರವಸೆಯ ನಟಿ – ವೃಷಾ ಪಾಟೀಲ್ (ಲವ್)
ಅತ್ಯುತ್ತಮ ಹೊಸ ನಟ – ಶಿಶಿರ್ ಬೈಕಾಡಿ (ಡೇರ್ ಡೆವಿಲ್ ಮುಸ್ತಫಾ)
ಅತ್ಯುತ್ತಮ ಹೊಸ ನಿರ್ದೇಶಕ – ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು)
ಅತ್ಯುತ್ತಮ ಹೊಸ ನಿರ್ಮಾಣ ಸಂಸ್ಥೆ – ಅಭುವನಸ ಫಿಲಮ್ಸ್
ವರ್ಷದ ಅತ್ಯುತ್ತಮ ನಿರ್ಮಾಪಕ – ಪಿಬಿ ಸ್ಟುಡಿಯೋಸ್, ಅನ್ವಿತ್ ಸಿನಿಮಾಸ್
ಸಿನಿಮಾ ರಂಗದಲ್ಲಿ ಅತ್ಯುತ್ತಮ ಸೇವೆ – ನಟ ಶಿವರಾಜ್ ಕುಮಾರ್
ತೆಲುಗು ಸಿನಿಮಾಗಳ ಪ್ರಶಸ್ತಿ:
ಅತ್ಯುತ್ತಮ ನಟ – ನಾನಿ (ದಸರಾ)
ಅತ್ಯುತ್ತಮ ನಟಿ – ಕೀರ್ತಿ ಸುರೇಶ್ (ದಸರಾ)
ಅತ್ಯುತ್ತಮ ನಟ (ಕ್ರಿಟಿಕ್) – ಆನಂದ್ ದೇವರಕೊಂಡ (ಬೇಬಿ)
ಅತ್ಯುತ್ತಮ ನಟಿ (ಕ್ರಿಟಿಕ್) – ಮೃಣಾಲ್ ಠಾಕೂರ್ (ಹಾಯ್ ನಾನ್ನ)
ಅತ್ಯುತ್ತಮ ನಿರ್ದೇಶಕ – ಶ್ರೀಕಾಂತ ಒಡೆಲಾ (ದಸರಾ)
ಅತ್ಯುತ್ತಮ ನಿರ್ದೇಶಕ (ಕ್ರಿಟಿಕ್) – ಸಾಯಿ ರಾಜೇಶ್ (ಬೇಬಿ)
ಅತ್ಯುತ್ತಮ ನಟ (ನೆಗೆಟಿವ್ ರೋಲ್) – ದುನಿಯಾ ವಿಜಯ್ (ಭಗವಂತ್ ಕೇಸರಿ)
ಅತ್ಯುತ್ತಮ ಗಾಯಕ – ರಾಮ್ ಮಿರಿಯಾಲ (ಬಲಗಂ)
ಅತ್ಯುತ್ತಮ ಪೋಷಕ ನಟ – ದೀಕ್ಷಿತ್ ಶೆಟ್ಟಿ (ದಸರಾ)
ಅತ್ಯುತ್ತಮ ಪೋಷಕ ನಟಿ – ಕಿಯಾರಾ ಖನ್ನಾ (ಹೈ ನಾನ್ನ)
ಅತ್ಯುತ್ತಮ ಹೊಸ ನಿರ್ದೇಶಕ – ಶೌರ್ಯ (ಹೈ ನಾನ್ನ)
ಅತ್ಯುತ್ತಮ ಹೊಸ ನಟ – ಸಂಗೀತ್ (ಮ್ಯಾಡ್)
ಅತ್ಯುತ್ತಮ ಭರವಸೆಯ ನಟ – ಸುಮಂತ್ ಪ್ರಭಾಸ್ (ಮೇಮು ಫೇಮಸ್)