Advertisement

ಚರ್ಚೆ ಓಕೆ, ಜಗಳ ಯಾಕೆ?

07:29 PM Oct 14, 2020 | Suhan S |

ಸಾರಿ ಕೇಳಿದ್ರೆ ಎಲ್ಲಾ ಸರಿಹೋಗ್ತಿತ್ತು, ಈಗ ನೋಡಿ ಎಷ್ಟು ಜಗಳ ಆಯ್ತು ಎಂದು ಶ್ರೀಕಾಂತ್‌ ಹೇಳ್ತಾ ಇದ್ರೆ, ಶಿಲ್ಪಾಕೋಪದಿಂದ- “ಅಯ್ಯೋ ಮೇಡಂ, ಇವ್ರಕಥೆ ನಿಮಗೆ ಗೊತ್ತಿಲ್ಲ.ಕ್ಷಮೆ ಯಾಚಿಸಿದೆ ಅಂತ ಇಟ್ಕೊಳ್ಳಿ, ಸಾರಿ ಅಂದ್ರೆ ಆಗೋಯ್ತಾ, ತಪ್ಪು ತಿದ್ಕೋಬೇಕು’ ಅಂತ ಮತ್ತೆ ಗಲಾಟೆಗೆ ಬರ್ತಾರೆ ಅಂತ ಖಡಕ್ಕಾಗಿ ಹೇಳಿದರು.

Advertisement

ತರಕಾರಿ ತರಲು ನಾಲ್ಕು ವರ್ಷದ ಮಗನನ್ನು ಜೊತೆಗೆ ಕರೆದುಕೊಂಡು ಹೋಗಿದ್ದಲ್ಲದೆ,ಬಂದಮೇಲೆ ಸ್ನಾನ ಮಾಡದಿರುವುದು ಮಹಾ ತಪ್ಪು, ಅಂತ ಶ್ರೀಕಾಂತ್‌ ಪಟ್ಟಿಕೊಡ್ತಾ ಇದ್ರೆ,ಕಳೆದ ಬಾರಿ ಇವರೂ ಸ್ನಾನಮಾಡಿರಲಿಲ್ಲ ಮೇಡಂ ಅಂತ ಶಿಲ್ಪಾ, ಪ್ರತಿವಾದ ಮಂಡಿಸಿದರು. ಶ್ರೀಕಾಂತ್‌ ಮುಖ ಅವಮಾನದಿಂದ ಕುದ್ದುಹೋಯಿತು. ಗಂಡ- ಹೆಂಡತಿಈ ರೀತಿ ಬಾಲಿಶವಾಗಿ ಜಗಳವಾಡಿಕೊಂಡು ಬರುವುದು ನನಗೆ ಹೊಸತೇನಲ್ಲ. ಇಬ್ಬರ ವ್ಯಕ್ತಿತ್ವದಲ್ಲಿ ನ್ಯೂನತೆಗಳಿರುತ್ತದೆ. ಆದ್ದರಿಂದ ಚಿಕ್ಕ ಮಕ್ಕಳ ಹಾಗೆ ಜಗಳವಾಡುತ್ತಾರೆ.

ಶಿಲ್ಪಾನೂ ಕಡಿಮೆ ಏನಿಲ್ಲ. ಅತ್ತೆ-ಮಾವಕುಡಿದ ಲೋಟವನ್ನು ಸೋಪು ಹಾಕದೆ, ಬರೀ ನೀರಿನಲ್ಲಿ ಗಲಬರಿಸಿ ಇಟ್ಟರೆ, ಮುಖಕ್ಕೆ ಹೊಡೆದ ಹಾಗೆ ಮಾತನಾಡುತ್ತಾಳೆ. ತಾನುಕುಡಿದ ಲೋಟಕ್ಕೆ ಈ ನಿಯಮ ಇರುವುದಿಲ್ಲ. ಅತ್ತೆ-ಮಾವ ಒಳ್ಳೆಯವರು. ಹುಡುಗುತನದ ಸೊಸೆಯನ್ನು ಸುಧಾರಿಸಿಕೊಂಡು ಹೋಗುತ್ತಿದ್ದಾರೆ. ವ್ಯಕ್ತಿತ್ವದಲ್ಲಿ ನ್ಯೂನತೆ ಹೊಂದಿರುವವರು ಪೂರ್ವಾಗ್ರಹ ಪೀಡಿತರಾಗಿ, ಬೇಗ ಪ್ರಚೋದನೆ ಹೊಂದುತ್ತಾರೆ. ತೀವ್ರವಾದ ಎಮೋಷನಲ್‌ ಪ್ರತಿಕ್ರಿಯೆಯಿಂದಾಗಿ, ಅವರು ಸಂದರ್ಭವನ್ನು ಗ್ರಹಿಸುವ ರೀತಿ ಬದಲಾಗುತ್ತದೆ. ಪ್ರತೀಕಾರ (ಠಿಜಿಠಿ fಟ್ಟ ಠಿಚಠಿ) ಮನೋಭಾವ ಹೊಂದಿದ್ದರಂತೂ ಆರೋಪ- ಪ್ರತ್ಯಾರೋಪಗಳು ತೀಕ್ಷ್ಣವಾಗುತ್ತವೆ. ತಮ್ಮ ತಪ್ಪನ್ನು ಸಮರ್ಥಿಸಿಕೊಂಡು, ಜೊತೆಯವರ ತಪ್ಪನ್ನುಎತ್ತಿಹಿಡಿಯುತ್ತಾರೆ.

ಕೋವಿಡ್ ದಿಂದಎಲ್ಲರ ಜೀವನ ಶೈಲಿಯೂ ಬದಲಾಗಿದೆ. ಬದಲಾದ ಪರಿಸರಕ್ಕೆ ಒಗ್ಗಿಕೊಳ್ಳಲು, ಸ್ವಚ್ಛತೆಗೆ ಆದ್ಯತೆಕೊಡಲು ಇಂಥವರಿಗೆ ಕಿರಿಕಿರಿಯಾಗುತ್ತದೆ. ಚಿಕ್ಕ ಮಕ್ಕಳು ಮತ್ತು ವಯಸ್ಸಾದವರುಇದ್ದರೆಕೆಲಸವೂ ಹೆಚ್ಚು. ನಿಯಮಗಳು ಜಾಸ್ತಿಯಾಗಿ,ಕೆಲವೊಮ್ಮೆ ನಿಯಮದ ಉಲ್ಲಂಘನೆಯಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚುಕಾಳಜಿ ವಹಿಸುವ ದಂಪತಿ, ಇಂಥ ಸಂದರ್ಭದಲ್ಲಿ ತಾಳ್ಮೆಕಳೆದುಕೊಂಡು ಜಗಳಕ್ಕೆ ನಿಲ್ಲುತ್ತಾರೆ.ಕೌನ್ಸೆಲಿಂಗ್‌ಗೆ ಬಂದಿದ್ದ ಶಿಲ್ಪಾ- ಶ್ರೀಕಾಂತ್‌ ದಂಪತಿಯದ್ದೂ ಇದೇ ಥರದ ಕೇಸ್‌. ಮೊದಲಿಗೆ ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿಡಲು ಕ್ರಮಬದ್ಧ ಉಸಿರಾಟದ ಅಭ್ಯಾಸ ಮಾಡಿಸಿದೆ.ಕೆಲವು ಸಾಂದರ್ಭಿಕ ಚಿತ್ರಗಳಿಗೆ ದಂಪತಿಗಳಿಬ್ಬರೂ ವಿವರಣೆ ನೀಡಿದಾಗ ಅವರವರ ಪೂರ್ವಾಗ್ರಹ ಮನೋ ಚೌಕಟ್ಟು ಅವರಿಗೆ ಅರ್ಥವಾಯಿತು. ವಿರುದ್ಧಾತ್ಮಕ ಗ್ರಹಿಕೆ ಮನವರಿಕೆಯಾಯಿತು.

ಆನಂತರದ ದಿನಗಳಲ್ಲಿ ಕುಟುಂಬದಲ್ಲಿ ದಿನನಿತ್ಯದ ಶಿಸ್ತು ಪಾಲನೆಯಿಂದಕೆಲಸಕಡಿಮೆ ಯಾಗಿ,ಕಲಹವೂ ಕಡಿಮೆಯಾಯಿತು. ಮುಂದೆ ಯಾವುದೇ ವಿಚಾರವಿದ್ದರೂಅದನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಇಬ್ಬರೂ ಬಂದರು. ­

Advertisement

 

-ಡಾ. ಶುಭಾ ಮಧುಸೂದನ್,‌ ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next