Advertisement
ಜಲಾಶಯದಿಂದ ಹೊರ ಬಿಡಲಾಗುತ್ತಿರುವ ನೀರನ್ನು ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮೂಲಕ ಹರಿಸಿದ್ದರೆ ರೈತರ ಹೊಲ ಗದ್ದೆಗಳಿಗೆ ನೀರು ಪೂರೈಸುವುದರ ಜತೆಗೆ ಕೆರೆ ಕಟ್ಟೆಗಳು ತುಂಬಿ ಅಲ್ಲಿಂದ ಹರಿದ ನೀರು ನದಿ ಸೇರುತ್ತದೆ. ಆ ನೀರು ಕೂಡ ತಮಿಳುನಾಡನ್ನೇ ಸೇರುತ್ತದೆ. ಆದರೆ, ಕಬಿನಿ ಜಲಾಶಯದ ಅಧಿಕಾರಿಗಳು ಈ ಕುರಿತು ಗಮನ ಹರಿಸಿಲ್ಲ ಎಂಬುದು ರೈತರ ಆಕ್ರೋಶ. ಈ ಮಧ್ಯೆ, ನೀರು ಬಿಡುಗಡೆ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಶನಿವಾರ ನಂಜನಗೂಡಿನ ಕಬಿನಿ ನೀರಾವರಿ ನಿಗಮದ ಮುಂದೆ ರೈತರು ದಿಢೀರ್ ಪ್ರತಿಭಟನೆ ನಡೆಸಿದರು. ಇದೇ ವೇಳೆ, ತಿ.ನರಸೀಪುರದಲ್ಲಿರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಸದಸ್ಯರು ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇಗುಲದ ಎದುರಿನ ಕಪಿಲಾ ನದಿಗೆ ಇಳಿದು ಪ್ರತಿಭಟನೆ ನಡೆಸಿದರು. Advertisement
ತ.ನಾಡಿಗೆ ನೀರು ಬಿಡುಗಡೆ: ರೈತರ ಆಕ್ರೋಶ; ರಾಜ್ಯದ ರೈತರ ಕಡೆಗಣನೆ
08:00 AM Jul 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.