Advertisement

“ಮಹಾಪ್ರಳಯ’ದೃಶ್ಯ ಕವನ ಬಿಡುಗಡೆ

04:18 PM Jul 13, 2021 | Team Udayavani |

ಕಲಬುರಗಿ: ಖ್ಯಾತ ಆಥೋಪೆಡಿಕ್ಸ್‌ ಸರ್ಜನ್‌ ಡಾ.ಎಸ್‌.ಎಸ್‌.ಗುಬ್ಬಿ ವಿರಚಿತ “ಮಹಾಪ್ರಳಯ’ ದೃಶ್ಯಕವನ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಗರದ ಡಾ. ಎಸ್‌. ಎಂ. ಪಂಡಿತ ರಂಗಮಂದಿರದಲ್ಲಿ ನಡೆದ ರೈತರಿಗೆ ಸಾಲ ವಿತರಣಾ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಿದರು.

Advertisement

ಡಿಸಿಎಂ ಗೋವಿಂದ ಕಾರಜೋಳ, ಸಂಸದ ಉಮೇಶ ಜಾಧವ್‌, ಸಚಿವರಾದ ಬಿ.ಸೋಮಶೇಖರ, ಮುರುಗೇಶ ನಿರಾಣಿ, ಭೈರತಿ ಬಸವರಾಜ್‌ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷರು ಮತ್ತು ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ಪಾಟೀಲ್‌ ತೇಲ್ಕೂರ, ಶಾಸಕರಾದ ದತ್ತಾತ್ರೇಯ ಪಾಟೀಲ್‌ ರೇವೂರ, ಬಸವರಾಜ ಮತ್ತಿಮಡು ಸೇರಿದಂತೆ ಮೊದಲಾದ ಮುಖಂಡರು ಉಪಸ್ಥಿತರಿದ್ದರು.

ಕಲಬುರಗಿಯ ಗುಬ್ಬಿ ಪ್ರಕಾಶನದಿಂದ ಪ್ರಕಟಗೊಂಡ 64 ಪುಟಗಳ “ಮಹಾಪ್ರಳಯ’ ಕವನ ಸಂಕಲನದಲ್ಲಿ ನೆರಹಾವಳಿಯ ದೃಶ್ಯಕವನ ಆಕರ್ಷಕ ಬಣ್ಣದ ಚಿತ್ರಗಳೊಂದಿಗೆ ಓದುಗರ ಆಸಕ್ತಿ ತಣಿಸುತ್ತದೆ. ಮನುಷ್ಯನ ಮಿತಿಮೀರಿದ ಸ್ವಾರ್ಥ, ದುರಾಸೆ-ದುರಂಹಕಾರಕ್ಕೆ ಪ್ರತ್ಯುತ್ತರ ಎನ್ನುವಂತೆ ಮುನಿಸಿಕೊಂಡ ಪ್ರಕೃತಿಯ ಈ ಮಹಾಪ್ರಳಯವನ್ನು ತನ್ನದೆ ಆದ ವೈಶಿಷ್ಠ ಪೂರ್ಣ ಕಿರುಗವನಗಳಲ್ಲಿ ಹಿಡಿದಿಟ್ಟ ಡಾ.ಎಸ್‌. ಎಸ್‌.ಗುಬ್ಬ ಅವರ ಕಾವ್ಯಶೈಲಿ ಹಾಗೂ ಅತ್ಯಾಕರ್ಷಕ ಚಿತ್ರಗಳ ಜೋಡಣೆಯ ಕಲಾವಂತಿಕೆ ನಿಜಕ್ಕೂ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ ಕವಿ, ಲೇಖಕ, ಡಾ.ಎಸ್‌. ಎಸ್‌.ಗುಬ್ಬಿ ಅವರ “ಮಹಾಪ್ರಳಯ’ ದೃಶ್ಯಕವನವನ್ನು ಮೆಚ್ಚಿ ಡಾ.ಪಿ.ಎಸ್‌. ಶಂಕರ, ಟಿ.ವಿ.ಶಿವಾ ನಂದನ್‌, ಡಾ.ಸದಾನಂದ ಪೆರ್ಲ, ಡಾ.ಸ್ವಾಮಿರಾವ್‌ ಕುಲಕರ್ಣಿ, ಡಾ.ಶಶಿ ಶೇಖರ ರೆಡ್ಡಿ, ಎಸ್‌.ಎಸ್‌.ಹಿರೇಮಠ ಸೇರಿದಂತೆ ಮೊದಲಾದವರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next