Advertisement

ರಬಕವಿ-ಬನಹಟ್ಟಿ: ರೈತರ ಕಬ್ಬಿನ ಬಿಲ್ ಬಿಡುಗಡೆ

07:24 PM Jan 30, 2022 | Team Udayavani |

ರಬಕವಿ-ಬನಹಟ್ಟಿ: ತೇರದಾಳದ ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಹಣ ರೂ. 21 ಕೋಟಿ 80 ಲಕ್ಷ ಬಿಡುಗಡೆಯಾಗಿದೆ ಎಂದು ರೈತ ಮುಖಂಡ ಹೊನ್ನಪ್ಪ ಬಿರಡಿ ತಿಳಿಸಿದರು.

Advertisement

ಅವರು ಭಾನುವಾರ ಪತ್ರಿಕೆಯ ಜೊತೆಗೆ ಮಾತನಾಡಿ, ಮೂರು ವರ್ಷಗಳ ಹಿಂದೆ ಈ ಭಾಗದ 1580 ಜನ ರೈತರು ತೇರದಾಳದ ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ್ದರು. ಆದರೆ ಹಲವಾರು ಸಮಸ್ಯೆಗಳಿಂದ ರೈತರ ಬಿಲ್ ಪಾವತಿಯಾಗಿರಲಿಲ್ಲ. ಈ ಕುರಿತು ಮೂರು ವರ್ಷಗಳ ಕಾಲ ರೈತರು ತೀವ್ರ ಹೋರಾಟ ಮಾಡಿದ್ದರು. ಅದಕ್ಕಾಗಿ ರೈತರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಗೋಳ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಸೇರಿದಂತೆ ಈ ಭಾಗದ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದರು.

ಈಗ ಅಪೆಕ್ಸ್ ಬ್ಯಾಂಕನಿಂದ ಬಿಡುಗಡೆಯಾದ ಹಣ ಜಮಖಂಡಿಯ ಉಪವಿಭಾಗಾಧಿಕಾರಿಗಳ ಖಾತೆಗೆ ಜಮೆಯಾಗಿದೆ ಎಂದು ರೈತ ಮುಖಂಡ ಶ್ರೀಕಾಂತ ಘೂಳನ್ನವರ ತಿಳಿಸಿದರು.

ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮತ್ತು ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ರೈತರ ಕಬ್ಬಿನ ಪಾವತಿಯಾಗಿದೆ. ಶಾಸಕರು ಅಪೆಕ್ಸ್ ಬ್ಯಾಂಕ್ನ್ ನಿರ್ದೇಶಕರ ಜೊತೆಗೆ ಹಲವು ಬಾರಿ ಈ ವಿಷಯ ಕುರಿತು ಚರ್ಚೆ ಮಾಡಿದ್ದರು ಎಂದು ರೈತ ಮುಖಂಡ ಗಂಗಾಧರ ಮೇಟಿ ತಿಳಿಸಿದರು.

ಫೆ. 2ರಂದು ರಬಕವಿಯ ನಿರೀಕ್ಷಣಾ ಮಂದಿರದಲ್ಲಿ ಕಬ್ಬು ಪೂರೈಸಿದ ರೈತರ ಸಭೆಯನ್ನು ಕರೆಯಲಾಗಿದೆ. ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರು ಅಂದು ತಮ್ಮ ಬ್ಯಾಂಕ್ ಪಾಸ್‌ಬುಕ್, ಆಧಾರ ಕಾರ್ಡ್ ಮತ್ತು ಕಬ್ಬು ಪೂರೈಸಿದ ತೂಕದ ಚೀಟಿಗಳನ್ನು ತೆಗೆದುಕೊಂಡು ಬರಬೇಕು ಎಂದು ರೈತ ಮುಖಂಡರು ತಿಳಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಸುಭಾಸ ಸಿರಬೂರ, ಗಂಗಾಧರ ಮೇಟಿ, ಭೀಮಶಿ ಕರಿಗೌಡರ, ಶಿವಪ್ಪ ಹೋಟಕರ್, ರಾಜು ಲೋಕನ್ನವರ, ಜಿನ್ನಪ್ಪ ಲೋಕನ್ನವರ, ಲಕ್ಷ್ಮಣ ಬ್ಯಾಳಿ, ಪರಮಾನಂದ ಸವದಿ, ರಮೇಶ ಸೊನೋನೆ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next