Advertisement

ಶೀಘ್ರದಲ್ಲಿ ಎರಡನೇ ಪಟ್ಟಿ ಬಿಡುಗಡೆ, ಊಹಾಪೋಹಗಳಿಗೆ ಪ್ರತಿಕ್ರಿಯಿಸಲ್ಲ: ಸಚಿವ ಪ್ರಹ್ಲಾದ ಜೋಶಿ

12:22 PM Mar 11, 2024 | Team Udayavani |

ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ವ್ಯಕ್ತಿ ಕಾಂಗ್ರೆಸ್ ಗೆ ಬಹಳ ಹತ್ತಿರದವನಾಗಿದ್ದಾನೆ. ಕಾರಣ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ ಹುಸೇನ ವೈಯಕ್ತಿಕವಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸಭ್ಯತೆಗೆ ನಾಸೀರ ಕ್ಷಮೆ ಯಾಚಿಸಬೇಕು. ಅವರ ಹಿಂಬಾಲಿಕರು ಪಾಕ್ ಪರ ಘೋಷಣೆ ಕೂಗಿದರೂ ಸುಮ್ಮನಿರುವುದು ಪರೋಕ್ಷವಾಗಿ ಸಹಕಾರ ನೀಡಿದ್ದಾರೆ ಎಂಬುವುದು ಸ್ಪಷ್ಟವಾಗುತ್ತದೆ. ಕ್ಷಮೆ ಕೇಳುವವರೆಗೂ ಪ್ರಮಾಣ ವಚನ ನೀಡಬಾರದು ಎಂದರು.

ಬೆಂಗಳೂರಿನ ದಿ ರಾಮಶ್ವೇರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟವು ಕಾಂಗ್ರೆಸ್ ನ ಬೇಜವಾಬ್ದಾರಿ ಆಡಳಿತವಾಗಿದೆ. ಎನ್ ಐಎ ತನಿಖೆ ನೀಡಿದ್ದು, ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದರು.

ಲೋಕಸಭಾ ಚುನಾವಣೆಗೆ ಟಿಕೆಟ್‌ ಹಂಚಿಕೆ ಬಗ್ಗೆ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಿದ್ದಾರೆ. ಶೀಘ್ರದಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಊಹಾಪೋಹಗಳಿಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.

ಸರಿಯಾದ ದಾಖಲೆ ಕೊಡಲಾಗದ ಕಾರಣ ರಾಜ್ಯಕ್ಕೆ ನರೇಗಾ ಅನುದಾನ ಬಂದಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟತೆ ನೀಡಬೇಕು. ಸೂಕ್ತ ದಾಖಲೆ ನೀಡಬೇಕು. ಕೆಲವೆಡೆ ಗುತ್ತಿಗೆದಾರರಿಗೆ ನೀಡಿದ್ದಿದೆ. ನರೇಗಾ ಯೋಜನೆ ಬಹಳ ಮಹತ್ವದಾಗಿದೆ. ಇದರಲ್ಲಿ ಯಾವುದೇ ಅನುದಾನ ಬಾಕಿ ಉಳಿಸಿಕೊಳ್ಳಲು ಆಗುವುದಿಲ್ಲ. ಕೆಲಸ ಮಾಡಿದಂತೆ ಅನುದಾನ ಬಿಡುಗಡೆಯಾಗುತ್ತದೆ ಎಂದರು.

Advertisement

ಕಳಸಾ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ನೀಡಿಲ್ಲ. ಬಂಡೂರಿ ಯೋಜನೆ ಬಗ್ಗೆ ಹುಲಿ ಸಂರಕ್ಷಣಾ ಮಂಡಳಿಯ ಮಾಹಿತಿ ಸರಿಯಾಗಿ ಕೊಟ್ಟಿಲ್ಲ. ಕೊಡಲು ನಾನು ಮತ್ತು ಕೇಂದ್ರ ಸರ್ಕಾರ ಹೇಳಿದೆ. ನಾವು ಸಹಕಾರ ನೀಡುತ್ತೇವೆ. ಕಾಂಗ್ರೆಸ್ ಇಲ್ಲಿವರೆಗೂ ಮಹದಾಯಿ ಯೋಜನೆಗೆ ಅಡ್ಡಗಾಲು ಹಾಕುತ್ತ ಬಂದಿದೆ ಎಂದು ಆರೋಪಿಸಿದರು.

ಹುಬ್ಬಳ್ಳಿಯವರಾದ ಹಾಗೂ ಪದ್ಮಶ್ರೀ ಪುರಸ್ಕೃತ ಸುಧಾಮೂರ್ತಿ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನ ಮಾಡಿರುವುದು ಖುಷಿಯಾಗಿದೆ. ಅವರು ಸರಳ ಬದುಕಿಗೆ ಖ್ಯಾತಿ ಪಡೆದಿದ್ದಾರೆ. ಅವರಿಗೆ ಈ ಸ್ಥಾನ ನೀಡಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಮಹಿಳಾ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿಯವರು ಎಲ್ ಪಿಜಿ ಸಿಲಿಂಡರ್ ಬೆಲೆ ಕಡಿಮೆ ಮಾಡಿದ್ದು ಬಡವರ ಹಾಗೂ ಮಧ್ಯಮ ವರ್ಗದವರಿಗೆ ಒಳ್ಳೆಯದಾಗಿದೆ. ವಿದೇಶಗಳಲ್ಲಿ ಎಲ್ಲ ದರ ಏರಿದೆ. ಆದರೆ ದೇಶದಲ್ಲಿ ಪ್ರಧಾನಿ ದೊಡ್ಡ ಪ್ರಮಾಣದ ಇಳಿಕೆ ಮಾಡಿದ್ದು ಸ್ವಾಗತಾರ್ಹ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next