Advertisement

ಕಂಪು ಕನ್ನಡ ಶಾಲೆಯ ಲಾಂಛನ ಬಿಡುಗಡೆ

02:04 PM Nov 28, 2020 | Adarsha |

ಯುಎಸ್‌ಎ: ನಾರ್ತ್‌ ಟೆಕ್ಸಾಸ್‌ನ ಮಲ್ಲಿಗೆ ಕನ್ನಡ ಸಂಘದಿಂದ ಸೆಪ್ಟಂಬರ್‌ನಲ್ಲಿ ಪ್ರಾರಂಭಗೊಂಡ ಕಂಪು ಕನ್ನಡ ಶಾಲೆಯ ಲಾಂಛನವನ್ನು  ಸಂಘದ ಅಧ್ಯಕ್ಷ ಕೇಶವ ಪ್ರಸಾದ್‌ ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದರು.

Advertisement

ಈ ಸಂದರ್ಭದಲ್ಲಿ  ಮಾತನಾಡಿದ ಅವರು, ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು  ಅದ್ಧೂರಿಯಾಗಿ ಮಾಡುವ ಉದ್ದೇಶವಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಅನಿವಾರ್ಯವಾಗಿ ವರ್ಚುವಲ್‌ ಮೂಲಕ ಮಾಡಬೇಕಾಯ್ತು ಎಂದು ತಿಳಿಸಿದರು.

ಕಂಪು ಕನ್ನಡ ಶಾಲೆಯ ಪ್ರಗತಿಯ ಬಗ್ಗೆ ಈ ಸಂದರ್ಭದಲ್ಲಿ ವಿವರಿಸದ ಅವರು,  ಪ್ರಸ್ತುತ ಶಾಲೆಯಲ್ಲಿ 80 ವಿದ್ಯಾರ್ಥಿಗಳಿದ್ದು, 25 ಸ್ವಯಂ ಸೇವಕ ಶಿಕ್ಷಕರಿದ್ದಾರೆ. ಶಾಲೆಯಲ್ಲಿ  ಕನ್ನಡ ಪ್ರಾಧಿಕಾರದ ಪಠ್ಯಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.

ಕಂಪು ಕನ್ನಡ ಶಾಲೆ ಮಾಡಿದ ಕಂಪು ಕಲರವ ವೀಡಿಯೋ ಸರಣಿಯಲ್ಲಿ  ಭಾಗವಹಿಸಿದ ಮಕ್ಕಳ ವೀಡಿಯೋವನ್ನು ಅಕ್ಕ ಮತ್ತು ನಾವಿಕ ಕನ್ನಡ ಸಮ್ಮೇಳನಗಳಿಗೆ ಕಳುಹಿಸಿಕೊಟ್ಟಿದ್ದು ಅದರಲ್ಲಿ ಹೆಚ್ಚಿನ ಪ್ರಶಂಸೆಗೆ ಪಾತ್ರವಾಗಿತ್ತು ಎಂದು ತಿಳಿಸಿದರು.

Advertisement

ಕಂಪು ಕನ್ನಡ ಶಾಲೆಯ ಲಾಂಛನಕ್ಕಾಗಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ಹಲವಾರು ಮಂದಿ ಇದರಲ್ಲಿ  ಪಾಲ್ಗೊಂಡಿದ್ದರು. ಇದರಲ್ಲಿ ಅನಘಾ ಗಿರೀಶ್‌ ಚಿತ್ರಿಸಿದ ಲಾಂಛನ ಆಯ್ಕೆಯಾಗಿದ್ದು, ಇದನ್ನೇ ಮುಂದೆ ಕಂಪು ಕನ್ನಡ ಶಾಲೆಯ ಲಾಂಛನವಾಗಿ ಬಳಸಲಾಗುವುದು ಎಂದು ಕೇಶವ ಪ್ರಸಾದ್‌ ತಿಳಿಸಿದರು.

ಈ ಸಂದರ್ಭದಲ್ಲಿ  ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದ ಚೇರ್ಮನ್‌ ವತ್ಸಾ ರಾಮನಾಥನ್‌, ಬೋರ್ಡ್‌ ಆಫ್ ಟ್ರಸ್ಟಿ  ಮೀನಾ ಭಾರದ್ವಾಜ್‌, ಮಧು ಶಾಸ್ತ್ರೀ, ಜಯಶ್ರೀ ಮೂರ್ತಿ ಹಾಗೂ  ಮಲ್ಲಿಗೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಕಂಪು ಕನ್ನಡ ಶಾಲೆ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next