Advertisement

CBC: ಡಿಜಿಟಲ್‌ ಜಾಹೀರಾತು ನೀತಿ ಬಿಡುಗಡೆ

09:11 PM Nov 10, 2023 | Team Udayavani |

ನವದೆಹಲಿ: ಪ್ರಸ್ತುತ ಕೇಂದ್ರ ಸರ್ಕಾರ ಪತ್ರಿಕೆ, ಟೀವಿವಾಹಿನಿಗಳು ಜಾಹೀರಾತಿಗೆ ತನ್ನದೇ ಆದ ಮಾನದಂಡ, ದರಗಳನ್ನು ಹೊಂದಿದೆ. ಈಗ ಡಿಜಿಟಲ್‌ ಮಾಧ್ಯಮ ಪ್ರಬಲಗೊಂಡಿದೆ. ಹಾಗಾಗಿ ಅಲ್ಲಿ ಜಾಹೀರಾತುಗಳನ್ನು ನೀಡಲು, ಪ್ರಚಾರ ಅಭಿಯಾನಗಳನ್ನು ನಡೆಸಲು, ಕೇಂದ್ರ ಸರ್ಕಾರ ಡಿಜಿಟಲ್‌ ಜಾಹೀರಾತು ನೀತಿಯನ್ನು ಬಿಡುಗಡೆ ಮಾಡಿದೆ.

Advertisement

ಅದರ ಪ್ರಕಾರ ತಿಂಗಳಿಗೆ ಕನಿಷ್ಠ 2.5 ಲಕ್ಷ ಬಳಕೆದಾರರನ್ನು ಹೊಂದಿರುವ ವೆಬ್‌ಸೈಟ್‌ಗಳು, ಇತರೆ ವೇದಿಕೆಗಳಾದ ಒಟಿಟಿಗಳು, ಪಾಡ್‌ಕಾಸ್ಟ್‌ಗಳು ತಮ್ಮ ಹೆಸರನ್ನು ಸಿಬಿಸಿ (ಕೇಂದ್ರೀಯ ಸಂವಹನ ಮಂಡಳಿ)ಯಲ್ಲಿ ನೋಂದಾಯಿಸಿಕೊಳ್ಳಬಹುದು. ಹಾಗೆಯೇ ಇದೇ ಮೊದಲ ಬಾರಿಗೆ ಮೊಬೈಲ್‌ ಆ್ಯಪ್‌ಗ್ಳಲ್ಲೂ ಸಿಬಿಸಿ ಪ್ರಚಾರ ನಡೆಸಲು ಅನುವಾಗಿದೆ.

ಹೊಸ ಪ್ರಚಾರ ನೀತಿಯಲ್ಲಿ ಬೆಲೆಗಳನ್ನು ತಿಳಿದುಕೊಳ್ಳುವುದಕ್ಕೆ ಬಿಡ್ಡಿಂಗ್‌ ಮಾಡಲು ಅವಕಾಶವಿದೆ. ಹೀಗೆ ತಿಳಿದುಕೊಳ್ಳಲ್ಪಟ್ಟ ಬೆಲೆಗಳು ಮುಂದಿನ ಮೂರು ವರ್ಷದವರೆಗೆ ಚಾಲ್ತಿಯಲ್ಲಿರುತ್ತವೆ. ಅರ್ಹ ಸಂಸ್ಥೆಗಳಿಗೆ ಅವು ಅನ್ವಯವಾಗುತ್ತವೆ. ಟ್ರಾಯ್‌ನ ಮಾಹಿತಿ ಪ್ರಕಾರ ಪ್ರಸ್ತುತ ಭಾರತದಲ್ಲಿ 88 ಕೋಟಿ ಅಂತರ್ಜಾಲ ಬಳಕೆದಾರರಿದ್ದಾರೆ. 117.2 ಕೋಟಿ ಮಂದಿ ದೂರಸಂಪರ್ಕ ಹೊಂದಿದ್ದಾರೆ. ಹೀಗಾಗಿ ಅಂತರ್ಜಾಲದ ಮೂಲಕ ಜಾಹೀರಾತು ನೀಡಲು ಸರ್ಕಾರ ಮುಂದಾಗಿರುವುದು, ಅದಕ್ಕೊಂದು ನೀತಿ ರೂಪಿಸಿರುವುದು ಸಕಾಲಿಕವೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next